Kannada Astrology: ನೇರ ಚಾಲನೆ ಕೊನೆಗೂ ಆರಂಭಿಸುತ್ತಿರುವ ಗುರು: ಏನು ಮಾಡದೆ ಇದ್ದರೂ, ಈ ರಾಶಿಗಳ ಎಲ್ಲಾ ಕಷ್ಟಗಳು ಮುಗಿದು, ಅದೃಷ್ಟ ಬರುತ್ತದೆ.
Kannada Astrology: ಜ್ಯೋತಿಷ್ಯದ ನಂಬಿಕೆಗಳ ಅನುಸಾರ ಇದೆ ಜುಲೈ 29ರಂದು ಗುರು ಗ್ರಹವು ಮೀನ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಿದೆ. ಈಗ ಈ ಚಲನೆ ನವೆಂಬರ್ 24ರಂದು ಬದಲಾಗಲಿದೆ. ನವೆಂಬರ್ 24ರಂದು ದೇವತೆಗಳ ಗುರುವೆಂದು ಪರಿಗಣಿತವಾದ ಗುರುಗ್ರಹವು ತನ್ನ ರಾಶಿಯನ್ನು ಬದಲಾಯಿಸಿ, ಮೀನ ರಾಶಿಯನ್ನು ಮುಂಜಾನೆ 4:36 ಕ್ಕೆ ಪ್ರವೇಶಿಸುತ್ತಿದ್ದಾನೆ. ಗುರು ಗ್ರಹವನ್ನು ಶುಭ, ವಿವಾಹ, ಸಂಪತ್ತು, ಯಶಸ್ಸು, ಪ್ರಗತಿ, ಉದ್ಯೋಗ, ಶಿಕ್ಷಣ, ಆರೋಗ್ಯ, ಏಳಿಗೆ ಇತ್ಯಾದಿಗಳ ಸೂಚಕ ಎಂದು ನಂಬಲಾಗಿದೆ. ಗುರು ಗ್ರಹದ ಕೃಪೆಯಿಂದಾಗಿ ಒಳ್ಳೆಯ ಫಲಾಫಲಗಳು ಲಭಿಸುತ್ತದೆ. ಕೆಳಗಿನ ಆರು ರಾಶಿಯ ಜನರಿಗೆ ಒಳ್ಳೆಯ ಶುಭಫಲಗಳು ಲಭಿಸಲಿವೆ. ಯಾವೆಲ್ಲ ರಾಶಿಯ ಜನರಿಗೆ ಇದು ಅದೃಷ್ಟ ಎಂದು ಇಲ್ಲಿ ಹೇಳಲಾಗಿದೆ.
ಕುಂಭ ರಾಶಿ: ಈ ಸಂಚಾರ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಲಾಭ ತಂದು ಕೊಡಲಿದೆ. ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಲು ಅನುಕೂಲವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ವ್ಯಾಪಾರಸ್ಥರಿಗೆ ಪ್ರಯಾಣ ಒದಗಿ ಬರಲಿದೆ, ಉದ್ಯೋಗದ ಕಾರಣಕ್ಕೆ ಅವರು ಪ್ರಯಾಣ ಬೆಳೆಸಬೇಕಾಗುತ್ತದೆ. ಇದು ಶುಭಕರವಾಗಿರಲಿದೆ.
ವೃಶ್ಚಿಕ ರಾಶಿ: ವಾಹನ, ಆಸ್ತಿ ಖರೀದಿಗೆ ಮನಸ್ಸು ಮಾಡುವ ಸಾಧ್ಯತೆ. ಹೊಸ ಆದಾಯದ ಮೂಲಗಳು ಹುಡುಕಿ ಬರಲಿವೆ. ಲಾಭಾಂಶ ಹೆಚ್ಚಲಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸಲಿದ್ದಾರೆ.
ವೃಷಭ ರಾಶಿ: ನಿರೀಕ್ಷಿತ ಯಶಸ್ಸು ದೊರೆಯಲಿದೆ. ಕೆಲಸ ಹುಡುಕುತ್ತಿರುವವರಿಗೆ ಉದ್ಯೋಗ ಭಾಗ್ಯ ಒದಗಿ ಬರಲಿದೆ. ಆಡಳಿತ ಹಾಗೂ ಸರ್ಕಾರಿ ವೃತ್ತಿಯಲ್ಲಿರುವವರು ಸಕಾರಾತ್ಮಕ ಯಶಸ್ಸು ಹೊಂದಲಿದ್ದಾರೆ. ಕಚೇರಿಯಲ್ಲಿ ಒಟ್ಟಿಗೆ ಕೆಲಸ ಮಾಡುವವರು, ಉನ್ನತ ಅಧಿಕಾರಿಗಳ ಜೊತೆಗೆ ಬಾಂಧವ್ಯ ವೃದ್ಧಿಸಲಿದೆ. ಈ ರಾಶಿಯವರಿಗೆ ನಿರೀಕ್ಷಿತ ಯಶಸ್ಸು ಸಿಗಲಿದೆ.
ಕಟಕ ರಾಶಿ: ಉದ್ಯೋಗಿಗಳ ಸಂಬಳ ಏರಿಕೆ. ಮನೆ, ಕಾರು ಸೇರಿದಂತೆ ದೊಡ್ಡ ಮೊತ್ತದ ಕೊಳ್ಳುವಿಕೆ ಸಾಧ್ಯತೆ. ಬೆಲೆ ಬಾಳುವ ವಸ್ತುಗಳ ಖರೀದಿ ಮಾಡಲಿದ್ದೀರಿ. ಆರ್ಥಿಕ ಬಲ ಹೆಚ್ಚಲಿದೆ. ವೃತ್ತಿ ವ್ಯಾಪಾರದಲ್ಲಿ ದೊಡ್ಡ ಲಾಭ ದೊರೆಯಲಿದೆ.
ಕನ್ಯಾ ರಾಶಿ: ನೀವು ಹೊಸ ಒಪ್ಪಂದಕ್ಕೆ ಸಹಿ ಹಾಕಬಹುದು. ನಿಮ್ಮ ಹೊಸ ಯೋಜನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಮದುವೆ ನಿಶ್ಚಯವಾಗಬಹುದು. ನಿಮ್ಮ ಬಹು ನಿರೀಕ್ಷಿತ ಕೆಲಸ ಕೈಗೂಡಲಿದೆ. ಹೊಸ ಕೆಲಸ ದಕ್ಕಲಿದೆ. ಬಡ್ತಿ, ಗೌರವ ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
Comments are closed.