Kannada Astrology: ನೀವು ಉಗುರು ಕತ್ತರಿಸುವಾಗ ಈ ದಿನ ಮಾಡಿ, ಸಾಲದಿಂದ ದೂರ ಆಗಿ, ನೀವೇ ಬೇರೆಯವರಿಗೆ ಸಾಲ ಕೊಡುವಷ್ಟು ಶ್ರೀಮಂತರಾಗುತ್ತೀರಿ.
Kannada Astrology: ವಿಜ್ಞಾನ ಹೇಳುವಂತೆ ಉಗುರುಗಳು ಸತ್ತ ಜೀವಕೋಶಗಳಿಂದ ಉತ್ಪತ್ತಿಯಾಗುತ್ತದೆ. ಜೊತೆಗೆ ಉಗುರುಗಳು ಒಂದು ರೀತಿ ಸೌಂದರ್ಯ ಹೆಚ್ಚಿಸುತ್ತದೆ ಎಂದು ಹೇಳಬಹುದು. ಇದೇ ಕಾರಣದಿಂದಾಗಿ ನೈಲ್ ಆರ್ಟ್, ನೈಲ್ ಕೇರ್ ಈ ರೀತಿಯ ಕೆಲಸಗಳು ಸಹ ಶುರುವಾಗಿದೆ. ಉಗುರುಗಳು ಕೂಡ ನಮ್ಮ ಅಂದವನ್ನು ಹೆಚ್ಚಿಸುತ್ತದೆ. ಹಾಗಾಗಿ ಅವುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತದೆ. ಇದಲ್ಲದೆ ಉಗುರುಗಳನ್ನು ಸರಿಯಾದ ದಿನ ಕತ್ತರಿಸಬೇಕಂತೆ. ಯಾವ ಯಾವುದೋ ದಿನ ಕತ್ತರಿಸಿದರೆ ಶನಿದೇವ ಕೋಪಗೊಳ್ಳುತ್ತಾನೆ. ಏಕೆಂದರೆ ಶನಿದೇವನಿಗೂ ಉಗುರುಗಳಿಗೆ ಸಂಬಂಧ ಇದೆ ಎನ್ನಲಾಗುತ್ತದೆ. ಉಗ್ರನನ್ನು ಯಾವ ದಿನ, ಯಾವ ಸಮಯದಂದು ಕತ್ತರಿಸಬೇಕು ಎನ್ನುವುದನ್ನು ತಿಳಿದುಕೊಂಡಿರಬೇಕು. ಏಕೆಂದರೆ ಯಾವುದೋ ದಿನ ಉಗುರನ್ನು ಕತ್ತರಿಸುವುದು ಜ್ಯೋತಿಷ್ಯ ಶಾಸ್ತ್ರ ಒಪ್ಪುವುದಿಲ್ಲ. ಜ್ಯೋತಿಷ್ಯದಲ್ಲಿ ಯಾವ ದಿನಾಂಕದಂದು, ಯಾವ ಸಮಯದಂದು ಉಗುರುಗಳನ್ನು ಕತ್ತರಿಸುವುದರಿಂದ ಒಳ್ಳೆಯದಾಗುತ್ತದೆ ಎಂದು ವಿವರಿಸಲಾಗಿದೆ. ಅದರ ಕುರಿತ ಮಾಹಿತಿಯನ್ನು ಇಲ್ಲಿ ಹೇಳಿದ್ದೇವೆ.
ಉಗುರುಗಳನ್ನು ಮಂಗಳವಾರ, ಗುರುವಾರ ಮತ್ತು ಶನಿವಾರ ಯಾವುದೇ ಕಾರಣಕ್ಕೂ ಕತ್ತರಿಸಬಾರದು. ಈ ದಿನಗಳಂದು ಉಗುರು ಕತ್ತರಿಸಿದರೇ ಮಂಗಳ ದೇವ, ಗುರುದೇವ ಮತ್ತು ಶನಿದೇವ ಕೋಪಗೊಳ್ಳುತ್ತಾರೆ ಎಂದು ಶಾಸ್ತ್ರ ಹೇಳುತ್ತದೆ. ಹೀಗಾಗಿ ಈ ದಿನದಂದು ಯಾವುದೇ ಕಾರಣಕ್ಕೂ ಉಗುರು ಕತ್ತರಿಸಲು ಹೋಗಬೇಡಿ. ಒಂದು ವೇಳೆ ಮಂಗಳವಾರ ಉಗುರು ಕತ್ತರಿಸಿ ನಿಮ್ಮ ಜಾತಕದ ಪ್ರಕಾರ ಮಂಗಳ ದುರ್ಬಲನಾಗಿದ್ದರೆ, ನಿಮಗೆ ಅನೇಕ ತೊಂದರೆಗಳು ಎದುರಾಗುತ್ತವೆ. ಮದುವೆಯಲ್ಲಿ ವಿಳಂಬವಾಗಬಹುದು. ಸಂಪತ್ತು ಮತ್ತು ಧೈರ್ಯದಲ್ಲಿ ನಿಮಗೆ ಕೊರತೆ ಎದುರಾಗಬಹುದು. ಇನ್ನೂ ಗುರುವಾರ ಉಗುರು ಕತ್ತರಿಸುವುದು ಕೂಡ ಅಶುಭ ಸೂಚಕ. ಗುರು ಗ್ರಹದ ಅನುಗ್ರಹ ದೊರೆಯುವುದಿಲ್ಲ. ಒಂದು ವೇಳೆ ಶನಿವಾರ ಉಗುರು ಕತ್ತರಿಸುವುದು ದರಿದ್ರವನ್ನು ಮನೆಗೆ ಆಹ್ವಾನಿಸಿದಂತೆ. ಅನೇಕ ಅಶುಭಫಲಗಳನ್ನು ಎದುರಿಸಬೇಕಾಗುತ್ತದೆ. ಈ ದಿನಗಳು ಮಾತ್ರವಲ್ಲದೆ ಅಮಾವಾಸ್ಯೆ ಮತ್ತು ಚತುರ್ದಶಿ ದಿನಗಳಂದು ಕೂಡ ಉಗುರುಗಳನ್ನು ಕತ್ತರಿಸಬಾರದು. ಇದಲ್ಲದೆ ಸಂಜೆ ನಂತರ ಉಗುರು ಕತ್ತರಿಸುವುದು ಕೂಡ ಒಳ್ಳೆಯದಲ್ಲ. ಇದನ್ನು ಓದಿ..Kannada Astrology: ವಿಗ್ನ ವಿನಾಯಕನೇ ನಿಂತು ಈ ರಾಶಿಗಳ ಕಷ್ಟ ಮುಗಿಸಿ, ಅದೃಷ್ಟ ನೀಡುತ್ತಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??
ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಈ ವಾರಗಳು ಉಗುರು ಕತ್ತರಿಸಲು ಸರಿಯಾದ ದಿನಗಳು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ದಿನಗಳಲ್ಲಿ ಉಗುರು ಕತ್ತರಿಸುವುದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಶಾಸ್ತ್ರ ಹೇಳುತ್ತದೆ. ಅದರಲ್ಲೂ ಸಹ ಭಾನುವಾರ ಉಗುರು ಕತ್ತರಿಸಲು ಅತ್ಯಂತ ಒಳ್ಳೆಯ ದಿನ ಎಂದು ನಂಬಲಾಗಿದೆ. ಈ ದಿನ ಉಗುರು ಕತ್ತರಿಸುವುದರಿಂದ ವ್ಯಕ್ತಿಯ ಸಮಸ್ಯೆಗಳು ದೂರವಾಗುತ್ತವೆ. ಹಾಗೆಯೇ ಹಣಕಾಸಿನ ತೊಂದರೆ ಇಲ್ಲವಾಗುತ್ತದೆ. ಜೊತೆಗೆ ಮನೆಯಲ್ಲಿ ನೆಮ್ಮದಿ, ಶಾಂತಿ ನೆಲೆಸಲು ಕೂಡ ಇದು ಸಹಕರಿಸುತ್ತದೆ. ಆದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಮತ್ತೊಂದು ಅಂಶವೆಂದರೆ ಉಗುರನ್ನು ಈ ಶುಭದಿನಗಳನ್ನು ಹಗಲು ಅಂದರೆ ಬೆಳಗಿನ ಸಮಯದಲ್ಲಿ ಕತ್ತರಿಸಬೇಕು. ರಾತ್ರಿ ಅಥವಾ ಸಂಜೆಯ ನಂತರ ಉಗುರು ಕತ್ತರಿಸಬಾರದು. ಈ ನಿಯಮಗಳನ್ನು ಪಾಲಿಸುವುದರಿಂದ ಅನೇಕ ಶುಭಫಲಗಳನ್ನು ಹೊಂದಬಹುದಾಗಿದೆ. ಇದನ್ನು ಓದಿ.. Kannada Astrology: ಈ ನಾಲ್ಕು ರಾಶಿಗಳು ಎಂದರೆ ಹನುಮಂತನಿಗೆ ಅಚ್ಚು ಮೆಚ್ಚು. ಕುದ್ದು ಅವನೇ ಕಾಯಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?
Comments are closed.