Kannada Astrology: ನಿಮ್ಮ ಜಾತಕ ಹೇಗೆ ಇರಲಿ, ಈ ಮೂರು ರಾಶಿಗಳಿಗೆ ಶನಿ ದೇವನೇ ನಿಂತು ಅದೃಷ್ಟ ಕೊಡುತ್ತಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ??
Kannada Astrology: ಎಲ್ಲಾ ರಾಶಿಯವರು ಶನಿದೇವನ ಅನುಗ್ರಹ ತಮ್ಮ ಮೇಲೆ ಯಾವಾಗಲೂ ಇರಲಿ ಎಂದೇ ಬಯಸುತ್ತಾರೆ. ಆದರೆ ಶನಿದೇವ ಅವರವರ ಕರ್ಮದ ಅನುಸಾರ ಫಲಾಫಲಗಳನ್ನು ನೀಡುತ್ತಾನೆ ಎಂದು ಪುರಾಣ ಮತ್ತು ಧರ್ಮ ಹೇಳುತ್ತದೆ. ಹೀಗಿದ್ದರೂ ಸಹ ಶನಿದೇವ ಕೆಲವು ರಾಶಿಯವರ ಮೇಲೆ ಸದಾ ಕಾಲವು ತನ್ನ ಅನುಗ್ರಹವನ್ನು ತೋರಿಸುತ್ತಾನೆ. ಶನಿ ಸಾಡೇಸಾತ್ ಇರಲಿ ಅಥವಾ ಎರಡುವರೆ ವರ್ಷದ ಶನಿದೆಸೆಯೇ ಇರಲಿ ಆದರೂ ಸಹ ಶನಿದೇವ ಸದಾ ಕೃಪೆ ತೋರಿಸುವ ಮೂರು ರಾಶಿಗಳಿವೆ. ಜಾತಕ ಫಲ ಏನೇ ಇದ್ದರೂ ಸಹ ಎಂತಹ ಪರಿಸ್ಥಿತಿಯಲ್ಲಿಯೂ ಕೂಡ ಶನಿದೇವ ತನ್ನ ಕೃಪೆ ಮತ್ತು ದೃಷ್ಟಿ ಹರಿಸುವ ಆ ಮೂರು ಅದೃಷ್ಟದ ರಾಶಿಗಳು ಯಾವ್ಯಾವು ಗೊತ್ತಾ?
ತುಲಾ ರಾಶಿಯನ್ನು ಶನಿದೇವನ ಅತ್ಯಂತ ಉತ್ಕೃಷ್ಟ, ಉಚ್ಚ ರಾಶಿ ಎಂದೇ ಹೇಳಲಾಗುತ್ತದೆ. ಈ ಕಾರಣಕ್ಕಾಗಿ ಶನಿದೇವನ ಅನುಗ್ರಹ ಯಾವಾಗಲೂ ತುಲಾ ರಾಶಿಯ ಜನರ ಮೇಲೆ ಹೆಚ್ಚಾಗಿಯೇ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ಈ ರಾಶಿಯ ಜನರು ಅತ್ಯಂತ ಶ್ರಮಜೀವಿಗಳಾಗಿದ್ದು, ಬುದ್ಧಿವಂತರೆನಿಸಿಕೊಂಡಿರುತ್ತಾರೆ. ಈ ರಾಶಿಯವರು ಯಾವಾಗಲೂ ಕೂಡ ಸತ್ಯದ ಪರ ವಹಿಸುತ್ತಾರೆ. ಜೊತೆಗೆ ಶನಿ ದೆಸೆ ಇದ್ದರೂ ಸಹ ಶನಿದೇವ ಈ ರಾಶಿಯ ಜನರ ಮೇಲೆ ಒಲಿಯುತ್ತಾನೆ. ಇದನ್ನು ಓದಿ..Kannada Astrology: ಬರುತ್ತಿದೆ ವರ್ಷದ ಮೊದಲ ಸೂರ್ಯಗ್ರಹಣ. ಈ ಗ್ರಹಣ ಮುಗಿದ ಕೂಡಲೇ ಕುಬೇರ ರಾಗುವುದು ಯಾವ ರಾಶಿಯವರು ಗೊತ್ತೇ??
ಮಕರ ರಾಶಿಯ ಅಧಿಪತಿ ಶನಿದೇವ. ಇದೇ ಕಾರಣಕ್ಕಾಗಿ ಶನಿದೇವ ಯಾವಾಗಲೂ ಮಕರ ರಾಶಿಯ ಜನರಿಗೆ ಒಲಿಯುತ್ತಾನೆ. ಮಕರ ರಾಶಿ ಎಂದರೆ ಶನಿ ದೇವನಿಗೆ ಬಹಳ ಪ್ರೀತಿ ಎಂದು ಜ್ಯೋತಿಷ್ಯ ಹೇಳುತ್ತದೆ. ಈ ರಾಶಿಯ ಜನರು ಅತ್ಯಂತ ಪ್ರತಿಭಾನ್ವಿತರು ಮತ್ತು ಜಾಣರಾಗಿರುತ್ತಾರೆ. ಇವರು ಯಾವುದೇ ಕೆಲಸಕ್ಕೆ ಕೈ ಹಾಕಿದರು ಸಹ ಶನಿದೇವನ ಕೃಪೆಯಿಂದಾಗಿ ಅವರು ಯಶಸ್ಸು ಗಳಿಸುತ್ತಾರೆ. ಜೀವನದಲ್ಲಿ ಎದುರಾಗುವ ಎಂತದೆ ಕಷ್ಟದ ಸನ್ನಿವೇಶಗಳನ್ನು ಇವರು ನಿಭಾಯಿಸಬಲ್ಲರು. ಅಲ್ಲದೆ ಅತ್ಯಂತ ಪರಿಶ್ರಮ ಮತ್ತು ಶ್ರದ್ಧೆಯಿಂದಾಗಿ ಅಂದುಕೊಂಡ ಕೆಲಸ ಕೈಗೂಡುವಂತೆ ಶ್ರಮ ವಹಿಸುತ್ತಾರೆ. ಶನಿಯ ವಕ್ರದೃಷ್ಟಿಯಿಂದಲೂ ಕೂಡ ಈ ರಾಶಿಯ ಜನರಿಗೆ ಯಾವುದೇ ಕೆಟ್ಟ ಪರಿಣಾಮ ಉಂಟಾಗುವುದಿಲ್ಲ.
ಕುಂಭ ರಾಶಿಗೂ ಸಹ ಶನಿದೇವನೇ ಅಧಿಪತಿಯಾಗಿದ್ದಾನೆ. ಈ ಕಾರಣಕ್ಕಾಗಿ ಈ ರಾಶಿಯ ಜನರ ಮೇಲು ಕೂಡ ಸದಾ ಕಾಲ ಶನಿದೇವ ಅನುಗ್ರಹ ತೋರುತ್ತಾನೆ. ಈ ರಾಶಿಯವರು ಶಾಂತಿ ಪ್ರಿಯರಾಗಿದ್ದು, ಶಿಸ್ತು, ಕಠಿಣ ಪರಿಶ್ರಮ ಮತ್ತು ಸತ್ಯಕ್ಕೆ ಬೆಲೆ ನೀಡುತ್ತಾರೆ. ಸತ್ಯದ ಪರ ನಿಲ್ಲುತ್ತಾರೆ. ಅಲ್ಲದೆ ಈ ರಾಶಿಯವರು ಅತ್ಯಂತ ಛಲ ಮತ್ತು ಹಠದ ಸ್ವಭಾವದವರಾಗಿದ್ದಾರೆ. ಯಾವುದೇ ಕೆಲಸವನ್ನು ಮಾಡಬೇಕು ಎಂದುಕೊಂಡರೆ ಅದನ್ನು ಖಂಡಿತವಾಗಿಯೂ ಯಶಸ್ವಿಯಾಗುವುದರವರೆಗೂ ಸುಮ್ಮನೆ ಕೂರುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಇವರು ಸದೃಢರಾಗಿರುತ್ತಾರೆ. ಇದನ್ನು ಓದಿ..Kannada Astrology: 30 ವರ್ಷಗಳ ನಂತರ ಬಂದಿದೆ ವಿಶೇಷ ಸಂಯೋಗ: 3 ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಇವರನ್ನು ಟಚ್ ಮಾಡಿದ್ರೆ ಬೂದಿ ಫಿಕ್ಸ್. ಅಡ್ಡ ಹೋಗಬೇಡಿ, ಇವರೇ ರಾಜರು.
Comments are closed.