Kannada Astrology: ನಿಮ್ಮ ಮನೆಯಲಿ ತುಳಸಿ ಕಟ್ಟೆ ಇದ್ದರೇ, ಈ ರೀತಿ ದೀಪ ಹಚ್ಚಿ: ಲಕ್ಷ್ಮಿ ದೇವಿ ಹುಡುಕಿಕೊಂಡು ಬಂದು ಮನೆಯಲ್ಲಿಯೇ ಇದ್ದು ಬಿಡುತ್ತಾರೆ.
Kannada Astrology: ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ತುಳಸಿಯನ್ನು ಅತ್ಯಂತ ಪೂಜನೀಯ ಸಸ್ಯವೆಂದು ನಂಬಲಾಗಿದೆ. ಅಲ್ಲದೆ ತುಳಸಿಯಲ್ಲಿ ದೇವಿ ಲಕ್ಷ್ಮಿ ನೆಲೆಸಿರುತ್ತಾಳೆ. ಹಾಗೆಯೇ ತುಳಸಿ ಪೂಜೆ ಮಾಡುವುದರಿಂದಾಗಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು ಎಂದು ನಮ್ಮ ನಂಬಿಕೆಗಳು ಹೇಳುತ್ತವೆ. ತುಳಸಿ ಗಿಡದಲ್ಲಿ ಲಕ್ಷ್ಮಿ ಜೊತೆಗೆ ಮಹಾವಿಷ್ಣು ಸಹ ನೆಲೆಸಿದ್ದು, ತುಳಸಿಯನ್ನು ಪೂಜಿಸುವುದರಿಂದಾಗಿ ಅನೇಕ ಸಮಸ್ಯೆಗಳಿಂದ ಪಾರಾಗುವುದರ ಜೊತೆಗೆ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ತುಳಸಿಯನ್ನು ಪೂಜಿಸುವಾಗ ಕೆಲವು ಕ್ರಮಗಳನ್ನು ಕೈಗೊಂಡರೆ ಹಾಗೂ ನಾವು ಸೂಚಿಸುವ ಈ ಕೆಳಗಿನ ಅಂಶಗಳನ್ನು ಪಾಲಿಸಿದರೆ ದೇವಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗುವುದರ ಜೊತೆಗೆ ಹಣಕಾಸಿನ ಎಲ್ಲ ಸಮಸ್ಯೆಗಳು ದೂರವಾಗಿ ಆರ್ಥಿಕವಾಗಿ ಮುನ್ನಡೆ ಸಾಧಿಸಬಹುದು. ಹಾಗಿದ್ದರೆ ತುಳಸಿಯನ್ನು ಯಾವ ರೀತಿಯಾಗಿ ಪೂಜಿಸುವುದರಿಂದ ಜೊತೆಗೆ ತುಳಸಿ ಪೂಜೆಯ ಜೊತೆಗೆ ಯಾವೆಲ್ಲ ಕ್ರಮಗಳನ್ನು ಅನುಸರಿಸುವುದರಿಂದ ಉತ್ತಮ ಲಾಭಗಳನ್ನು ಪಡೆಯಬಹುದು ಎನ್ನುವುದನ್ನು ಇಲ್ಲಿ ಹೇಳಲಾಗಿದೆ.
ತುಳಸಿ ಗಿಡದ ಮುಂದೆ ದಿನ ನಿತ್ಯವೂ ದೀಪ ಹಚ್ಚುವುದು ಒಳ್ಳೆಯದು. ಅದರಲ್ಲೂ ತುಪ್ಪದ ದೀಪವನ್ನು ಅರಿಶಿನದ ಜೊತೆ ಹಚ್ಚಿ ಪೂಜಿಸುವುದರಿಂದಾಗಿ ಅನೇಕ ಆರ್ಥಿಕ ಬಿಕ್ಕಟ್ಟುಗಳು ನಿವಾರಣೆಯಾಗುತ್ತವೆ. ತುಳಸಿ ಗಿಡದ ಮುಂದೆ ಹಿಟ್ಟಿನ ದೀಪವನ್ನು ಹಚ್ಚಿ ಪೂಜಿಸಬೇಕು. ಆನಂತರ ಈ ದೀಪವನ್ನು ಹಸುವಿಗೆ ತಿನ್ನಿಸಬೇಕು. ಹೀಗೆ ಮಾಡುವುದರಿಂದ ದೇವಿ ಲಕ್ಷ್ಮಿ ಜೊತೆಗೆ ಅನ್ನಪೂರ್ಣ ಕೂಡ ಪ್ರಸನ್ನಳಾಗುತ್ತಾಳೆ ಎಂದು ಶಾಸ್ತ್ರ ಹೇಳುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ ಅಕ್ಷತೆಯನ್ನು ಅತ್ಯಂತ ಶುಭ ಸೂಚಕ ಎಂದು ನಂಬಲಾಗಿದೆ. ಹಾಗಾಗಿ ದೀಪ ಹಚ್ಚುವ ಮೊದಲು ದೀಪದ ಕೆಳಗೆ ಅಕ್ಷತೆಗಳ ಮಂಟಪವನ್ನು ಸಿದ್ಧ ಮಾಡಿ, ಅಕ್ಷತೆಯ ಮೇಲೆ ದೀಪ ಇಟ್ಟು ಪೂಜಿಸುವುದು ಉತ್ತಮ ಲಾಭವನ್ನು ತಂದುಕೊಡುತ್ತದೆ. ಹೀಗೆ ಮಾಡುವುದರಿಂದಾಗಿ ಮನೆಯಲ್ಲಿರುವ ದಾರಿದ್ರ್ಯ ಎಲ್ಲಾ ತೊಲಗಿ ಹೋಗಿ ಲಕ್ಷ್ಮಿಯ ಆಶೀರ್ವಾದ ಸಿಗುತ್ತದೆ. ಇದನ್ನು ಓದಿ..Kannada Astrology: ಮಂಗಳ ದೇವನ ರಾಶಿ ಪ್ರವೇಶ ಮಾಡಿದ ರಾಹು: ಇನ್ನು ಮುಂದೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಯಾರ್ಯಾರಿಗೆ ಗೊತ್ತೇ??
ಮುಂಜಾನೆ ತುಳಸಿ ಪೂಜೆಯ ನಂತರ ನೀರನ್ನು ಅರ್ಪಿಸಬೇಕು. ತುಳಸಿ ಪೂಜೆಯನ್ನು ಅತ್ಯಂತ ಶುಭ್ರ ಬಟ್ಟೆ ಧರಿಸಿ ಮಾಡಬೇಕು. ಶಾಸ್ತ್ರಗಳ ಪ್ರಕಾರ ಭಾನುವಾರ ಮತ್ತು ಏಕಾದಶಿಯ ದಿನದಂದು ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಬಾರದು. ಜೊತೆಗೆ ಈ ದಿನಗಳಂದು ತುಳಸಿಯ ಎಲೆಗಳನ್ನು ಸಹ ಕೀಳಬಾರದು. ಈ ರೀತಿಯಾಗಿ ತುಳಸಿಯನ್ನು ಪೂಜಿಸುವುದು ಜೊತೆಗೆ ತುಳಸಿ ಗಿಡವನ್ನು ಪೂಜಿಸುವ ವೇಳೆ ಈ ಮೇಲಿನ ಕ್ರಮಗಳನ್ನು ಅನುಸರಿಸುವುದರಿಂದಾಗಿ ದೇವಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಿ ಆಕೆಯನ್ನು ಪ್ರಸನ್ನಗೊಳಿಸಬಹುದು. ಮನೆಯಲ್ಲಿ ಹಣಕಾಸು ಸೇರಿದಂತೆ ಯಾವುದೇ ಸಂಪತ್ತಿನ ವಿಷಯದ ತೊಂದರೆಗಳಿದ್ದರೆ ಅದು ಶೀಘ್ರವೇ ನಿವಾರಣೆಯಾಗುತ್ತದೆ. ಮನೆಯಲ್ಲಿ ಆರ್ಥಿಕವಾಗಿ ನೆಮ್ಮದಿ ನೆಲೆಸುತ್ತದೆ. ಇದನ್ನು ಓದಿ.. Kannada Astrology: ಸೃಷ್ಟಿಯಾಗಿದೆ ತ್ರಿಗ್ರಾಹಿ ಯೋಗ: ಈ ರಾಶಿಗಳಿಗೆ ಇಂದಿಂದ ಅದೃಷ್ಟ ಯಾವ ರೀತಿ ಅಂದ್ರೆ, ಊಹಿಸಲಾಗದಷ್ಟು ಹಣ ಹುಡುಕಿಕೊಂಡು ಬರುತ್ತದೆ. ಯಾರಿಗೆ ಗೊತ್ತೇ?
Comments are closed.