Gruha Lakshmi Scheme: ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆದ ರಾಜ್ಯ ಸರ್ಕಾರ- ಗೃಹಲಕ್ಷ್ಮಿ ಹಣ ಬರೋದು ಯಾವಾಗ ಗೊತ್ತೇ?? ಇಂಗಾದರೆ ಎಂಗೆ?
Gruha Lakshmi Scheme: ನಮಸ್ಕಾರ ಸ್ನೇಹಿತರೆ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಸರ್ಕಾರ ತಾನು ನೀಡಿರುವಂತಹ 5 ಪ್ರಮುಖ ಯೋಜನೆಗಳನ್ನು ನೆರವೇರಿಸುವಂತಹ ಶತಾಯಗತಾಯ ಪ್ರಯತ್ನವನ್ನು ಮಾಡುತ್ತಿದೆ. ಇದಕ್ಕಾಗಿ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಹಣವನ್ನು ಕೂಡ ಖರ್ಚು ಮಾಡಬೇಕಾಗಿದೆ. ಅದರಲ್ಲೂ ವಿಶೇಷವಾಗಿ ಇವತ್ತಿನ್ನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವಂತಹ ಯೋಜನೆ, ಗೃಹಲಕ್ಷ್ಮಿ ಯೋಜನೆ(Gruha Lakshmi Scheme) ಯಾಗಿದೆ. ಈ ಯೋಜನೆ ಅಡಿಯಲ್ಲಿ ಈಗಾಗಲೇ ಮೊದಲ ಹಂತದ ಹಣವನ್ನು ಈಗಾಗಲೇ ಪ್ರತಿಯೊಂದು ಮನೆಯ ಕುಟುಂಬದ ಯಜಮಾನಿಯರ ಖಾತೆಗೆ ನೀಡಲಾಗಿದೆ ಎನ್ನುವಂತಹ ಸುದ್ದಿಗಳು ಕೇಳಿ ಬರುತ್ತಿದ್ದು ಇನ್ನೂ ಕೆಲವು ಮಹಿಳೆಯರಿಗೆ ಹಣ ಬರುವುದು ಬಾಕಿ ಉಳಿದಿದೆ. ಆದರೆ ಈಗ ಎರಡನೇ ಕಂತಿನ ಹಣ ಯಾರ ಖಾತೆಗೂ ಕೂಡ ಬಂದಿಲ್ಲ ಅನ್ನೋ ಮಾಹಿತಿ ಕೇಳಿ ಬರುತ್ತಿದೆ. ಇದು ಈಗ ಎಲ್ಲರ ಬೇಸರಕ್ಕೆ ಕಾರಣವಾಗಿದ್ದು ಪ್ರತಿಯೊಬ್ಬರೂ ಕೂಡ ಹಣ ಬರುತ್ತೋ ಇಲ್ವೋ ಅನ್ನೋ ಚಿಂತೆಗೆ ಒಳಗಾಗಿದ್ದಾರೆ.
Gruha Lakshmi Scheme: Latest Gruha Lakshmi Scheme updates clearly explained in Kannada-By Kannada News.
ಇದರ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಕೇಳಿದಾಗ ಸರ್ವರ್ ಸಮಸ್ಯೆಯಿಂದ ಗೃಹಲಕ್ಷ್ಮಿ ಯೋಜನೆ ಹಣ ಸೇರಬೇಕಾದವರಿಗೆ ಸೇರಿಲ್ಲ ಎನ್ನುವುದಾಗಿ ತಿಳಿದು ಬರುತ್ತಿದ್ದು ಇನ್ನು ಕೆಲವು ಕಡೆಗಳಲ್ಲಿ ರಿಜಿಸ್ಟರ್ ಮಾಡಿಕೊಂಡಿರುವಂತಹ ಮಹಿಳೆಯರ ಬ್ಯಾಂಕ್ KYC ಆಗಿಲ್ಲ ಅನ್ನುವ ಮಾಹಿತಿಗಳು ಕೂಡ ಕೇಳಿ ಬರುತ್ತಿದೆ. ಹೀಗಾಗಿ ಮೊದಲ ಕಂತಿನಿಂದಲೇ ಸಾಕಷ್ಟು ಮಹಿಳೆಯರು ಹಣವನ್ನು ಪಡೆಯದೆ ಇರುವುದನ್ನು ಕೂಡ ನಾವು ಈ ಸಂದರ್ಭದಲ್ಲಿ ಕಾಣಬಹುದಾಗಿದೆ. ಇದೇ ಕಾರಣಕ್ಕಾಗಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಫಲಾನುಭವಿಗಳಾಗಲು ಅರ್ಹತೆ ಹೊಂದಿದ್ದರು ಕೂಡ ಯಾಕೆ ನಮಗೆ ಹಣ ಸಿಗುತ್ತಿಲ್ಲ ಎನ್ನುವುದಾಗಿ ರಾಜ್ಯದಲ್ಲಿ ಸಾಕಷ್ಟು ಮಹಿಳೆಯರು ಸರ್ಕಾರದ ವಿರುದ್ಧ ಈ ಬಗ್ಗೆ ಅಸಮಾಧಾನವನ್ನು ಹೊರಹಾಕುತ್ತಿರುವುದು ಕೂಡ ಕಂಡುಬರುತ್ತಿದೆ.
ಕೊನೆಗೂ 500 ರೂಪಾಯಿ ನೋಟಿನ ಬಗ್ಗೆ ಮೌನ ಮುರಿತದ RBI – ದೇಶದ ಜನತೆಗೆ ಗಟ್ಟಿಯಾಗಿ ಹೇಳಿದ್ದೇನು ಗೊತ್ತೇ? Kannada News
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮೊದಲನೇ ಕಂತನ್ನು ಅಂದರೆ ಮೊದಲ ತಿಂಗಳ ರೂ 2000 ಹಣವನ್ನು ಸುಲಭವಾಗಿ ಪಡೆದುಕೊಂಡಿರುವಂತಹ ಮನೆಯ ಯಜಮಾನಿಯರು ಎರಡನೇ ಕಂತಿನ ಹಣ ಯಾವಾಗ ಸಿಗುತ್ತದೆ ಎನ್ನುವುದಾಗಿ ಈಗ ಕಾಯುತ್ತಿದ್ದಾರೆ. ಏನೋ ಸಮಸ್ಯೆ ಇರುವುದಂತೂ ಖಂಡಿತ ಎಂಬುದಾಗಿ ಈ ಯೋಜನೆಯ ಬಗ್ಗೆ ಪ್ರತಿಯೊಬ್ಬರು ಕೂಡ ಈಗಾಗಲೇ ಲೆಕ್ಕಾಚಾರ ಹಾಕಿದ್ದು ಸಪ್ಟೆಂಬರ್ 30ರ ಒಳಗೆ ಎರಡನೇ ಕಂತಿನ ಹಣ ಬರಬೇಕು ಎನ್ನುವುದು ನಿಯಮಗಳ ಅನುಸಾರವಾಗಿ ತಿಳಿದು ಬಂದಿರುವ ಮಾಹಿತಿಯಾಗಿದ್ದು 30 ನೇ ತಾರೀಖಿನ ಒಳಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳುವ ಅಭಿಲಾಷೆಯನ್ನು ಪ್ರತಿಯೊಬ್ಬರೂ ಕೂಡ ಹೊಂದಿದ್ದು ಇದು ಮುಂದಿನ ದಿನಗಳಲ್ಲಿ ಏನಾಗುತ್ತದೆ ಎನ್ನುವಂತಹ ಕಾತುರತೆ ಪ್ರತಿಯೊಬ್ಬರಿಗೂ ಕೂಡ ಇದೆ.
ಹಿಂದಿನ ತಿಂಗಳು ಆಗಸ್ಟ್ 30ರಂದು ಮೊದಲ ಕಂತಿನ ಹಣ ಬಿಡುಗಡೆ ಆಗಿತ್ತು. ಸರ್ಕಾರ ಪ್ರತಿ ತಿಂಗಳ 26 ನೇ ತಾರೀಖಿನ ಒಳಗೆ ಗೃಹಲಕ್ಷ್ಮಿ ಯೋಜನೆ ಹಣವನ್ನು ಸಂಬಂಧಪಟ್ಟವರ ಖಾತೆಗೆ ಹಾಕಲಾಗುತ್ತದೆ ಎಂಬುದಾಗಿ ಹೇಳಿದ್ದು ಮೊದಲನೇ ಕಂಚಿನಲ್ಲಿ ಒಂದು ಕೋಟಿಗೂ ಅಧಿಕ ಮಹಿಳೆಯರು ರಿಜಿಸ್ಟರ್ ಆಗಿದ್ದರೂ ಕೂಡ ಕೇವಲ 80 ಲಕ್ಷ ಮಹಿಳೆಯರಿಗೆ ಮಾತ್ರ ಹಣವನ್ನು ಕಳುಹಿಸಲಾಗಿತ್ತು. ಈ ಪ್ರಶ್ನೆಯನ್ನು ಕೂಡ ರಾಜ್ಯ ಸರ್ಕಾರದ ಬಳಿ ಕೇಳಿದಾಗ ರಾಜ್ಯ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಈ ಬಾರಿ ಯಾರಿಗೆ ಗ್ರಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣ ಸಿಕ್ಕಿಲ್ಲವೋ ಅವರಿಗೆ ಮುಂದಿನ ತಿಂಗಳು ಹಿಂದಿನ ಕಂತಿನ ಹಣ ಸೇರಿದಂತೆ ಒಟ್ಟಾರೆ ನಾಲ್ಕು ಸಾವಿರ ಹಣವನ್ನು ಒಟ್ಟಾಗಿ ವರ್ಗಾವಣೆ ಮಾಡಲಾಗುತ್ತದೆ ಎನ್ನುವಂತಹ ಭರವಸೆಯನ್ನು ಕೂಡ ನೀಡಿದ್ದಾರೆ. ಆದರೆ ಈ ಭರವಸೆ ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಎಂಬುದನ್ನು ನಾವು ಸೆಪ್ಟೆಂಬರ್ 26 ನೇ ತಾರೀಖಿನ ನಂತರವಷ್ಟೇ ತಿಳಿದುಕೊಳ್ಳಬಹುದಾಗಿದೆ.
ಬರುತ್ತಿದೆ ಸೂರ್ಯ ಗ್ರಹಣ- ಈ 4 ರಾಶಿಗಳಿಗೆ ಕಷ್ಟವೋ ಕಷ್ಟ. ಈಗಲೇ ಎಚ್ಚೆತ್ತುಕೊಳ್ಳಿ. Kannada Horoscope
ಗೃಹಲಕ್ಷ್ಮಿ ಯೋಜನೆಗಾಗಿ ವರ್ಷಕ್ಕೆ ರೂ.30,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ ಎನ್ನುವಂತಹ ಲೆಕ್ಕಾಚಾರ ಕೂಡ ಎದುರಿಗೆ ಬಂದಿದೆ. ಈ ಯೋಜನೆಯ ಮೂಲಕ ಮಹಿಳೆಯರಿಗೆ ಯಾವುದೇ ರೀತಿಯಲ್ಲಿ ಕೂಡ ಆರ್ಥಿಕ ಸಂಕಷ್ಟ ಎದುರು ಆಗಬಾರದು ಎನ್ನುವ ಕಾರಣಕ್ಕಾಗಿ ಅವರಿಗೆ ಸಹಾಯಕವಾಗಲಿ ಎನ್ನುವ ಕಾರಣಕ್ಕಾಗಿ ಚಿಕ್ಕ ಪ್ರಮಾಣದ ಆರ್ಥಿಕ ಸಹಾಯವನ್ನು ಈ ಮೂಲಕ ನೀಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಬೇಕಾಗಿರುವ ಹಣ ಯಾವಾಗ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಾಗಿದ್ದು ಎಲ್ಲ ಅಂದುಕೊಂಡಂತೆ ಆದಲ್ಲಿ ಸೆಪ್ಟೆಂಬರ್ 26ರಂದು ರಿಜಿಸ್ಟರ್ ಮಾಡಿಕೊಂಡಿರುವಂತಹ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಹಣ ಅವರ ಖಾತೆಗೆ ಬಂದು ಸೇರಬೇಕಾಗಿರುತ್ತದೆ.
Comments are closed.