RBI: ದಿಡೀರ್ ಎಂದು ಬ್ಯಾಂಕ್ ಅನ್ನು ಮುಚ್ಚುವಂತೆ ಆದೇಶ ನೀಡಿದ ರಿಸರ್ವ್ ಬ್ಯಾಂಕ್- ನಿಮ್ಮ ಖಾತೆ ಇದ್ದರೇ 5 ಲಕ್ಷ ಮಾತ್ರ ಸಿಗೋದು.

RBI ordered to close this banks- Kannada News

RBI: ನಮಸ್ಕಾರ ಸ್ನೇಹಿತರೆ RBI ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಭಾರತ ದೇಶದ ಅರ್ಥವ್ಯವಸ್ಥೆಯನ್ನು ಕಂಟ್ರೋಲ್ ಮಾಡುವಂತಹ ಪ್ರಮುಖ ಸಂಸ್ಥೆಯಾಗಿದೆ. ಹೀಗಾಗಿ ಕಠಿಣವಾದರೂ ಕೂಡ ಯಾವುದೇ ನಿರ್ಧಾರವನ್ನು ನಿರ್ದಾಕ್ಷಣೆಯಾಗಿ ಭಾರತ ದೇಶದ ಆರ್ಥಿಕ ವ್ಯವಸ್ಥೆಯ ಹಿತಾಸಕ್ತಿಯಿಂದ ತೆಗೆದುಕೊಳ್ಳಬೇಕಾಗುತ್ತದೆ. ಅದೇ ರೀತಿ ಈಗ ಮುಂಬೈನ ದ ಕಪೋಲೋ ಕೋಆಪರೇಟಿವ್ ಬ್ಯಾಂಕಿನ ಲೈಸೆನ್ಸ್ ಅನ್ನೋ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರದ್ದು ಮಾಡಿದ್ದು ಬ್ಯಾಂಕ್ ಅನ್ನು ಮುಚ್ಚಿದೆ. ಬ್ಯಾಂಕಿನಲ್ಲಿ ಯಾವುದು ಬಂಡವಾಳ ಇಲ್ಲ ಹಾಗೂ ಮುಂದೆ ಆದಾಯ ಕೂಡ ಆಗುವುದಿಲ್ಲ ಎನ್ನುವುದನ್ನು ಪೂರ್ಣವಾಗಿ ಅರಿತುಕೊಂಡ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(Reserve Bank Of India) ಈ ನಿರ್ಧಾರವನ್ನು ಕೈಗೊಂಡಿದೆ.

ಬರುತ್ತಿದೆ ಸೂರ್ಯ ಗ್ರಹಣ- ಈ 4 ರಾಶಿಗಳಿಗೆ ಕಷ್ಟವೋ ಕಷ್ಟ. ಈಗಲೇ ಎಚ್ಚೆತ್ತುಕೊಳ್ಳಿ. Kannada Horoscope

RBI ordered to close this banks- Kannada News

ಸಾಮಾನ್ಯವಾಗಿ RBI ಬ್ಯಾಂಕಿನ ಪರವಾನಿಗೆಯನ್ನು ರದ್ದು ಮಾಡಿದ ನಂತರ ಖಂಡಿತವಾಗಿ ಮುಂದೆ ಅದು ಯಾವುದೇ ಕಾರಣಕ್ಕೂ ಕೂಡ ಹಣ ತೆಗೆಯುವುದಾಗಲಿ ಅಥವಾ ಹಣ ಜಮಾ ಮಾಡುವುದಾಗಲಿ ಯಾವುದೇ ರೀತಿಯ ಬ್ಯಾಂಕಿಂಗ್ ಕಾರ್ಯಗಳನ್ನು ಕೂಡ ಮಾಡುವುದಕ್ಕೆ ಅರ್ಹ ಆಗಿರುವುದಿಲ್ಲ. ಹೀಗಾಗಿ ಖಂಡಿತವಾಗಿ ಈ ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ಹಣದ ಗತಿ ಏನಾಗುತ್ತದೆ ಎನ್ನುವುದರ ಬಗ್ಗೆ ಕೂಡ ಪ್ರತಿಯೊಬ್ಬರಿಗೂ ಚಿಂತೆ ಇದ್ದೇ ಇರುತ್ತದೆ. ಖಂಡಿತವಾಗಿ ನಿಷೇಧ ಗೊಂಡಿರುವ ಬ್ಯಾಂಕಿನಿಂದ ಹೇಗೆ ತಾನೆ ಹಣ ಪಡೆಯಲು ಸಾಧ್ಯ ನೀವೇ ಹೇಳಿ.

ಆದರೆ ನಿಮಗೆ ತಿಳಿದಿರಲಿ RBI ನಿಯಮಗಳ ಅನುಸಾರವಾಗಿ ಅವುಗಳಿಗೆ ಅಧೀನವಾಗಿದ್ದರೆ DICGC ನಿಯಮಗಳ ಅನುಸಾರವಾಗಿ ಅಂದರೆ ನೀವು ಆ ಸಹಕಾರಿ ಬ್ಯಾಂಕಿನಲ್ಲಿ ಅಥವಾ ಬ್ಯಾಂಕಿನಲ್ಲಿ ಇಟ್ಟಿರುವ ಹಣದ ಇನ್ಸೂರೆನ್ಸ್ ಎಂದು ಹೇಳಬಹುದಾಗಿದೆ. ಆ ಸಂದರ್ಭದಲ್ಲಿ ನೀವು ಇಟ್ಟಿರುವ ಹಣದ ಮೇಲೆ ಮಿನಿಮಮ್ ಐದು ಲಕ್ಷ ರೂಪಾಯಿಗಳ ಪರಿಹಾರವನ್ನು DICGC ನಿಂದ ನೀಡಲಾಗುತ್ತದೆ. ಹೀಗಾಗಿ ಯಾವುದೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದ ಅಧೀನದಲ್ಲಿ ಇಲ್ಲದೆ ಇರುವಂತಹ ಬ್ಯಾಂಕುಗಳನ್ನು ಯಾವುದೇ ಕಾರಣಕ್ಕೂ ಕೂಡ ನಿಮ್ಮ ಹಣದ ಉಳಿತಾಯಕ್ಕಾಗಿ ಆಯ್ಕೆ ಮಾಡಬೇಡಿ. ಇನ್ನೊಂದು ಪ್ರಮುಖವಾಗಿ ನೀವು 10 ಲಕ್ಷ ರೂಪಾಯಿ ಹಣ ಇಟ್ಟಿದ್ದರು ಕೂಡ ಕೇವಲ 5 ಲಕ್ಷಗಳವರೆಗೆ ಮಾತ್ರ ನೀವು ಪರಿಹಾರವನ್ನು ಪಡೆಯಲು ಅರ್ಹರಾಗಿರುತ್ತೀರಿ.

ಇನ್ನೊಂದು ಕಡೆ ಅಹ್ಮದಾಬಾದ್ ಮೂಲದ ಕಲರ್ ಮರ್ಚೆಂಟ್ ಕೋ ಆಪರೇಟಿವ್ ಬ್ಯಾಂಕ್(Color Merchant Co-operative Bank) ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಬಂಧ ಹೇರಿದೆ. ನಿರ್ಬಂಧ ಎಂದರೆ ಲೈಸೆನ್ಸ್ ಅನ್ನು ರದ್ದು ಮಾಡುವುದು ಅಥವಾ ಬ್ಯಾಂಕನ್ನು ಮುಚ್ಚಿಸುವುದು ಎಂದಲ್ಲ. ಬ್ಯಾಂಕಿನ ಕೆಲವೊಂದು ನಿಯಮಗಳನ್ನು ಬಿಗಿಗೊಳಿಸಿ ಮತ್ತೆ ಬ್ಯಾಂಕಿನಲ್ಲಿ ಹಣಕಾಸು ವ್ಯವಹಾರ ಸುಲಲಿತವಾಗಿ ನಡೆಯುವ ರೀತಿಯಲ್ಲಿ ಮಾಡುವುದು. ಕಲರ್ ಮರ್ಚೆಂಟ್ ಕೋ ಆಪರೇಟಿವ್ ಬ್ಯಾಂಕ್ ಅನ್ನು ತೆಗೆದುಕೊಳ್ಳುವುದಾದರೆ ಗ್ರಾಹಕರಿಗೆ ಅಕೌಂಟ್ ನಿಂದ ಕೇವಲ 50000 ರವರೆಗೆ ಮಾತ್ರ ಹಣವನ್ನು ತೆಗೆಯುವ ಹಕ್ಕನ್ನು ನೀಡಲಾಗುತ್ತದೆ. ಮುಂದಿನ ಆರು ತಿಂಗಳವರೆಗೂ ಕೂಡ ಈ ನಿರ್ಬಂಧವನ್ನು ಜಾರಿಯಲ್ಲಿ ಇರಿಸಲಾಗುತ್ತದೆ ಹಾಗೂ ಈ ಸಂದರ್ಭದಲ್ಲಿ ಯಾವುದು ಸಾಲವನ್ನು ಕೂಡ ಕೊಡೋದಕ್ಕೆ ಆಗುವುದಿಲ್ಲ.

ಈ ಸಂದರ್ಭದಲ್ಲಿ ಬ್ಯಾಂಕ್ ಖಾತೆಯಲ್ಲಿ ಗ್ರಾಹಕರು ಎಷ್ಟು ಹಣವನ್ನು ಇಟ್ಟಿದ್ದರು ಕೂಡ ನಿರ್ಬಂಧ ಇರುವ ಕಾರಣದಿಂದಾಗಿ ಕೇವಲ ಐವತ್ತು ಸಾವಿರ ರೂಪಾಯಿವರೆಗೆ ಮಾತ್ರ ಹಣವನ್ನು ತೆಗೆಯಲು ಸಾಧ್ಯ ಹಾಗೂ ಇದು ಆರು ತಿಂಗಳ ನಿರ್ಬಂಧದ ಸಮಯದವರೆಗೂ ಕೂಡ ಮುಂದುವರೆಯುತ್ತದೆ ಯಾಕೆಂದರೆ ಕೆಲವೊಂದು ಕಾರಣಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಖುದ್ದಾಗಿ ಕಂಡುಹಿಡಿದು ಅದನ್ನು ಸರಿ ಮಾಡುವಂತಹ ಪ್ರಯತ್ನವನ್ನು ಮಾಡುತ್ತದೆ. ಅದೇ ಕಾರಣಕ್ಕಾಗಿ ಈ ರೀತಿಯ ನಿಯಮಗಳನ್ನು ಜಾರಿಗೆ ತರುತ್ತದೆ.

Comments are closed.