Pitru paksha: ಶುರುವಾಗಿದೆ ಭಯಂಕರ ಪಿತೃ ಪಕ್ಷ- ಈ ಸಮಯದಲ್ಲಿ ಈ ಮೂರು ವಸ್ತುಗಳನ್ನು ಖರೀದಿ ಮಾಡಲೇಬೇಡಿ. ಅಷ್ಟೇ ಮುಗಿತು ಕಥೆ.

Pitru paksha - You shouldn't buy these things in Pitru paksha as per Kannada Horoscope or astrology.

Pitru paksha: ನಮಸ್ಕಾರ ಸ್ನೇಹಿತರೆ ನಮ್ಮ ಸಂಸ್ಕೃತಿಗಳ ಆಚಾರಗಳ ಪ್ರಕಾರ ಇದೇ ಸೆಪ್ಟೆಂಬರ್ 29 ರಿಂದ ಪಿತೃ ಪಕ್ಷ(Pitru Paksha) ಪ್ರಾರಂಭ ಆಗಲಿದೆ ಎನ್ನುವಂತಹ ಮಾಹಿತಿಗಳು ಸಿಕ್ಕಿದ್ದು ಇದು ಅಕ್ಟೋಬರ್ ತಿಂಗಳ 14ರ ವರೆಗೂ ಕೂಡ ಇರಲಿದೆ ಎಂಬುದಾಗಿ ತಿಳಿದು ಬಂದಿದೆ. ಸನಾತನ ಹಿಂದೂ ಸಂಸ್ಕೃತಿಯಲ್ಲಿ ನಿಮೆಲ್ಲರಿಗೂ ಗೊತ್ತಿರಬಹುದು ಪಿತೃ ಪಕ್ಷವನ್ನು ಸಾಕಷ್ಟು ಮಹತ್ವದ ಆಚರಣೆಯ ರೂಪದಲ್ಲಿ ಕಾಣಲಾಗುತ್ತದೆ ಎಂಬುದನ್ನು ಕೂಡ ನೀವೆಲ್ಲರೂ ತಿಳಿದುಕೊಂಡಿರಬಹುದು. ಹೀಗಾಗಿ ಇವತ್ತಿನ ಲೇಖನಿಯಲ್ಲಿ ತಿಳಿಯದ ಜನರಿಗೂ ಕೂಡ ಸರಿಯಾದ ಮಾಹಿತಿಯನ್ನು ನೀಡುವ ಪ್ರಯತ್ನವನ್ನು ಮಾಡೋಣ.

Pitru paksha – You shouldn’t buy these things in Pitru paksha as per Kannada Horoscope or astrology.

ಪಿತೃಪಕ್ಷ ಅಂದ್ರೆ ಈಗಾಗಲೇ ಮರಣವನ್ನು ಹೊಂದಿರುವಂತಹ ನಮ್ಮ ಪೂರ್ವಜರಿಗೆ ಅಂದರೆ ಅವರ ಆತ್ಮಕ್ಕೆ ಶಾಂತಿ ಅಥವಾ ಸಂತೋಷವನ್ನು ನೀಡುವಂತಹ ಕೆಲಸ ಮಾಡುವಂತಹ ಪೂಜಾ ವಿಧಿ ವಿಧಾನಗಳು ಎಂಬುದಾಗಿ ಅರ್ಥ ಮಾಡಿಕೊಳ್ಳಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ಅವರಿಗಾಗಿ ನಾವು ಪಿಂಡಪ್ರದಾನ, ತರ್ಪಣ ಹಾಗೂ ಶ್ರಾದ್ಧವನು ಕೂಡ ಸಲ್ಲಿಸಬೇಕಾಗುತ್ತದೆ. ಈ ಮೂಲಕ ಅರ್ಥಪೂರ್ಣವಾಗಿ ಪಿತೃ ಪಕ್ಷವನ್ನು ಆಚರಿಸಲಾಗುತ್ತದೆ.

ಬರುತ್ತಿದೆ ಸೂರ್ಯ ಗ್ರಹಣ- ಈ 4 ರಾಶಿಗಳಿಗೆ ಕಷ್ಟವೋ ಕಷ್ಟ. ಈಗಲೇ ಎಚ್ಚೆತ್ತುಕೊಳ್ಳಿ. Kannada Horoscope

ಇನ್ನು ಪಿತೃ ಪಕ್ಷದಲ್ಲಿ ಕೆಲವೊಂದು ವಸ್ತುಗಳನ್ನು ಖರೀದಿಸಬಾರದು ಎನ್ನುವಂತಹ ನಿಯಮವನ್ನು ಕೂಡ ಇರಿಸಲಾಗುತ್ತದೆ. ಇದರಿಂದ ಅಶುಭ ಆಗುತ್ತದೆ ಎನ್ನುವುದನ್ನು ಕೂಡ ಪರಿಗಣಿಸಲಾಗುತ್ತದೆ. ಹೀಗಾಗಿ ಆ ವಸ್ತುಗಳು ಯಾವು ಎನ್ನುವುದನ್ನು ಕೂಡ ನೀವೆಲ್ಲ ತಿಳಿಯುವುದು ಅವಶ್ಯಕ ವಾಗಿರುತ್ತದೆ. ಒಂದು ವೇಳೆ ಆ ಸಂದರ್ಭದಲ್ಲಿ ನೀವು ಈ ವಸ್ತುಗಳನ್ನು ಖರೀದಿಸುತ್ತಿದ್ದೀರಿ ಎಂದರೆ ಸಾಕಷ್ಟು ದೋಷಗಳು ಕೂಡ ನಿಮ್ಮ ಜೀವನದಲ್ಲಿ ಆವರಿಸಿಕೊಳ್ಳಬಹುದಾಗಿದ್ದು ಬನ್ನಿ ಅವುಗಳಿಂದ ದೂರವಾಗುವ ಕಾರಣಕ್ಕಾಗಿ ಅವುಗಳು ಯಾವುವು ಎನ್ನುವ ಮಾಹಿತಿಯನ್ನು ಪಡೆದುಕೊಳ್ಳೋಣ.

ಶಾಸ್ತ್ರಗಳ ಪ್ರಕಾರ ಪಿತೃ ಪಕ್ಷದಲ್ಲಿ ಯಾವುದೇ ಕಾರಣಕ್ಕೂ ಕೂಡ ಎಳ್ಳೆಣ್ಣೆಯನ್ನು ಖರೀದಿಸಬಾರದು ಎನ್ನುವುದಾಗಿ ಹೇಳಲಾಗುತ್ತದೆ. ಎಳ್ಳೆಣ್ಣೆಯನ್ನು ಖರೀದಿಸುವುದು ಕುಟುಂಬದ ಶಾಂತಿಯನ್ನು ಹದಗೆಡಿಸುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಹೀಗಾಗಿ ಪಿತೃಪಕ್ಷದ ದಿನದಂದು ಎಳ್ಳೆಣ್ಣೆಯನ್ನು ಯಾವುದೇ ಕಾರಣಕ್ಕೂ ಕೂಡ ಖರೀದಿಸಬಾರದು. ಎರಡನೇದಾಗಿ ಪೊರಕೆಯನ್ನು(Dust Groom) ಕೂಡ ಖರೀದಿಸಬಾರದು ಇದರಿಂದಾಗಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ ಎಂಬುದಾಗಿ ಕೂಡ ಶಾಸ್ತ್ರ ಪುರಾಣಗಳು ಹೇಳುತ್ತವೆ. ಹೀಗಾಗಿ ಪೂರಕ್ಕೆ ಕೂಡ ಪಿತೃಪಕ್ಷದ ದಿನದಂದು ಖರೀದಿಸ ಬಾರದಂತಹ ವಸ್ತುಗಳಲ್ಲಿ ಒಂದಾಗಿದೆ.

ಪಿತೃಪಕ್ಷದ ಸಂದರ್ಭದಲ್ಲಿ ಉಪ್ಪನ್ನು ಕೂಡ ಖರೀದಿಸುವುದು ನಿಮಗೆ ವ್ಯತಿರಿಕ್ತ ಪರಿಣಾಮವನ್ನು ನೀಡುವಂತಹ ಕೆಲಸಕ್ಕೆ ಮುನ್ನುಡಿ ಆಗಿರಲಿದೆ. ಇವುಗಳ ಜೊತೆಗೆ ಇಂತಹ ದಿನದಂದು ಹೊಸ ಮನೆ ಅಥವಾ ವಾಹನಗಳನ್ನು ಖರೀದಿಸುವಂತಹ ಅಭ್ಯಾಸವನ್ನು ಕೂಡ ನೀವು ಇಟ್ಟುಕೊಳ್ಳಬಾರದು. ಇದು ಪಿತೃಪಕ್ಷದ ವಿಚಾರದಲ್ಲಿ ಶಾಸ್ತ್ರಗಳು ಹೇಳುವಂತಹ ಮಾತುಗಳಾಗಿವೆ.

Comments are closed.