Law: ಡೈವೋರ್ಸ್ ಕೊಡದೆ ಇನ್ನೊಂದು ಮದುವೆ ಆಗಬಹುದೇ? ಕಾನೂನು ಬಳಸಿದರೆ ಏನೆಲ್ಲಾ ಮಾಡಬಹುದು??

Law explained in Kannada - Kannada Law.by Kannada News

Law: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಮದುವೆ ಅನ್ನೋದು ಅತ್ಯಂತ ಪ್ರಮುಖವಾದಂಥ ಘಟ್ಟವಾಗಿರುತ್ತದೆ. ಯಾರು ಕೂಡ ವಿವಾಹ ವಿಚ್ಛೇದನ(Divorce ) ನೀಡುವ ನಿಟ್ಟಿನಲ್ಲಿ ಮದುವೆ ಆಗುವುದಿಲ್ಲ ಆದರೆ ಮದುವೆಯಾದ ನಂತರ ಗಂಡ ಹೆಂಡತಿಯ ನಡುವೆ ಕಂಡುಬರುವಂತಹ ಕೆಲವೊಂದು ಭಿನ್ನಾಭಿಪ್ರಾಯಗಳ ಕಾರಣದಿಂದಾಗಿಯೇ ಇಬ್ಬರು ಕೂಡ ಈ ವೈವಾಹಿಕ ಜೀವನವನ್ನು ಬಿಟ್ಟು ಬೇರೆ ಆಗುವಂತಹ ಆಯ್ಕೆಯನ್ನೇ ಕೊನೆಯದಾಗಿ ಆಯ್ಕೆ ಮಾಡುತ್ತಾರೆ.

Law explained in Kannada – Kannada Law.

ಭಾರತದಂತಹ ಗೌರವವನ್ನು ಹೆಚ್ಚಾಗಿ ಕಾಣುವಂತಹ ದೇಶದಲ್ಲಿ ಕೂಡ ಇತ್ತೀಚಿನ ದಿನಗಳಲ್ಲಿ ವಿವಾಹ ವಿಚ್ಛೇದ ಎನ್ನುವುದು ಕಾಮನ್ ಆಗಿಬಿಟ್ಟಿದೆ ಎಂದರೆ ನಿಜಕ್ಕೂ ಕೂಡ ವಿಷಾದ ವ್ಯಕ್ತಪಡಿಸುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಬಹುದು. ಕೆಲವೊಮ್ಮೆ ವಿವಾಹ ವಿಚ್ಛೇದನ ಪ್ರಕರಣಗಳು ಶಾಂತ ರೀತಿಯಲ್ಲಿ ಬಗೆಹರಿಯುತ್ತವೆ ಇನ್ನು ಕೆಲವು ಸಂದರ್ಭಗಳಲ್ಲಿ ಗಂಡ ಅಥವಾ ಹೆಂಡತಿಯಲ್ಲಿ ಇಬ್ಬರಲ್ಲಿ ಒಬ್ಬರು ಸಮಸ್ಯೆಯನ್ನು ಉಂಟುಮಾಡುತ್ತಾರೆ. ಇನ್ನು ಈ ಸಂದರ್ಭದಲ್ಲಿ ಎರಡನೇ ಮದುವೆ(2nd marriage rules in India) ಆಗುವಂತಹ ಅವಕಾಶ ಇರುತ್ತದೆಯ ಎನ್ನುವಂತಹ ಅನುಮಾನಗಳು ಕೂಡ ಸಾಕಷ್ಟು ಜನರಿಗೆ ಇದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಮಾಡೋಣ.

ಇದನ್ನು ಕೂಡ ಓದಿ: ಇಲ್ಲಿದೆ ನೋಡಿ ಸುಲಭ Business ಐಡಿಯಾ. ಒಂದು ರೂಪಾಯಿ ಕೂಡ ಹೂಡಿಕೆ ಮಾಡದೆ ಇದ್ದರೂ, ಲಕ್ಷ ಲಕ್ಷ ಗಳಿಸಬಹುದು.. Business Idea

ಒಂದು ವೇಳೆ ನಿಮ್ಮ ಹೆಂಡತಿ ಅಥವಾ ಗಂಡ ಸಾಕಷ್ಟು ಸಮಯಗಳ ವರೆಗೆ ಕಾಣೆಯಾಗಿದ್ದರೆ ಆ ಸಂದರ್ಭದಲ್ಲಿ ಸಾಕಷ್ಟು ಸಂಸ್ಥೆಗಳು ಅಂದರೆ ಪಿಎಫ್(PF) ಹಾಗೂ ಆಸ್ತಿಯ ವಿಚಾರದಲ್ಲಿ ಅವರು ಏಳು ವರ್ಷಗಳವರೆಗೆ ಕಾಣಿಸಿಕೊಂಡಿಲ್ಲ ಎಂದಾದಲ್ಲಿ ಅವರನ್ನು ಜೀವಂತವಾಗಿಲ್ಲ ಎನ್ನುವುದಾಗಿ ಭಾವಿಸಲಾಗುತ್ತದೆ. ಒಂದು ವೇಳೆ ಅವರಿಗೆ ನೋಟಿಸ್ ಕಳುಹಿಸಿದ್ದರು ಕೂಡ ಅದಕ್ಕೆ ಅವರು ಪ್ರತಿಕ್ರಿಯಿಸಿದೆ ಹೋದಲ್ಲಿ ಹಾಗೂ ಏಳು ವರ್ಷಗಳ ಕಾಲ ಅವರು ನಿಮಗೆ ಯಾವುದೇ ವಿಚಾರದಲ್ಲಿ ಕೂಡ ಸಂಪರ್ಕವನ್ನು ಹೊಂದದೆ ಹೋದಲ್ಲಿ ಕಣ್ಮರೆ ಆಗಿದ್ದಲ್ಲಿ ಆ ಸಂದರ್ಭದಲ್ಲಿ ನಿಮಗೆ ಎರಡನೇ ಮದುವೆ ಆಗುವಂತಹ ಅವಕಾಶವನ್ನು ಕಾನೂನು ಮಾಡಿಕೊಡುತ್ತದೆ.

ಈ ಸಂದರ್ಭದಲ್ಲಿ ನಿಮ್ಮ ಬಳಿ ಅದಕ್ಕೆ ಸರಿಯಾಗಿರುವಂತಹ ದಾಖಲೆ ಪತ್ರಗಳು ಕೂಡ ಇರಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಯಾಕೆಂದರೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾದರೂ ಕೂಡ ಅದರಿಂದ ನೀವು ಕಾನೂನಾತ್ಮಕವಾಗಿ ಹೊರ ಬರಬಹುದಾದಂತಹ ಅವಕಾಶವನ್ನು ಹೊಂದಿರುತ್ತೀರಿ. ಈ ಸಂದರ್ಭದಲ್ಲಿ ಗಂಡ ಅಥವಾ ಹೆಂಡತಿ ಜೀವಂತವಾಗಿದ್ದರೆ ಆ ಸಂದರ್ಭದಲ್ಲಿ ಕೂಡ ನೀವು ಎರಡನೇ ಮದುವೆ ಆದರೆ ಎರಡನೇ ಮದುವೆ ಅಸಿಂಧುವಾಗುತ್ತದೆ ಎಂಬುದನ್ನು ಕೂಡ ನೀವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿರುತ್ತದೆ.

ಇದನ್ನು ಕೂಡ ಓದಿ: ಕೇವಲ 20 ಸಾವಿರದಲ್ಲಿ ಬರೋಬ್ಬರಿ 5 ಲಕ್ಷ ಲಾಭ ಪಡೆಯೋದು ಹೇಗೆ ಗೊತ್ತೇ? ಈ ಬಿಸಿನೆಸ್ ಮಾಡಿ ನೋಡಿ. Business Idea

ಒಂದಕ್ಕಿಂತ ಹೆಚ್ಚು ಮದುವೆಯಾದರೆ ಗಂಡ ಅಥವಾ ಹೆಂಡತಿಗೆ ಸೆಕ್ಷನ್ 499 ರ ಪ್ರಕಾರ ಶಿಕ್ಷೆ ಆಗುತ್ತದೆ ಎಂಬುದನ್ನು ಕೂಡ ಈ ಸಂದರ್ಭದಲ್ಲಿ ನೀವು ತಿಳಿದುಕೊಳ್ಳಬೇಕಾಗಿರುತ್ತದೆ. ಇದೇ ಕಾರಣಕ್ಕಾಗಿ ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಕಾನೂನು ಸಲಹೆಗಾರರ ಬಳಿ ಅಂದರೆ ವಕೀಲರ(Lawyer )ಬಳಿ ಇದರ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ನಂತರ ಮುಂದಿನ ಹೆಜ್ಜೆಯನ್ನು ಇಡುವುದು ಒಳ್ಳೆಯದು.

Comments are closed.