News from ಕನ್ನಡಿಗರು

ನಾಲ್ಕು ಕೆಜಿ ಚಿನ್ನ, 200 ಕೆಜಿ ಬೆಳ್ಳಿ, 55 ಲಕ್ಷದ ಕಾರು, ನೂರಾರು ಕೋಟಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟಮೇಲೆ ಗಂಡನ ವರಸೆ ಬದಲಾಗಿದ್ದು ಹೇಗೆ ಗೊತ್ತೇ??

0 209

ನಮಸ್ಕಾರ ಸ್ನೇಹಿತರೆ ಈಗಾಗಲೇ ನೀವು ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಹಲವಾರು ಬಾರಿ ಮದುವೆ ಆದ ನಂತರ ಹೆಣ್ಣು ಮಗಳು ಪಡುವ ಕಷ್ಟದ ಕುರಿತಂತೆ ಕೇಳಿರುತ್ತೀರಿ ಅದೇ ರೀತಿಯ ಒಂದು ನೈಜ ಘಟನೆ ಬಗ್ಗೆ ಇಂದು ನಾವು ನಿಮಗೆ ವಿವರಿಸಲು ಹೊರಟಿದ್ದೇವೆ.

ಈ ಮದುವೆಯಲ್ಲಿ ವರನಿಗೆ ನಾಲ್ಕು ಕೆಜಿ ಚಿನ್ನ 200 ಕೆಜಿ ಬೆಳ್ಳಿ 55 ಲಕ್ಷದ ಸೂಪರ್ ಕಾರ್ ಹಾಗೂ 6 ಕೋಟಿ ಮೌಲ್ಯದ ವೆಚ್ಚದಲ್ಲಿ ರಾಮೋಜಿ ಫಿಲಂ ಸಿಟಿಯಲ್ಲಿ ಮದುವೆ ಮಾಡಿಕೊಟ್ಟರು ಕೂಡ ಮದುವೆಯಾದ ಮೇಲೆ ಹೆಂಡತಿಗೆ ವರದಕ್ಷಣೆ ತೆಗೆದುಕೊಂಡು ಬಾ ಎಂಬುದಾಗಿ ಕಿರುಕು’ಳ ನೀಡುವುದನ್ನು ಮಾತ್ರ ಬಿಡಲಿಲ್ಲ. 2021 ರಲ್ಲಿ ಹೈದರಾಬಾದ್ ನ ಖ್ಯಾತ ಬಟ್ಟೆ ತಯಾರಿಕಾ ಸಂಸ್ಥೆಗಳ ಮಾಲೀಕ ಬೆಂಗಳೂರಿನ ಬಸವನಗುಡಿ ನಿವಾಸಿಯ ಸಂದೀಪ್ ಎನ್ನುವಾತನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿಸಿದ್ದ. ಕೇವಲ ಇಷ್ಟು ಮಾತ್ರವಲ್ಲದೆ ಆ ಹುಡುಗಿಯ ತಂದೆ ಹಲವಾರು ವಸ್ತ್ರ ಮಳಿಗೆಗಳ ಶೋರೂಮ್ ಗಳನ್ನು ಕೂಡ ಹೊಂದಿದ್ದರು. ಅದರಲ್ಲಿ ಎರಡು ಶೋರೂಮ್ ಗಳ ಲಾಭಾಂಶವನ್ನು ತಮ್ಮ ಅಳಿಯನ ಕೈಗೆ ಬರುವಂತೆ ಕೂಡ ಮಾಡಿದ್ದರು. ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು ಆದರೆ ಬರ ಬರುತ್ತಾ ಸಂದೀಪ್ ಈಗ ತನ್ನ ಪತ್ನಿಯ ಮೇಲೆ ನಡೆಸುತ್ತಿರುವ ಕೃತ್ಯ ನಿಜಕ್ಕೂ ಕೂಡ ಶೋಚನೀಯವಾಗಿದೆ ಎಂದು ಹೇಳಬಹುದಾಗಿದೆ.

ಪ್ರತಿ ದಿನ ಸಂದೀಪ್ ತನ್ನ ಹೆಂಡತಿಗೆ ಹೇಳಬಾರದ ಕೆಟ್ಟ ಭಾಷೆಯಲ್ಲಿ ಬಯುತ್ತಿದ್ದ. ಕೇವಲ ಇಷ್ಟು ಮಾತ್ರವಲ್ಲದೆ ಪ್ರತಿದಿನ ಕುಡಿದು ಹೆಂಡತಿಯ ಮೇಲೆ ದೈ’ಹಿಕ ಹ’ಲ್ಲೆಯನ್ನು ಕೂಡ ಮಾಡುತ್ತಿದ್ದ. ಇಷ್ಟು ಮಾತ್ರವಲ್ಲದೆ ತನ್ನ ಮನೆಯಲ್ಲಿಯೇ ಹೆಂಡತಿಯ ಎದುರು ತನ್ನ ಸ್ನೇಹಿತರ ಜೊತೆಗೆ ಮಾ’ದಕ ದ್ರವ್ಯಗಳನ್ನು ಸೇವಿಸುತ್ತಿದ್ದ. ಇದರಿಂದ ಸಂಪೂರ್ಣವಾಗಿ ಕುಗ್ಗಿ ಹೋಗಿರುವ ಸಂದೀಪ್ ನ ಪತ್ನಿ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ತನ್ನ ಪತಿಯ ವಿರುದ್ಧ ದೂರನ್ನು ದಾಖಲಿಸಿದ್ದಾಳೆ. ನಿಜಕ್ಕೂ ಕೂಡ ಇಷ್ಟೊಂದು ಖರ್ಚು ಮಾಡಿ ಹಣವನ್ನು ನೀಡಿ ಮದುವೆ ಮಾಡಿದರೂ ಕೂಡ ಹಣದ ದಾಹಕ್ಕಾಗಿ ಹೆಂಡತಿಗೆ ಈ ರೀತಿ ಕಿ’ರುಕುಳವನ್ನು ನೀಡುವ ಸಂದೀಪ್ ನಂತಹ ಪುರುಷರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.