Manasa Manohar: ಒಲವಿನ ನಿಲ್ದಾಣ ಧಾರಾವಾಹಿಗೆ ಬಂದಿರುವ ಮಾನಸ ಮನೋಹರ್ ರವರು ಪಡೆಯುತ್ತಿರುವ ಸಂಭಾವನೆಯ ಸಂಪೂರ್ಣ ವಿವರ.
Manasa Manohar: ಒಂದೆರಡು ವರ್ಷಗಳ ಹಿಂದೆ ಕನ್ನಡ ಕಿರುತೆರೆಯ ಭಾಷ್ಯವನ್ನೇ ಬದಲಾಯಿಸಿದ ಧಾರವಾಹಿ ಜೊತೆ ಜೊತೆಯಲಿ (Jothe Jotheyali). ಈ ಧಾರವಾಹಿ ಅದೆಂಥ ಕ್ರೇಜ್ ಸೃಷ್ಟಿ ಮಾಡಿತ್ತು ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಜೊತೆ ಜೊತೆಯಲಿ ಧಾರವಾಹಿಯಲ್ಲಿ ನಟಿಸಿದ ಎಲ್ಲಾ ಪಾತ್ರಗಳು ಕೂಡ ಜನರಿಗೆ ಬಹಳ ಇಷ್ಟವಾಗಿತ್ತು, ಅದರಲ್ಲಿ ಒಂದು, ಮೀರಾ ಹೆಗ್ಡೆ ಪಾತ್ರ. ಆರ್ಯವರ್ಧನ್ ಆಫೀಸ್ ನಲ್ಲಿ ಕೆಲಸ ಮಾಡುವ ಇದಾಗಿತ್ತು.
ಬಹಳಷ್ಟು ಪ್ರಾಮುಖ್ಯತೆ ಹೊಂದಿದ್ದ ಈ ಪಾತ್ರ ಸ್ಟ್ರಾಂಗ್ ಆಗಿಯೂ ಇತ್ತು, ಮೀರಾ ಹೆಗ್ಡೆ ಪಾತ್ರದಲ್ಲಿ ನಟಿ ಮಾನಸ ಮನೋಹರ್ (Manasa Manohar) ನಟಿಸಿದ್ದರು, ಈ ಪಾತ್ರಕ್ಕೆ ಉತ್ತಮವಾಗಿ ಜನಪ್ರಿಯತೆ ಕೂಡ ಸಿಕ್ಕಿತ್ತು. ಜೊತೆ ಜೊತೆಯಲಿ ಧಾರವಾಹಿ ಇತ್ತೀಚೆಗೆ ಮುಗಿದಿದ್ದು, ಇದೀಗ ಮಾನಸ (Manasa Manohar) ಅವರು ಮತ್ತೊಂದು ಧಾರವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ..ಅದು ಕಲರ್ಸ್ ಕನ್ನಡ ಧಾರವಾಹಿಯ ಒಲವಿನ ನಿಲ್ದಾಣ ಧಾರವಾಹಿ ಮೂಲಕ. ಇದನ್ನು ಓದಿ..Honeyrose: ನೋಡಲು ಅಪ್ಸರೆ, ಜನರು ಕೂಡ ಇಷ್ಟ ಪಡುತ್ತಾರೆ, ಆದರೂ ಹನಿರೋಸ್ ರವರಿಗೆ ಅವಕಾಶ ಸಿಗಲ್ಲ. ಯಾಕೆ ಗೊತ್ತೇ?
ಈ ಧಾರವಾಹಿಯಲ್ಲಿ ಈಗ ಆಸಕ್ತಿಕರ ಘಟ್ಟ ನಡೆಯುತ್ತಿದೆ. ಹೀರೋ ಸಿದ್ಧಾಂತ್ ಜೊತೆಗೆ ಹೀರೋಯಿನ್ ತಾರಿಣಿ ಮದುವೆಯಾಗಿ, ತಾರಿಣಿ ಸಿದ್ಧಾಂತ್ ಮನೆಗೆ ಬಂದಿದ್ದಾಳೆ. ಇತ್ತ ಸಿದ್ಧಾಂತ್ ಓದು ಮುಗಿಸಿದ ನಂತರ ಬೆಂಗಳೂರಿನ ಒಳ್ಳೆಯ ಕಂಪನಿಯಲ್ಲಿ ಅವನಿಗೆ ಕೆಲಸ ಸಿಕ್ಕಿದ್ದು, ಈ ಕಂಪನಿಯ ಬಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ ನಟಿ ಮಾನಸ ಮನೋಹರ್ (Manasa Manohar).
ಮೊದಲ ಸೀನ್ ನಲ್ಲಿ ಖಡಕ್ ಬಾಸ್ ಆಗಿ ಕಾಣಿಸಿಕೊಂಡಿದ್ದು, ಕಂಪನಿಯಲ್ಲಿ ಕೆಲಸ ಮಾಡುವ ಎಲ್ಲರಿಗು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಹೊಸ ಧಾರವಾಹಿಯ ಪಾತ್ರದಲ್ಲಿ ಆರಂಭದಲ್ಲೇ ಬಹಳ ಸ್ಟ್ರಾಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಬಾಸ್ ಅನ್ನು ನೋಡಿ ಸಿದ್ಧಾಂತ್ ಗಾಬರಿಯಾಗಿದ್ದಾನೆ. ಈ ಪಾತ್ರದ ಬಗ್ಗೆ ಇನ್ನೂ ಹೆಚ್ಚಾಗಿ ಏನನ್ನು ರಿವೀಲ್ ಮಾಡಿಲ್ಲ. ಬಾಸ್ ಈಗ ಸ್ಟ್ರಿಕ್ಟ್ ಆಗಿರುವ ಹಾಗೆ ತೋರಿಸಿರುವುದರಿಂದ ಮಾನಸ (Manasa Manohar) ಅವರದ್ದು.. ಇದನ್ನು ಓದಿ..Shakti Yojane: ಬಹಳ ಸುಲಭವಾಗಿ ಶಕ್ತಿ ಉಚಿತ ಪಾಸ್ ಗೆ ಮೊಬೈಲ್ ಅಥವಾ ಕಂಪ್ಯೂಟರ್ ನಿಂದ ಅರ್ಜಿ ಸಲ್ಲಿಸಿ.
ನೆಗಟಿವ್ ರೋಲ್ ಇರಬಹುದಾ, ಪಾಸಿಟಿವ್ ರೋಲ್ ಇರಬಹುದಾ ಎನ್ನುವುದು ಕೂಡ ಸರಿಯಾಗಿ ಅರ್ಥವಾಗಿಲ್ಲ. ಜೊತೆಗೆ ಇದು ಅತಿಥಿ ಪಾತ್ರವೋ ಅಥವಾ ದೀರ್ಘಕಾಲ ಇರುತ್ತೋ ಎನ್ನುವುದು ಕೂಡ ರಿವೀಲ್ ಆಗಿಲ್ಲ, ಆದರೆ ಈ ಪಾತ್ರಕ್ಕೆ ಮಾನಸ (Manasa Manohar) ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು ಎನ್ನುವ ಮಾತು ಕೇಳಿಬರುತ್ತಿದ್ದು, ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಮಾನಸ ಅವರಿಗೆ ಒಂದು ಎಪಿಸೋಡ್ ಗೆ 22 ಸಾವಿರ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ.. ಇದನ್ನು ಓದಿ..Hero Bikes: ದಿಡೀರ್ ಎಂದು ಕಹಿ ಸುದ್ದಿ ತಿಳಿಸಿದ ಹೀರೋ ಕಂಪನಿ – ಗ್ರಾಹಕರಿಗೆ ಕಹಿ ಸುದ್ದಿ.
Comments are closed.