ಮೇ ತಿಂಗಳಿನಲ್ಲಿ ನಾಲ್ಕು ಗ್ರಹಗಳ ಸ್ಥಾನಪಲ್ಲಟ ನಡೆಯಲಿದೆ, ಇದರಿಂದ ಯಾವ್ಯಾವ ರಾಶಿಗಳಿಗೆ ಸಿಗಲಿದೆ ಅದೃಷ್ಟ ಗೊತ್ತೇ?? ಎಷ್ಟೆಲ್ಲಾ ಅದೃಷ್ಟ ಗೊತ್ತೇ??

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಾಸ್ತ್ರದಲ್ಲಿ ಗ್ರಹಗಳ ರಾಶಿ ಬದಲಾವಣೆ ಎನ್ನುವುದು ಆಯಾಯ ರಾಶಿಯವರ ಮೇಲೆ ಪರಿಣಾಮವನ್ನು ಕೂಡ ಬೀರುತ್ತದೆ. ಇನ್ನು ಕಳೆದ ತಿಂಗಳು ಅಂದರೆ ಏಪ್ರಿಲ್ ತಿಂಗಳಿನಲ್ಲಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ 9 ಗ್ರಹಗಳು ಕೂಡ ತಮ್ಮ ರಾಶಿ ಬದಲಾವಣೆಯನ್ನು ಮಾಡಿದ್ದವು. ಇನ್ನು ಈ ತಿಂಗಳಿನಲ್ಲಿ ಕೂಡ 4 ಗ್ರಹಗಳು ಕೂಡ ತಮ್ಮ ರಾಶಿಯ ಬದಲಾವಣೆಯನ್ನು ಮಾಡಲಿವೆ‌. ಇದರಿಂದ ಯಾವ ಯಾವ ರಾಶಿಯವರಿಗೆ ಯಾವ ರೀತಿಯ ಪರಿಣಾಮ ಒದಗಿಬರಲಿದೆ ಎನ್ನುವುದನ್ನು ತಿಳಿದುಕೊಳ್ಳೋಣ.

ಮೊದಲಿಗೆ ಯಾವ ಗ್ರಹಗಳು ಯಾವ ರಾಶಿಗೆ ಪ್ರವೇಶಿಸಲಿವೆ ಎಂಬುದನ್ನು ಮೊದಲು ತಿಳಿದುಕೊಳ್ಳೋಣ ಬನ್ನಿ. ಗ್ರಹಗಳ ಅಧಿಪತಿಯಾಗಿರುವ ಸೂರ್ಯ ಮೇ 15ರಂದು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಂಗಳಗ್ರಹ ಮೇ 17ರಂದು ಮೀನ ರಾಶಿಯನ್ನು ಪ್ರವೇಶಿಸಲಿದೆ. ಶುಕ್ರಗ್ರಹ ಮೇ 23ರಂದು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಬುಧ ಗ್ರಹ ಮೇ10ರಂದು ವೃಷಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಇವಿಷ್ಟು ಈ ತಿಂಗಳಿನಲ್ಲಿ ರಾಶಿ ಬದಲಾವಣೆ ಮಾಡುವಂತಹ ಗ್ರಹಗಳಾಗಿವೆ.

surya deva astro horo | ಮೇ ತಿಂಗಳಿನಲ್ಲಿ ನಾಲ್ಕು ಗ್ರಹಗಳ ಸ್ಥಾನಪಲ್ಲಟ ನಡೆಯಲಿದೆ, ಇದರಿಂದ ಯಾವ್ಯಾವ ರಾಶಿಗಳಿಗೆ ಸಿಗಲಿದೆ ಅದೃಷ್ಟ ಗೊತ್ತೇ?? ಎಷ್ಟೆಲ್ಲಾ ಅದೃಷ್ಟ ಗೊತ್ತೇ??
ಮೇ ತಿಂಗಳಿನಲ್ಲಿ ನಾಲ್ಕು ಗ್ರಹಗಳ ಸ್ಥಾನಪಲ್ಲಟ ನಡೆಯಲಿದೆ, ಇದರಿಂದ ಯಾವ್ಯಾವ ರಾಶಿಗಳಿಗೆ ಸಿಗಲಿದೆ ಅದೃಷ್ಟ ಗೊತ್ತೇ?? ಎಷ್ಟೆಲ್ಲಾ ಅದೃಷ್ಟ ಗೊತ್ತೇ?? 3

ಮೊದಲಿಗೆ ಗ್ರಹಗಳ ಅಧಿಪತಿಯಾಗಿರುವ ಸೂರ್ಯ ಗ್ರಹವು ಮೇಷ ರಾಶಿಯಲ್ಲಿ ಚಲಿಸುವುದರಿಂದಾಗಿ ಹಾಗೂ ಇಲ್ಲಿ ರಾಹು ಕೂಡ ಕುಳಿತಿರುವುದರಿಂದಾಗಿ ಮೇಷ ರಾಶಿಯವರಿಗೆ ಶುಭ ದಿನಗಳು ಕಾದಿವೆ. ಮೇ 15ರಿಂದ ಸೂರ್ಯ ಗ್ರಹವು ವೃಷಭರಾಶಿಯಲ್ಲಿ ಕೂಡ ಕಾಣಿಸಿಕೊಳ್ಳುವುದರಿಂದ ಆಗಿ ವೃಷಭ ರಾಶಿಯವರಿಗೆ ಕೂಡ ಉತ್ತಮ ದಿನಗಳು ಕಾಣ ಸಿಗಲಿವೆ. ಹೀಗಾಗಿ ಸೂರ್ಯನ ಅನುಗ್ರಹದಿಂದಾಗಿ ಸಂದರ್ಭದಲ್ಲಿ ಮೇಷ ಹಾಗೂ ವೃಷಭ ರಾಶಿ ರವರು ಉತ್ತಮ ಲಾಭವನ್ನು ಕಾಣಲಿದ್ದಾರೆ ಎಂದು ಹೇಳಬಹುದಾಗಿದೆ.

ಅದರಲ್ಲೂ ವ್ಯಾಪಾರ ವಹಿವಾಟಿನಲ್ಲಿ ವೃಷಭರಾಶಿಯವರು ದೊಡ್ಡಮಟ್ಟದ ಲಾಭವನ್ನು ಪಡೆದುಕೊಳ್ಳಲಿದ್ದಾರೆ. ತಮ್ಮ ಬುದ್ಧಿ ಶಕ್ತಿಯಿಂದಾಗಿ ಹಲವಾರು ಸ್ಪರ್ಧಾತ್ಮಕ ವಿಚಾರಗಳಲ್ಲಿ ಪ್ರಶಸ್ತಿಯನ್ನು ಗೆಲ್ಲುವಂತಹ ಸಾಮರ್ಥ್ಯವನ್ನು ಕೂಡ ಸಾಬೀತುಪಡಿಸಲಿದ್ದಾರೆ. ಇದೇ ರೀತಿ ಹಲವಾರು ಒಳ್ಳೆಯ ಕಾರ್ಯಗಳಿಂದಾಗಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗೌರವಗಳನ್ನು ಕೂಡ ಪಡೆದುಕೊಳ್ಳುತ್ತಾರೆ. ಉದ್ಯೋಗ ಕ್ಷೇತ್ರದಲ್ಲಿ ಕೂಡ ಗಮನಾರ್ಹ ಸಾಧನೆಯನ್ನು ಮಾಡಲಿದ್ದಾರೆ.

ಮೇ 10 ರಿಂದ ಬುಧ ಗ್ರಹವು ಹಿಮ್ಮುಖವಾಗಿ ಚಲಿಸುವ ಕಾರಣದಿಂದಾಗಿ ವೃಷಭ ರಾಶಿಯವರಿಗೆ ಕೂಡ ಇದರಲ್ಲಿ ಲಾಭಾಂಶ ದೊರೆಯಲಿದೆ. ಹಲವಾರು ಸಮಯಗಳಿಂದ ತಟಸ್ಥವಾಗಿ ನಿಂತುಕೊಂಡಿದ್ದ ಪ್ರಮೋಷನ್ ಕೂಡ ಈ ಸಮಯದಲ್ಲಿ ದೊರೆಯಲಿದೆ. ಬುಧ ಗ್ರಹದ ಹಿನ್ನಡೆಯಿಂದ ವೃಷಭ ರಾಶಿಯವರಿಗೆ ಸರ್ಕಾರಿ ಉದ್ಯೋಗಗಳು ಕೂಡ ದೊರೆಯುವ ಸಾಧ್ಯತೆ ದಟ್ಟವಾಗಿದೆ ಎಂಬುದಾಗಿ ಉಲ್ಲೇಖವಾಗಿದೆ. ಹಲವಾರು ಸಮಯಗಳಿಂದ ಸಂತಾನ ಸಮಸ್ಯೆಯಿಂದ ಮಗುವಿಗಾಗಿ ಎದುರು ನೋಡುತ್ತಿರುವವರು ಕೂಡ ಸಂತಾನ ಭಾಗ್ಯವನ್ನು ಹೊಂದಲಿದ್ದಾರೆ.

ಇನ್ನು ಈಗ ಮಂಗಳಗ್ರಹದ ಕುರಿತಂತೆ ಮಾತನಾಡುವುದಾದರೆ ಮೇ 17ರಂದು ಕುಂಭ ರಾಶಿಯಿಂದ ಮೀನರಾಶಿಗೆ ಚಲಿಸುತ್ತದೆ. ಈ ಸಂದರ್ಭದಲ್ಲಿ ಮಂಗಳನು ಮೀನರಾಶಿಯ ಮೂರನೇ ಮನೆಯಿಂದ ಚಲಿಸುವಾಗ ಇವರಿಗೆ ಹಲವಾರು ವಿಚಾರಗಳ ಕುರಿತಂತೆ ಜಾಗೃಕತೆ ಯಿಂದ ಇರಬೇಕಾದಂತಹ ಪರಿಸ್ಥಿತಿ ಒದಗಿ ಬರುತ್ತದೆ. ಕೊಂಚಮಟ್ಟಿಗೆ ಮೀನ ರಾಶಿಯವರು ಈ ಕುರಿತು ಜಾಗುರೂಕರಾಗಿರಬೇಕು. ಅದರಲ್ಲೂ ಪೊಲೀಸ್ ಹಾಗೂ ಚಿನ್ನಾಭರಣಗಳ ವಿಚಾರದ ಕುರಿತಂತೆ ಮೀನರಾಶಿಯವರ ಎಚ್ಚರಿಕೆಯಿಂದ ಕಾಲಿಡುವುದು ಉತ್ತಮವಾಗಿದೆ.

shukra deva horoscope astro | ಮೇ ತಿಂಗಳಿನಲ್ಲಿ ನಾಲ್ಕು ಗ್ರಹಗಳ ಸ್ಥಾನಪಲ್ಲಟ ನಡೆಯಲಿದೆ, ಇದರಿಂದ ಯಾವ್ಯಾವ ರಾಶಿಗಳಿಗೆ ಸಿಗಲಿದೆ ಅದೃಷ್ಟ ಗೊತ್ತೇ?? ಎಷ್ಟೆಲ್ಲಾ ಅದೃಷ್ಟ ಗೊತ್ತೇ??
ಮೇ ತಿಂಗಳಿನಲ್ಲಿ ನಾಲ್ಕು ಗ್ರಹಗಳ ಸ್ಥಾನಪಲ್ಲಟ ನಡೆಯಲಿದೆ, ಇದರಿಂದ ಯಾವ್ಯಾವ ರಾಶಿಗಳಿಗೆ ಸಿಗಲಿದೆ ಅದೃಷ್ಟ ಗೊತ್ತೇ?? ಎಷ್ಟೆಲ್ಲಾ ಅದೃಷ್ಟ ಗೊತ್ತೇ?? 4

ಇನ್ನು ಮಂಗಳಕಾರಕ ಶುಕ್ರಗ್ರಹ ಮೇ 23ರಂದು ಮೀನ ರಾಶಿಯನ್ನು ಬಿಟ್ಟು ಮೇಷರಾಶಿಗೆ ಕಾಲಿಡಲಿದ್ದಾನೆ. ಮೇಷ ರಾಶಿಯ ಏಳನೇ ಮನೆಯಲ್ಲಿ ಸಂದರ್ಭದಲ್ಲಿ ಶುಕ್ರ ಕಾಲಿಡುತ್ತಾನೆ. ಈ ಸಂದರ್ಭದಲ್ಲಿ ಮೇಷ ರಾಶಿಯವರಿಗೆ ಸಾಕಷ್ಟು ಲಾಭಗಳು ಒದಗಿ ಬರಲಿವೆ. ವ್ಯಾಪಾರದಲ್ಲಿ ಹಲವಾರು ಹೊಸ ಡೀಲ್ ಗಳು ಹಾಗೂ ಕೆಲಸದಲ್ಲಿ ಉತ್ತಮ ಸಂಭಾವನೆ ಏರಿಕೆ ಕಂಡು ಬರಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ತಿಂಗಳಿನಲ್ಲಿ ಮೇಷ ರಾಶಿಯವರಲ್ಲಿ ಅವಿವಾಹಿತರಿದ್ದರೆ ಅವರಿಗೆ ಖಂಡಿತವಾಗಿ ಅತ್ಯಂತ ಶೀಘ್ರದಲ್ಲೇ ಕಂಕಣಭಾಗ್ಯ ಕೂಡಿ ಬರಲಿದೆ. ಇಷ್ಟು ಕಾರ್ಯಗಳು ಈ ಬಾರಿಯ ನಾಲ್ಕು ಗ್ರಹಗಳ ರಾಶಿ ಬದಲಾವಣೆಯ ಕಾರಣದಿಂದಾಗಿ ಆಯಾಯ ರಾಶಿಚಕ್ರದವರ ಮೇಲೆ ನಡೆಯಲಿದೆ. ಇವುಗಳ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.