ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು, ಯಾರಿಗೂ ತಿಳಿಯದಂತೆ ಗೂಗಲ್ ನಲ್ಲಿ ಏನೆಲ್ಲಾ ಹುಡುಕುತ್ತಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರತಿಯೊಂದು ಹುಡುಗಿಯು ಕೂಡ ತನ್ನ ಮದುವೆಯ ಕುರಿತಂತೆ ಸಾಕಷ್ಟು ಕನಸುಗಳನ್ನು ಹೊಂದಿರುತ್ತಾರೆ. ಹೀಗಾಗಿ ಮದುವೆ ಆಗಿ ಗಂಡನ ಮನೆಗೆ ಹೋದನಂತರ ಹಲವಾರು ವಿಚಾರಗಳನ್ನು ಮೊದಲ ಬಾರಿಗೆ ಆಕೆ ನೋಡಬೇಕಾಗಿ ಬರುತ್ತದೆ. ಸಾಮಾನ್ಯವಾಗಿ ನಾವು ಏನೇ ಗೊಂದಲಗಳಿದ್ದರೂ ಕೂಡ ಮೊದಲು ಅದನ್ನು ಹುಡುಕುವುದು ಗೂಗಲ್ನಲ್ಲಿ.

ಗೂಗಲ್ ಎನ್ನುವುದು ಪ್ರತಿಯೊಬ್ಬರ ಜೀವನದ ಒಂದು ಪ್ರಮುಖ ಭಾಗವೇ ಆಗಿಬಿಟ್ಟಿದೆ. ಇತ್ತೀಚಿಗೆ ಗೂಗಲ್ ತನ್ನ ಡೇಟಾವನ್ನು ಬಹಿರಂಗಪಡಿಸಿದ್ದು ಅದರಲ್ಲಿ ನವವಿವಾಹಿತ ಹುಡುಗಿಯರು ಗೂಗಲ್ನಲ್ಲಿ ಹೆಚ್ಚಾಗಿ ಹುಡುಕುವುದು ಏನು ಎಂಬುದನ್ನು ಬಹಿರಂಗಪಡಿಸಿದೆ. ಹಾಗಿದ್ದರೆ ಮದುವೆಯಾದ ನಂತರ ಹುಡುಗಿಯರು ಹೆಚ್ಚಾಗಿ ಹುಡುಕುವುದೇನು ಎಂಬುದನ್ನು ತಿಳಿಯೋಣ ಬನ್ನಿ. ಮೊದಲಿಗೆ ಹೆಂಡತಿ ಗಂಡನನ್ನು ಸಂತೋಷವಾಗಿ ರಿಸುವ ಬಗೆ ಹೇಗೆ ಎನ್ನುವುದರ ಕುರಿತಂತೆ ಗೂಗಲ್ ನಲ್ಲಿ ಹೆಚ್ಚಾಗಿ ಸರ್ಚ್ ಮಾಡುತ್ತಾಳೆ.

ಮದುವೆ ನಂತರ ಜೀವನದಲ್ಲಿ ಪ್ರಮುಖ ಬದಲಾವಣೆ ಕಂಡು ಬರುವ ಹಿನ್ನೆಲೆ ಇದಕ್ಕಾಗಿ ತಯಾರಿ ಮಾಡಿಕೊಳ್ಳಲು ಇದು ಪ್ರಮುಖ. ಇನ್ನು ಮುಂದೆ ನೋಡುವುದಾದೆ ನವವಿವಾಹಿತೆ ಗಂಡನ ಹೃದಯವನ್ನು ಗೆಲ್ಲುವ ಬಗ್ಗೆ ಹುಡುಕುತ್ತಾಳೆ. ನಂತರ ಗಂಡನ ಮನೆಗೆ ಬಂದಮೇಲೆ ಸೊಸೆಯಾಗಿ ಮನೆಯ ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸಬೇಕು. ಹೀಗಾಗಿ ಕುಟುಂಬವನ್ನು ಹೇಗೆ ನೋಡಿಕೊಳ್ಳಬೇಕು ಎಂದು ಕೂಡ ಗೂಗಲ್ ನಲ್ಲಿ ಸರ್ಚ್ ಮಾಡುತ್ತಾರೆ. ಗಂಡನ ಮನೆಯಲ್ಲಿ ಪ್ರಮುಖವಾಗಿ ಅತ್ತೆ ಹಾಗೂ ಮಾವನನ್ನು ಮೆಚ್ಚಿಸುವುದು ಪ್ರಮುಖ ಆಗಿರುತ್ತದೆ. ಹೀಗಾಗಿ ಅತ್ತೆ ಸೇರಿದಂತೆ ಮನೆಯ ಪ್ರಮುಖ ಸದಸ್ಯರ ಮನಸ್ಸನ್ನು ಗೆಲ್ಲುವುದು ಹೇಗೆ ಎಂಬುದರ ಕುರಿತಂತೆ ಕೂಡ ಗೂಗಲ್ನಲ್ಲಿ ಹೆಚ್ಚಾಗಿ ಸರ್ಚ್ ಮಾಡುತ್ತಾರೆ. ಇವೇ ನವ ವಿವಾಹಿತ ಹುಡುಗಿಯರು ಗೂಗಲ್ ನಲ್ಲಿ ಹೆಚ್ಚಾಗಿ ಸರ್ಚ್ ಮಾಡೋದು.

Comments are closed.