Pratham: ಅಶ್ವಿನಿ ಮೇಡಂ ಸಹಾಯ ಪಡೆದುಕೊಂಡು ಮೇಲಕ್ಕೆ ಬಂದಿರುವವರಿಗೆ ಖಡಕ್ ಆಗಿ ಟಾಂಗ್ ಕೊಟ್ಟ ಪ್ರಥಮ್.
Pratham: ನಟ ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಒಳ್ಳೆ ಹುಡುಗ ಪ್ರಥಮ್ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಇವರು ಸ್ಯಾಂಡಲ್ ವುಡ್ ನಲ್ಲಿ ಹೀರೋ ಆಗು ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರಥಮ್ ಅವರು ಬಿಗ್ ಬಾಸ್ ಶೋ ಇಂದ ಹೆಚ್ಚು ಖ್ಯಾತಿ ಗಳಿಸಿದರು. ಬಳಿಕ ಈಗ ಸಿನಿಮಾ ನಿರ್ದೇಶನ ಎಲ್ಲವನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಇವರ ಬಗ್ಗೆ ಒಂದು ಮಾತು ಕೇಳಿಬಂದಿತ್ತು..
ಅದೇನು ಎಂದರೆ, ಪ್ರಥಮ್ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಸಹಾಯ ಪಡೆದು ಚಿತ್ರರಂಗದಲ್ಲಿ ಬೆಳೆಯುತ್ತಿದ್ದಾರೆ ಎನ್ನುವ ಮಾತನ್ನು ಕೆಲವರು ಹೇಳಿದ್ದರು. ಪ್ರಥಮ್ ಅವರ ನಟ ಭಯಂಕರ ಸಿನಿಮಾಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸಾಥ್ ನೀಡಿದ್ದರು. ಸಿನಿಮಾದ ಒಂದು ಹಾಡನ್ನು ಬಿಡುಗಡೆ ಮಾಡಿದ್ದರು. ಅದೆಲ್ಲದರ ಬಳಿಕ ಈ ಥರದ ಮಾತೊಂದು ಪ್ರಥಮ್ ಅವರ ಬಗ್ಗೆ ಕೇಳಿಬಂದಿತ್ತು. ಅಂಚೆ ಕಚೇರಿಯ ಈ ಯೋಜನೆ ಬಳಸಿಕೊಂಡು 35 ಲಕ್ಷ ರೂಪಾಯಿ ಗಳಿಸಬಹುದು- ಯೋಜನೆಯ ಸಂಪೂರ್ಣ ಡೀಟೇಲ್ಸ್.
ಈಗ ಅಪ್ಪು ಅವರು ಇದ್ದಾಗ ಅಪ್ಪು ಅವರಿಗೆ ಬಹಳ ಇಷ್ಟವಾಗಿದ್ದ ಕಥೆಗಳಲ್ಲಿ ಒಂದು ಆಚಾರ್ ಅಂಡ್ ಕೋ ಸಿನಿಮಾ ತಯಾರಾಗಿ ಬಿಡುಗಡೆಗೆ ಸಿದ್ಧವಾಗಿದೆ. ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಯ ಸಿನಿಮಾ ನಿರ್ಮಾಣ ಮಾಡಿದ್ದು, ಸಿಂಧು ಶ್ರೀನಿವಾಸಮೂರ್ತಿ ಅವರು ನಿರ್ದೇಶನ ಮಾಡಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸಿನಿಮಾ ಟ್ರೈಲರ್ ಬಿಡುಗಡೆ ವೇಳೆ, ನಾನು ಸಿನಿಮಾ ನೋಡಿದ್ದೇನೆ ತುಂಬಾ ಚೆನ್ನಾಗಿ ಮೂಡಿಬಂದಿದೆ, ಸಿಂಧು ಶ್ರೀನಿವಾಮೂರ್ತಿ ಅವರಿಗೆ ಶುಭವಾಗಲಿ ಎಂದು ಹಾರೈಸಿದ್ದರು. ಇದೀಗ ನಟ ಪ್ರಥಮ್ ಅವರು ಕೂಡ ಆಚಾರ್ ಅಂಡ್ ಕೋ ಸಿನಿಮಾ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಸಿನಿಮಾ ಬಗ್ಗೆ ಹೇಳುವುದರ ಜೊತೆಗೆ ತಾವು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಸಹಾಯ ಪಡೆದು ಬೆಳೆದಿದ್ದು ಎಂದು ಹೇಳಿದ ಎಲ್ಲರಿಗೂ ಉತ್ತರ ಸಹ ಕೊಟ್ಟಿದ್ದಾರೆ. “ದಯವಿಟ್ಟು ಗಮನಿಸಿ; ಸಿನಿಮಾ ಮಾಡೋರೆಲ್ಲರೂ(almost) @Ashwini_PRK maam ಸಹಾಯ ತಗೊಳ್ತಾರೆ, ನಾನು ಸಹಿತ ಎಲ್ಲರೂ #ಅಪ್ಪು ಹೆಸರನ್ನ ನಮ್ಮಿಷ್ಟಕ್ಕೆ ಬೇಕೆಂದಾಗಲೆಲ್ಲಾ ಬಳಸಿಕೊಂಡಿದ್ದೀವಿ; ಯಾರಾದ್ರೂ ಒಬ್ರು ಅವ್ರ production ಸಿನಿಮಾ ಬರೋವಾಗ ನೆನಪಿಸಿಕೊಂಡ್ರಾ? share ಮಾಡಿದ್ರಾ? 28ನೇ ತಾರೀಖು ಏನೇ ಕೆಲಸ ಇರ್ಲಿ, PRK production film ಆಚಾರ್ಯ &co theatreಲಿ ನೋಡೋಣ. ಜುಜುಬಿ ಹತ್ತು ಸಾವಿರ ಹಣ ಹಾಕಿ ಈ ಬಿಸಿನೆಸ್ ಆರಂಭಿಸಿ- ಲಕ್ಷದಲ್ಲಿ ಲಾಭ ಎಣಿಸಿ. ನಿಮಗೆ ನೀವೇ ಬಾಸ್.
ಅಶ್ವಿನಿ ma’am ನಿಮ್ಮ ಜೊತೆ ನಾವಿರ್ತೀವಿ ಅಂತ ಹೇಳೋದರ ನಿಜವಾದ ಅರ್ಥ;” ಎಂದು ಬರೆದುಕೊಂಡಿದ್ದಾರೆ ನಟ ಪ್ರಥಮ್. ಜನರ ಮಾತಿಗೆ ಪ್ರಥಮ್ ಅವರು ಈ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಈಗ ಈ ಪೋಸ್ಟ್ ವೈರಲ್ ಆಗುತ್ತಿದೆ. ಈಗ ಜನರು ಅಪ್ಪು ಅವರ ಇಷ್ಟದ ಪ್ರಾಜೆಕ್ಟ್ ಅನ್ನು ಥಿಯೇಟರ್ ನಲ್ಲಿ ನೋಡುವುದಕ್ಕೆ ಕಾಯುತ್ತಿದ್ದಾರೆ. ಜುಲೈ 28ರಂದು ಸಿನಿಮಾ ಬಿಡುಗಡೆ ಆಗಲಿದೆ.
Comments are closed.