Rahu Horoscope: ಇನ್ನು 18 ತಿಂಗಳು ಈ ರಾಶಿಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಇವರೇ ಕಿಂಗ್. ರಾಹು ಕಾಪಾಡುವುದು ಯಾರನ್ನು ಗೊತ್ತೇ? ಯಾವ ರಾಶಿಗಳಿಗೆ ಅದೃಷ್ಟ ಗೊತ್ತೆ?
Rahu Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಪ್ರತಿ ಗ್ರಹದ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಬದಲಾವಣೆ ಶುಭಫಲ ತಂದರೆ, ಇನ್ನು ಕೆಲವು ಬದಲಾವಣೆ ಅಶುಭಫಲ ತರುತ್ತದೆ. ಈ ವರ್ಷ ಆಕ್ಟೊಬರ್ 30ರಂದು ಮಧ್ಯಾಹ್ನ 12:30ಕ್ಕೆ ರಾಹು ಗ್ರಹವು ಮೀನ ರಾಶಿಗೆ ಪ್ರವೇಶ ಮಾಡುತ್ತದೆ. ಇದರಿಂದ ಮೂರು ರಾಶಿಗಳಿಗೆ ಅದೃಷ್ಟ ಶುರುವಾಗುತ್ತದೆ, ತೊಂದರೆಗಳಿಂದ ಇವರನ್ನು ರಾಹು ಕಾಪಾಡುತ್ತಾನೆ. ಹಾಗಿದ್ದರೆ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ರಾಶಿಯವರಿಗೆ ರಾಹು ಗ್ರಹದ ಸ್ಥಾನ ಬದಲಾವಣೆ ಒಳ್ಳೆಯಫಲ ಹಾಗೂ ಒಳ್ಳೆಯದನ್ನು ಮಾಡುತ್ತದೆ. ಇವರಿಗೆ ವಿಶೇಷವಾದ ವಿತ್ತೀಯ ಪ್ರಯೋಜನಗಳು ಸಿಗುತ್ತದೆ. ಇವರ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಆದಾಯ ಜಾಸ್ತಿಯಾಗುತ್ತದೆ ಹಾಗೆಯೇ ಕೆಲಸದಲ್ಲಿ ಏಳಿಗೆ ಕಾಣುತ್ತೀರಿ.. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ.
ಕರ್ಕಾಟಕ ರಾಶಿ :- ರಾಹುವಿನ ಸ್ಥಾನ ಬದಲಾವಣೆ ಇವರಿಗೆ ಶುಭ ತರುತ್ತದೆ. ಈ ರಾಶಿಯವರಿಗೆ ಬ್ಯುಸಿನೆಸ್ ನಲ್ಲಿ ಲಾಭವಾಗುತ್ತದೆ. ನಿಮಗೆ ಹೊಸದಾಗಿ ಮನೆ ಕಟ್ಟಿಸುವ ಮತ್ತು ವಾಹನ ಕೊಂಡುಕೊಳ್ಳುವ ಯೋಗವಿದೆ. ಈ ಸಮಯದಲ್ಲಿ ತಾಳ್ಮೆ ಬಹಳ ಮುಖ್ಯ.
ಮೀನ ರಾಶಿ :- ರಾಹು ಗ್ರಹವು ಈ ರಾಶಿಗೆ ಪ್ರವೇಶ ಮಾಡಲಿದ್ದು, ಇವರಿಗೆ ಶುಭವಾಗುತ್ತದೆ.. ಹಣಕಾಸಿನ ವಿಷಯದಲ್ಲಿ ಏಳಿಗೆ ಕಾಣುತ್ತೀರಿ. ಬೇರೆಯವರಿಗೆ ಸಾಲ ಕೊಟ್ಟಿರುವ ಹಣ ವಾಪಸ್ ಬರುತ್ತದೆ. ಕೆಲಸದಲ್ಲಿ ಏಳಿಗೆ ಕಾಣುತ್ತೀರಿ. ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ.
Comments are closed.