Kannada News: ಚಿಕ್ಕ ವಯಸ್ಸಿಗೆ ಮದುವೆಯಾದಳು, ವಿಚ್ಚೇದನ ಕೊಟ್ಟಳು. ಪಕ್ಕದ ಮನೆಯವನ ಜೊತೆ ಪ್ರೀತಿ. ಆತ ಹಣ ಕೇಳಿದ ಎಂದು ಎಂತಹ ತ್ಯಾಗ ಮಾಡಲು ಮುಂದಾಗಿದ್ದಳು ಗೊತ್ತೇ?
Kannada News: ಪ್ರೀತಿ ಮಾಡೋದಕ್ಕೆ ಶುರು ಮಾಡಿದರೆ ಹೃದಯ ಕುರುಡಾಗಿ ಬಿಡುತ್ತದೆ ಎನ್ನುವುದು ಬಹಳ ಸತ್ಯವಾದ ಮಾತು. ಹುಡುಗನ ಮೇಲಿನ ಪ್ರೀತಿಯಿಂದ ಹುಡುಗಿಯರು ಏನನ್ನು ಬೇಕಾದರೂ ಮಾಡಲು ತಯಾರಾಗಿರುತ್ತಾರೆ. ಅಂಥದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ. ತನ್ನ ಬಾಯ್ ಫ್ರೆಂಡ್ ಅನ್ನು ಮದುವೆಯಾಗಲು ಹೋದ ಈ ಹುಡುಗಿಗೆ ಅವನು ಹಣ ಕೊಡಬೇಕು ಎಂದು ಹೇಳಿದ್ದಕ್ಕೆ ಆಕೆ ಎಂಥ ನಿರ್ಧಾರ ಮಾಡಿದ್ದಾಳೆ ಗೊತ್ತಾ?

ಈ ಹುಡುಗಿಯ ಹೆಸರು ಸ್ವಾತಿ, ಈಕೆ ಬಿಹಾರದಲ್ಲಿ ವಾಸ ಮಾಡುತ್ತಿದ್ದ ಹುಡುಗಿ, ಇವಳಿಗೆ ಮದುವೆಯಾಗಿ ಗಂಡನಿಂದ ಮೋಸ ಹೋಗಿ, ಬಿಹಾರದಲ್ಲಿ ತಂದೆ ಮನೆಯಲ್ಲಿ ಬಂದು ನೆಲೆಸಿದ್ದಳು. ಆಗ ಅಲ್ಲೇ ಹತ್ತಿರದಲ್ಲಿದ್ದ ಒಬ್ಬ ಹುಡುಗನ ಪರಿಚಯವಾಯಿತು. ಇಬ್ಬರು ಪ್ರೀತಿಸುವುದಕ್ಕೆ ಶುರು ಮಾಡಿದರು. ಸ್ವಾತಿಗೆ ಅವನ ಮೇಲಿನ ವಿಪರೀತ ಪ್ರೀತಿಯಿಂದ, ಆ ಹುಡುಗನನ್ನು ಮದುವೆಯಾಗಬೇಕು ಎಂದುಕೊಂಡಳು.
ಆತ ಮೊರಾದಾಬಾದ್ ನಲ್ಲಿ ಕೆಲಸ ಮಾಡುತ್ತಿದ್ದ, ಅಲ್ಲಿಯೇ ಹೋಗಿ ಅವನ ಜೊತೆಗೆ ಮದುವೆಯಾಗಬೇಕು ಎಂದುಕೊಂಡಳು. ಆದರೆ ಅಲ್ಲಿಗೆ ಹೋದಮೇಲೆ ಆತ 80 ಸಾವಿರ ಹಣ ಕೊಟ್ಟರೆ ಮದುವೆ ಆಗುತ್ತೇನೆ ಎಂದು ಹೇಳಿದ್ದಾನೆ. ಅವನಿಗೆ ಹೇಗಾದರೂ ಮಾಡಿ ಹಣಕೊಡಲೇಬೇಕು ಎಂದು ನಿರ್ಧಾರ ಮಾಡಿದ ಸ್ವಾತಿ, ದೆಹಲಿಗೆ ಹೋಗಿ ಕಿಡ್ನಿ ಮಾರಾಟ ಮಾಡುವ ಪ್ರಯತ್ನ ಮಾಡಿದ್ದಾಳೆ. ವೈದ್ಯರಿಗೆ ಆಕೆಯ ಮೇಲೆ ಅನುಮಾನ ಬಂದು, ತಕ್ಷಣವೇ ಆಕೆಯ ಬಗ್ಗೆ ದೆಹಲಿ ಮಹಿಳಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.
ಅಲ್ಲಿನ ಅಧ್ಯಕ್ಷರಾದ ಸ್ವಾತಿ ಜೈಹಿಂದ್ ಅವರು ಸ್ಥಳಕ್ಕೆ ಬಂದು, ಆಕೆಯನ್ನು ಕರೆದುಕೊಂಡು ಹೋಗಿ ಕೌನ್ಸಿಲಿಂಗ್ ಮಾಡಿದ್ದಾರೆ. ಆಕೆಯ ತಂದೆ ತಾಯಿಯನ್ನು ಕರೆಸಿದ್ದಾರೆ. ಆದರೆ ಆ ಹುಡುಗಿ ಮಾತ್ರ ತನ್ನ ಬಾಯ್ ಫ್ರೆಂಡ್ ವಿರುದ್ಧ ದೂರು ಕೊಡುವುದಕ್ಕೆ ರೆಡಿ ಇಲ್ಲ. ಒಟ್ಟಿನಲ್ಲಿ ಆಕೆ ಪರಿಸ್ಥಿತಿಯನ್ನು ಆರ್ಥ ಮಾಡಿಕೊಳ್ಳುವ ಹಾಗೆ ಮಾಡಿ, ತಂದೆ ತಾಯಿ ಜೊತೆಗೆ ಮನೆಗೆ ಕಳಿಸಿದ್ದಾರೆ.
Comments are closed.