Kannada News: ಕೆಲಸಕ್ಕೆ ಎಂದು ಹೊರಗಡೆ ಹೋಗಿ, ಈ ಐನಾತಿ ಹೆಣ್ಣು ಏನು ಮಾಡಿದ್ದಾಳೆ ಗೊತ್ತೇ? ಫೋನ್ ಸ್ವಿಚ್ ಆಫ್ ಆದ ಬಳಿಕ ಏನಾಗಿದೆ ಗೊತ್ತೇ?
Kannada News: ಈಗಿನ ಕಾಲದಲ್ಲಿ ಜನರು ತಮ್ಮ ಸ್ವಾರ್ಥಕ್ಕಾಗಿ ಮೋಸ ಮಾಡುತ್ತಿರುವ ಘಟನೆಗಳು ಹೆಚ್ಚಾಗಿ ನಡೆಯುತ್ತಲೇ ಇದೆ. ಅಮಾಯಕರ ಹಾಗೆ ವೇಷ ಹಾಕಿಕೊಂಡು ಜನರನ್ನು ಮರಳು ಮಾಡಿ, ಅವರಿಂದ ಹಣ ಪಡೆದು ಎಸ್ಕೇಪ್ ಆಗುತ್ತಾರೆ. ಇಂಥ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಇದನ್ನು ಜಾಸ್ತಿ ಮಾಡುವುದು ಹೆಂಗಸರೇ ಎಂದರೆ ತಪ್ಪಲ್ಲ. ಇತ್ತೀಚೆಗೆ ಚಿತ್ತೂರು ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಆಕೆಯ ಹೆಸರು ಅನ್ನಪೂರ್ಣ. ಈಕೆ ಏನು ಮಾಡಿದ್ದಾಳೆ ಎಂದು ತಿಳಿಸುತ್ತೇವೆ ನೋಡಿ..
ಚಿತ್ತೂರು ಜಿಲ್ಲೆಯ ಪಲಮನೇರು ಪಟ್ಟಣದ ಗಂಟವೂರು ಕಾಲೋನಿಯಲ್ಲಿ ನಾರಾಯಣ ಮತ್ತು ಅನ್ನಪೂರ್ಣ ಹೆಸರಿನ ದಂಪತಿಗಳು ವಾಸವಾಗಿದ್ದರು. ಅನ್ನಪೂರ್ಣ ಗೆ ಹತ್ತಿರದಲ್ಲೇ ಇದ್ದ ಒಬ್ಬ ವ್ಯಕ್ತಿಯ ಪರಿಚಯವಾಯಿತು, ಇವರಿಬ್ಬರು ಹೆಚ್ಚಾಗಿ ಚಾಟಿಂಗ್ ಮಾಡುತ್ತಾ ಇದ್ದರು. ಅನ್ನಪೂರ್ಣ ಚೀಟಿ ವ್ಯವಹಾರ ಮಾಡುವ ಮೂಲಕ, ಜನರಿಗೆ ಚೆನ್ನಾಗಿ ಗೊತ್ತಿದ್ದೂ, ಜನರ ವಿಶ್ವಾಸವನ್ನು ಗಳಿಸಿಕೊಂಡಿದ್ದರು.. ಈಕೆ ಚೀಟಿ ವ್ಯವಹಾರ ನಡೆಸುವುದರ ಜೊತೆಗೆ ಬಡ್ಡಿಸಾಲ ಕೂಡ ನೀಡುತ್ತಿದ್ದರು..
ಇದೆಲ್ಲವನ್ನು ಮಾಡಿಕೊಂಡಿದ್ದ ಅನ್ನಪೂರ್ಣ ಇಂದ ಇತ್ತೀಚೆಗೆ ಜನರಿಗೆ ಶಾಕ್ ಸಿಕ್ಕಿದೆ. ಕೆಲವು ದಿನಗಳಿಂದ ಅಕೇಯ ಮನೆಗೆ ಬೀಗ ಹಾಕಿರುವುದನ್ನು ಜನರು ಗಮನಿಸಿದರು. ಆಕೆ ಊರಿಗೆ ಹೋಗಿರಬಹುದು ಎಂದುಕೊಂಡು, ಆಕೆಗೆ ಕಾಲ್ ಮಾಡಿದಾಗ ಒಂದು ವಾರದಲ್ಲಿ ವಾಪಸ್ ಬರುತ್ತೇನೆ ಎಂದು ಹೇಳಿದ್ದಳು ಅನ್ನಪೂರ್ಣ. ಜನರು ಕೊಡ ಆ ಮಾತನ್ನು ನಂಬಿಕೊಂಡರು. ಕೆಲವು ಸಾರಿ ಹೀಗೆ ಹೇಳಿ ಜನರನ್ನು ನಂಬಿಸಿದಳು.
ಆದರೆ ಕಳೆದ ಮೂರು ತಿಂಗಳಿಂದ ಆಕೆಯ ಫೋನ್ ನಂಬರ್ ಸ್ವಿಚ್ ಆಫ್ ಬರುತ್ತಿದೆ. ಆಗ ಜನರಿಗೆ ತಾವು ಮೋಸ ಹೋಗಿರುವುದು ಅರಿವಾಗಿದ್ದು, ತಕ್ಷಣವೇ ಪೊಲೀಸರ ಹತ್ತಿರ ಹೋಗಿ ದೂರು ನೀಡಿದ್ದಾರೆ. ಅನ್ನಪೂರ್ಣ ಸುಮಾರು 50 ಲಕ್ಷ ರೂಪಾಯಿ ಹಣವನ್ನು ಬಾಕಿ ಉಳಿಸಿಕೊಂಡಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈಗ ಅನ್ನಪೂರ್ಣಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ರೀತಿಯ ವ್ಯವಹಾರಗಳಿಂದ ಜನರಿಗೆ ಮೋಸ ಮಾಡುವುದು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ.
Comments are closed.