Ranbir Kapoor: ಹಿಂದಿ ಚಿತ್ರ ರಂಗದ ಮತ್ತೊಂದು ಕರಾಳ ಮುಖ ಬಿಚ್ಚಿಟ್ಟ ರಣಬೀರ್ ಕಪೂರ್: ಹೇಳಿದ್ದೇನು ಗೊತ್ತೇ?? ಯುವಕರು ಶಾಕ್ ಆಗಿ ಶೇಕ್ ಆಗಿದ್ದು ಯಾಕೆ ಗೊತ್ತೇ?
Ranbir Kapoor: ನಟ ರಣಬೀರ್ ಕಪೂರ್ ಅವರ ಬಗ್ಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಅವರೆಂದರೆ ಎಲ್ಲರಿಗೂ ಬಹಳ ಇಷ್ಟ, ಹಿಂದಿ ಚಿತ್ರರಂಗದ ಹ್ಯಾಂಡ್ಸಮ್ ನಟರಲ್ಲಿ ಒಬ್ಬರು ರಣಬೀರ್ ಕಪೂರ್. ಹಿರಿಯನಟ ರಿಷಿ ಕಪೂರ್ (Rishi Kapoor) ಹಾಗೂ ನೀತು ಸಿಂಗ್ (Nitu Singh) ದಂಪತಿಯ ಮಗನಾಗಿ ಚಿತ್ರರಂಗದಲ್ಲಿ ಅವಕಾಶ ಪಡೆದರು ಸಹ, ತಮ್ಮದೇ ಆದ ರೀತಿಯಲ್ಲಿ ಹೊಸದಾದ ಛಾಪು ಮೂಡಿಸಿದ್ದಾರೆ.
2018ರಲ್ಲಿ ನಟ ಸಂಜಯ್ ದತ್ (Sanjay Dutt) ಅವರ ಜೀವನಾಧಾರಿತ ಸಂಜು ಸಿನಿಮಾದಲ್ಲಿ ನಟಿಸಿ, ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದ್ದರು, ಅದಾದ ನಂತರ ಸಿನಿಮಾ ಇಂದ ಬಿಗ್ ಬ್ರೇಕ್ ಪಡೆದು, ಮುಂದೆ ನಟಿಸಿದ್ದು ಶಂಶೇರ ಸಿನಿಮಾದಲ್ಲಿ. ಕಳೆದ ವರ್ಷ ಬ್ರಹ್ಮಾಸ್ತ್ರ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದರು. ಈ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು ಎಂದು ನಮಗೆಲ್ಲಾ ಗೊತ್ತೇ ಇದೆ..
ಬ್ರಹ್ಮಾಸ್ತ್ರ ಸಕ್ಸಸ್ ನಂತರ ರಣಬೀರ್ ಕಪೂರ್ ಅವರು ಸಂದೀಪ್ ರೆಡ್ಡಿ ವಂಗ ಅವರು ನಿರ್ದೇಶನ ಮಾಡುತ್ತಿರುವ ಅನಿಮಲ್ (Animal) ಸಿನಿಮಾದಲ್ಲಿ ನಟಿಸುತ್ತಿದ್ದು, ಇದೊಂದು ಗ್ಯಾಂಗ್ಸ್ಟರ್ ಕಥೆ ಇರುವ ಸಿನಿಮಾ ಆಗಿದೆ. ಹೀರೋಯಿನ್ ಆಗಿ ರಶ್ಮಿಕಾ ಮಂದಣ್ಣ ಅವರು ನಟಿಸುತ್ತಿದ್ದು, ಈ ಸಿನಿಮಾ ಮೇಲೆ ಬಹಳಷ್ಟು ನಿರೀಕ್ಷೆಗಳನ್ನು ಸಹ ಶುರುವಾಗಿದೆ. ಸಿನಿಮಾದಲ್ಲಿ ಬ್ಯುಸಿ ಇರುವ ರಣಬೀರ್ ಕಪೂರ್ ಅವರು ಇತ್ತೀಚೆಗೆ ಅಭಿಮಾನಿಗಳ ಜೊತೆಗೆ ವರ್ಚುವಲ್ ಚಾಟ್ ನಲ್ಲಿ ಪಾಲ್ಗೊಂಡಿದ್ದರು..
ಅದರಲ್ಲಿ ಕೇರಳ ರಾಜ್ಯದ ಅವರ ಅಭಿಮಾನಿ ಒಬ್ಬರು ಹಿಂದಿ ಚಿತ್ರರಂಗದಲ್ಲಿ ಏನು ಬದಲಾಗಬೇಕು ಎಂದು ಕೇಳಿದ್ದಕ್ಕೆ ಉತ್ತರ ಕೊಟ್ಟ ರಣಬೀರ್ ಕಪೂರ್ ಅವರು, “ಕಳೆದ 15 ರಿಂದ 20 ವರ್ಷಗಳಿಂದ ವೆಸ್ಟರ್ನ್ ಕಲ್ಚರ್ ಹಿಂದಿ ಸಿನಿಮಾಗಳ ಮೇಲೆ ಪ್ರಭಾವ ಬೀರಿದೆ. ಅಲ್ಲಿನ ಸಿನಿಮಾಗಳನ್ನು ರಿಮೇಕ್ ಮಾಡುವುದರಿಂದಲೋ ಏನೋ ಹೀಗಾಗಿದೆ.. ಹಾಗೆಯೇ ಇಲ್ಲಿ ಹೊಸಬರಿಗೆ ಅವಕಾಶ ಕೊಡುತ್ತಿಲ್ಲ, ಹಿಂದಿಯಲ್ಲಿ ಹೆಚ್ಚು ಕಲಾವಿದರು ಇಲ್ಲ, ಹಾಗಿದ್ದರೂ ಹೊಸಬರಿಗೆ ಅವಕಾಶ ಕೊಡುತ್ತಿಲ್ಲ. ಹೊಸಬರಿಗೆ ಅವಕಾಶ ಕೊಟ್ಟರೆ, ಹೊಸತನ ಹೊಸ ಐಡಿಯಾ ಎಲ್ಲವೂ ಶುರುವಾಗುತ್ತದೆ..” ಎಂದು ಹೇಳುವ ಮೂಲಕ ಬಾಲಿವುಡ್ ನ ಸಮಸ್ಯೆಯನ್ನು ನೇರವಾಗಿ ತಿಳಿಸಿದ್ದಾರೆ ನಟ ರಣಬೀರ್ ಕಪೂರ್.
Comments are closed.