Virat Kohli: ಸುಮ್ಮನೆ ಬಿಡದ ಕೊಹ್ಲಿ: ಎಲ್ಲಾ ಮುಗಿದ ಮೇಲೆ, ಬಿಸಿಸಿಐ ಗೆ ಪತ್ರ ಬರೆದು ಹೇಳಿದ್ದೇನು ಗೊತ್ತೇ? ಗಂಭೀರ್ ಗೆ ಮುಂದಿದೆ ಬಿಗ್ ಶಾಕ್??
Virat Kohli: ಮೇ 1ರಂದು ನಡೆದ ಆರ್.ಸಿ.ಬಿ ವರ್ಸಸ್ ಎಲ್.ಎಸ್.ಜಿ (RCB vs LSG) ಪಂದ್ಯದಲ್ಲಿ ಏನೆಲ್ಲಾ ನಡೆಯಿತು ಎಂದು ಎಲ್ಲರೂ ನೋಡಿದ್ದಾರೆ. ಅಂದು ಪಂದ್ಯ ಮುಗಿಯುವ ಮೊದಲೇ ಮೈದಾನದಲ್ಲಿ ವಾಗ್ವಾದ ಶುರುವಾಗಿತ್ತು, ಮೊಹಮ್ಮದ್ ಸಿರಾಜ್ (Mohammad Siraj) ಹಾಗೂ ನವೀನ್ ಉಲ್ ಹಕ್ (Naveen Ul Haq)ನಡುವೆ ಮಾತಿನ ಚಕಮಕಿ ಶುರುವಾಗಿ ಅದಕ್ಕೆ ವಿರಾಟ್ ಕೊಹ್ಲಿ ಅವರು ಕೂಡ ಎಂಟ್ರಿ ಕೊಟ್ಟಿದ್ದರು. ಈ ಜಗಳ ಇಷ್ಟಕ್ಕೆ ನಿಲ್ಲದೆ ಕೈಲ್ ಮೇಯರ್ಸ್ (Kyle Mayers) ಅವರೊಡನೆ ವಿರಾಟ್ ಅವರು ಮಾತನಾಡುವಾಗ..
ಗೌತಮ್ ಗಂಭೀರ್ (Gautham Gambhir) ಅವರು ಬಂದು ಕೈಲ್ ಮೇಯರ್ಸ್ ಅವರನ್ನು ಎಳೆದುಕೊಂಡು ಹೋಗಿದ್ದಕ್ಕೆ ವಿರಾಟ್ ಅವರ ಕೋಪ ಜಾಸ್ತಿಯಾಗಿತ್ತು..ಈ ಜಗಳ ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಯಿತು, ಐಪಿಎಲ್ ನ ನಿಯಮಗಳನ್ನು ಮುರಿಯಲಾಗಿದೆ ಎಂದು ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಅವರ ಮೇಲೆ 100% ಮ್ಯಾಚ್ ಫೀ ಅನ್ನು ದಂಡವಾಗಿ ಹಾಕಲಾಯಿತು.
ವಿರಾಟ್ ಅವರ ಮೇಲೆ ಬಿದ್ದದ್ದು ಬರೋಬ್ಬರಿ ₹1.25ಕೋಟಿ ರೂಪಾಯಿಯ ಫೈನ್.. ಇದೆ ರೀತಿ ಗೌತಮ್ ಗಂಭೀರ್ ಅವರಿಗು 100% ಹಣ ಪಾವತಿ ಮಾಡಲು ಹಾಗೂ ನವೀನ್ ಅವರ ಮೇಲೆ 25% ದಂಡ ಪಾವತಿ ಮಾಡಲು ಆದೇಶ ನೀಡಲಾಗಿದೆ. ಆದರೆ ಇಲ್ಲಿ ವಿರಾಟ್ ಕೊಹ್ಲಿ ಅವರು ದಂಡ ಕಟ್ಟುವುದಿಲ್ಲ. ಏಕೆಂದರೆ ಆರ್.ಸಿ.ಬಿ (RCB) ತಂಡದ ನಿಯಮದ ಅನುಸಾರ, ಆಟಗಾರರ ವಿಷಯದಲ್ಲಿ ಹೀಗಾದರೆ ಆರ್ಸಿಬಿ ತಂಡ ಸಂಭಾವನೆಯನ್ನು ಕಟ್ ಮಾಡುವುದಿಲ್ಲ.
ಆದರೆ ವಿರಾಟ್ ಕೊಹ್ಲಿ ಅವರಿಗೆ ಇದರಿಂದ ಬಹಳ ನೋವು ಉಂಟಾಗಿದೆ. ಇದರಿಂದ ವಿರಾಟ್ ಅವರು ಬಿಸಿಸಿಐ (BCCI) ಗೆ ಪತ್ರ ಪಡೆದು, ತಾವು ಕೆಟ್ಟದಾಗಿ ಏನನ್ನು ಮಾತನಾಡಿಲ್ಲ ಎಂದು ಹೇಳಿದ್ದಾರೆ. ಗೌತಮ್ ಗಂಭೀರ್ ಅವರು ವಿರಾಟ್ ಅವಾಚ್ಯ ಶಬ್ಧ ಬಳಸಿದರು ಎಂದು ಹೇಳಿದ್ದರು, ಆದರೆ ತಾವು ಹಾಗೆ ಮಾಡಿಲ್ಲ, ನವೀನ್ ವಿಷಯದಲ್ಲಿ ಬೌನ್ಸರ್ ಹಾಕಲು ಹೇಳಿದ್ದು ಅಷ್ಟೇ, ಕೈಲ್ ಮೇಯರ್ಸ್ ವಿಚಾರದಲ್ಲಿ ಅವರು ಕಂಪ್ಲೇಂಟ್ ಮಾಡುತ್ತಿದ್ದರು ಎಂದು ವಿರಾಟ್ ಅವರು ಲೆಟರ್ ನಲ್ಲಿ ತಿಳಿಸಿದ್ದಾರೆ.
Comments are closed.