Scholarship: ನಿಮ್ಮ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಪ್ರತಿ ವರ್ಷ 24000 ರೂಪಾಯಿ. ಅರ್ಜಿ ಸಲ್ಲಿಸಿ, ನೇರವಾಗಿ ಖಾತೆಗೆ ಬೀಳಲಿದೆ.
Scholarship: ನಮಸ್ಕಾರ ಸ್ನೇಹಿತರೇ ಹೆಣ್ಣೊಂದು ಕಲಿತರೆ ಶಾಲೆ ಒಂದು ತೆರೆದಂತೆ ಅನ್ನೋದಾಗಿ ನಮ್ಮ ಹಿರಿಯರು ಹೇಳ್ತಾರೆ. ಅದೇ ರೀತಿಯಲ್ಲಿ ಆರ್ಥಿಕ ಸಮಸ್ಯೆಯ ಕಾರಣದಿಂದಾಗಿ ಶಿಕ್ಷಣವನ್ನು ಮುಂದುವರಿಸಲಾಗದೆ ಇರುವಂತಹ ವಿದ್ಯಾರ್ಥಿನಿಯರಿಗೆ Wipro cares ಕಡೆಯಿಂದ ಸಂತೂರ್ ಸ್ಕಾಲರ್ಶಿಪ್ ಅನ್ನು ನೀಡಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಅರ್ಹ ವಿದ್ಯಾರ್ಥಿನಿಯರು ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ ಬನ್ನಿ ಇದಕ್ಕೆ ಬೇಕಾಗಿರುವ ಶೈಕ್ಷಣಿಕ ಅರ್ಹತೆ ಏನು ಹಾಗೂ ಇನ್ನಿತರ ನಿಯಮಗಳು ಏನು ಎಂಬುದನ್ನು ತಿಳಿದುಕೊಳ್ಳೋಣ.
ಸ್ನೇಹಿತರೆ ಈ ಸುದ್ದಿ ಓದುವ ಮುನ್ನ, ನಿಮಗೆ ಒಂದು ವೇಳೆ ಸ್ವಂತ ಉದ್ಯಮಕ್ಕಾ 50 ಲಕ್ಷ ಸಾಲ ಬೇಕು ಎಂದರೆ, ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಸರ್ಕಾರದ ಯೋಜನೆಯನ್ನು ಸದುಪಯೋಗ ಪಡೆಸಿಕೊಳ್ಳಿ.
Below is the details of santoor Scholarship scheme details explained in Kannada
ಸಂತೂರ್ ಸ್ಕಾಲರ್ಶಿಪ್ ಯೋಜನೆ(santoor scholarship scheme) 2016 ಹಾಗೂ 17ನೇ ಸಾಲಿನಲ್ಲಿಯೇ ಪ್ರಾರಂಭವಾಗಿರುವಂತಹ ಯೋಜನೆಯಾಗಿದೆ. ಆರ್ಥಿಕವಾಗಿ ದುರ್ಬಲವಾಗಿರುವಂತಹ ಕುಟುಂಬದಿಂದ ಬಂದಿರುವಂತಹ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಹಾಯವನ್ನು ಮಾಡುವಂತಹ ಸ್ಕಾಲರ್ಶಿಪ್ ಯೋಜನೆ ಇದಾಗಿದೆ. ಹಾಗಿದ್ರೆ ಬನ್ನಿ ಸಂತೂರ್ ಸ್ಕಾಲರ್ಶಿಪ್ ಯೋಜನೆಗೆ ಯಾರೆಲ್ಲಾ ಅರ್ಹರು ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಇದು ಕೇವಲ ವಿದ್ಯಾರ್ಥಿನಿಯರಿಗೆ ಮಾತ್ರ ಇರುವಂತಹ ಯೋಜನೆಯಾಗಿದೆ. ಆಂಧ್ರಪ್ರದೇಶ ಛತ್ತಿಸ್ಗಢ ತೆಲಂಗಾಣ ಹಾಗೂ ಕರ್ನಾಟಕ ರಾಜ್ಯದ ವಿದ್ಯಾರ್ಥಿನಿಯರಿಗೆ ಈ ಯೋಜನೆಯ ಅಡಿಯಲ್ಲಿ ಸ್ಕಾಲರ್ಶಿಪ್ ನೀಡಲಾಗುತ್ತದೆ. ಹತ್ತು ಹಾಗೂ 12ನೇ ತರಗತಿಯನ್ನು ಪಾಸ್ ಮಾಡಿರಬೇಕು ಹಾಗೂ 2023 ಹಾಗೂ 24ನೇ ಸಾಲಿನ ಉನ್ನತ ಶಿಕ್ಷಣಕ್ಕೆ ಪ್ರವೇಶಾತಿಯನ್ನು ಪಡೆದುಕೊಂಡಿರಬೇಕು ಎಂಬುದನ್ನು ಕೂಡ ಕಡ್ಡಾಯವಾಗಿ ಹೇಳಲಾಗಿದೆ. ಇನ್ನು ಈ ಯೋಜನೆಯಲ್ಲಿ ಪದವಿ ಶಿಕ್ಷಣ ಮುಗಿಯುವವರೆಗೂ ಕೂಡ ಆಯ್ಕೆಯಾಗಿರುವ 1900 ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ 24,000 ಸ್ಕಾಲರ್ಶಿಪ್ ಅನ್ನು ನೀಡಲಾಗುತ್ತದೆ.
ಸಂತೂರ್ ಸ್ಕಾಲರ್ಶಿಪ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲೆ ಪತ್ರಗಳ ಬಗ್ಗೆ ನೋಡುವುದಾದರೆ ಬ್ಯಾಂಕ್ ಅಕೌಂಟ್, ಆಧಾರ್ ಕಾರ್ಡ್(Aadhar card), ಪಾಸ್ಪೋರ್ಟ್ ಸೈಜ್ ಫೋಟೋ, ಹತ್ತು ಹಾಗೂ 12ನೇ ಕ್ಲಾಸಿನ ಮಾರ್ಕ್ಸ್ ಕಾರ್ಡ್, ಮೊಬೈಲ್ ನಂಬರ್ ಇಮೇಲ್ ಹಾಗೂ ಜಾತಿ ಮತ್ತು ಇನ್ಕಮ್ ಪತ್ರ. ಇವಿಷ್ಟು ದಾಖಲೆಗಳನ್ನು ನೀಡಬೇಕಾಗಿರುತ್ತದೆ.
ಸಂತೂರು ಸ್ಕಾಲರ್ಶಿಪ್ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳಲು ನೀವು buddy 4 study ಗೆ ಹೋಗಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆರ್ಥಿಕವಾಗಿ ಹಿಂದುಳಿದಿರುವಂತಹ ವಿದ್ಯಾರ್ಥಿನಿಯರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರಿಗೂ ಕೂಡ ಇದರ ಸಹಾಯವನ್ನು ಪಡೆದುಕೊಳ್ಳುವಂತೆ ಮಾಡಬಹುದಾಗಿದೆ.
Comments are closed.