NLM: ಸರ್ಕಾರನೇ ದುಡ್ಡು ಕೊಡುತ್ತೆ- ಎಲ್ಲಾ ಸಮುದಾಯದವರಿಗೆ 50 ಲಕ್ಷ ಸಾಲ, 25 ಲಕ್ಷ ಸಬ್ಸಿಡಿ. ಅರ್ಜಿ ಹಾಕಿ, ಹಳ್ಳಿಯಲ್ಲಿಯೇ ಬಿಸಿನೆಸ್ ಆರಂಭಿಸಿ.
NLM or National Livestock Mission: ನಮಸ್ಕಾರ ಸ್ನೇಹಿತರೇ ಭಾರತ ದೇಶದಲ್ಲಿ ರೈತರನ್ನು ದೇಶದ ಬೆನ್ನೆಲುಬು(Indian farmers) ಎನ್ನುವುದಾಗಿ ಕರೆಯಲಾಗುತ್ತದೆ. ಅಂತಹ ರೈತನ ಬೆನ್ನು ಅಂದರೆ ಆರ್ಥಿಕ ಪರಿಸ್ಥಿತಿ ಸರಿಯಾಗಿದ್ದರೆ ಖಂಡಿತವಾಗಿ ಇಡೀ ದೇಶ ಸರಿಯಾಗಿರುತ್ತದೆ ಅಂತ ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇಂದಿನ ಲೇಖನಿಯಲ್ಲಿ ಒಂದು ವೇಳೆ ರೈತರು ವ್ಯಾಪಾರವನ್ನು ಮಾಡಬೇಕು ಎನ್ನುವಂತಹ ಅಭಿಪ್ರಾಯವನ್ನು ಹೊಂದಿದರೆ ಅವರಿಗೆ ಒಂದು ಒಳ್ಳೆ ಸಲಹೆಯನ್ನು ಹೊರಟಿದ್ದೇವೆ. ಅದರಲ್ಲೂ ವಿಶೇಷವಾಗಿ ಸರಿಯಾದ ರೀತಿಯಲ್ಲಿ ಮಳೆಯಾಗುತ್ತಿಲ್ಲ ಇದೇ ಕಾರಣಕ್ಕಾಗಿ ಸರಿಯಾದ ರೀತಿಯಲ್ಲಿ ಬೆಳೆಯನ್ನು ಕೂಡ ಬೆಳೆಯುವ ಸಾಧ್ಯವಾಗುತ್ತಿಲ್ಲ. ಹೀಗಾಗಿ ರೈತರು ತಮ್ಮ ಆದಾಯಕ್ಕಾಗಿ ಬೆಳೆಯನ್ನು ಹೊರತುಪಡಿಸಿ ಬೇರೆ ವ್ಯಾಪಾರವನ್ನು ಕೂಡ ಜೊತೆಯಾಗಿ ಮಾಡಿಕೊಂಡು ಹೋಗಬೇಕಾಗಿರುತ್ತದೆ.
ಅದಕ್ಕೂ ಮುನ್ನ ನಿಮಗೆ ಕಡಿಮೆ ಬೆಲೆ ಲೋನ್ ಬೇಕು ಎಂದರೆ, ಈ ಲೇಖನ ಓದಿ. – ಬೇರೆ ಬ್ಯಾಂಕ್ ನಲ್ಲಿ 14 % ಬಡ್ಡಿ- ಆದರೆ ಈ ಯೋಜನೆಯಲ್ಲಿ ಸಾಲ ಸುಲಭವಾಗಿ ಹಾಗೂ 6.5 % ಗೆ ಲೋನ್ ಸಿಗುತ್ತಿದೆ. — Loan
NLM or National Livestock Mission loan details explained in kannada- Below is the complete details of NLM scheme- eligibility, criteria, application link
ಉದಾಹರಣೆಗೆ ಹೈನುಗಾರಿಕೆ ಅಥವಾ ಕುರಿ ಅಥವಾ ಮೇಕೆಯ ಸಾಕಾಣಿಕೆಯನ್ನು ಮಾಡುವುದು ನಿಮಗೆ ಸಾಕಷ್ಟು ಲಾಭವನ್ನು ತಂದು ಕೊಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಕೋಳಿ ಸಾಕಾಣಿಕೆ ಕೂಡ ಸಾಕಷ್ಟು ವೇಗವಾಗಿ ಬೆಳೆಯುತ್ತಿರುವಂತಹ ವ್ಯಾಪಾರವಾಗಿದೆ. ಆದರೆ ವ್ಯಾಪಾರ ಮಾಡಲು ಸಣ್ಣ ಅಥವಾ ದೊಡ್ಡ ಪ್ರಮಾಣದಲ್ಲಿ ಬಂಡವಾಳವಂತು ಬೇಕಾಗಿರುತ್ತದೆ. ಇನ್ನು ನೀವು ಪ್ರಾರಂಭ ಮಾಡುವಂತಹ ವ್ಯಾಪಾರದ ಬಗ್ಗೆ ಕೂಡ ತಿಳುವಳಿಕೆ ಇಲ್ಲದ ವ್ಯಾಪಾರ(business) ಮಾಡುವುದೇ ನಿಮಗೆ ಮುಂದಿನ ದಿನಗಳಲ್ಲಿ ಸಮಸ್ಯೆಯನ್ನು ಉಂಟುಮಾಡ ಬಹುದು.
ಇನ್ನು ಇತ್ತೀಚಿನ ದಿನಗಳಲ್ಲಿ ಕುರಿ ಸಾಕಾಣಿಕೆ ಎನ್ನುವುದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಎಲ್ಲಾ ಕಡೆ ಹರಡಿಕೊಂಡಿದ್ದು ಲಾಭದಾಯಕ ಉದ್ಯಮವಾಗಿ ಕೂಡ ಕಾಣಿಸಿಕೊಳ್ಳುತ್ತಿದೆ. ನೂರರಿಂದ ಐನೂರು ಕುರಿಗಳವರೆಗೂ ಕೂಡ ನೀವು ಸಾಕಬಹುದಾಗಿದೆ. ಸರ್ಕಾರ ಇತ್ತೀಚಿಗಷ್ಟೇ ಪರಿಚಯಿಸಿರುವಂತಹ NLM Scheme ಮೂಲಕ ನೀವು ಇದನ್ನು ಮಾಡಬಹುದಾಗಿದೆ. 50 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ ಸೌಲಭ್ಯವನ್ನು ಇದರ ಅಡಿಯಲ್ಲಿ ನೀಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದ್ದು 500 ಕುರಿಗಳವರೆಗೂ ಕೂಡ ನೀವು ಸಾಕಬಹುದು. ಎಲ್ಲಕ್ಕಿಂತ ಪ್ರಮುಖ ಎನ್ನುವಂತೆ ನಿಮಗೆ ಇದರಲ್ಲಿ 50ರಷ್ಟು ಸಬ್ಸಿಡಿ ಕೂಡ ಸಿಗುತ್ತದೆ ಎಂಬುದನ್ನು ನೀವು ಪ್ರಮುಖವಾಗಿ ಪರಿಗಣಿಸಬೇಕಾಗಿರುತ್ತದೆ.
ಇದನ್ನು ಕೂಡ ಓದಿ: ಇಲ್ಲಿದೆ ನೋಡಿ ಸುಲಭ Business ಐಡಿಯಾ. ಒಂದು ರೂಪಾಯಿ ಕೂಡ ಹೂಡಿಕೆ ಮಾಡದೆ ಇದ್ದರೂ, ಲಕ್ಷ ಲಕ್ಷ ಗಳಿಸಬಹುದು.. Business Idea
ಇನ್ನು NLM Scheme ಅಡಿಯಲ್ಲಿ ನೀವು ಸಬ್ಸಿಡಿ ಪಡೆದುಕೊಳ್ಳಬೇಕು ಎಂದಾದಲ್ಲಿ ಆ ಸಂದರ್ಭದಲ್ಲಿ ನಿಮ್ಮ ಬಳಿ ಜಮೀನು ಎಷ್ಟಿದೆ ಎನ್ನುವುದು ಕೂಡ ಅತ್ಯಂತ ಪ್ರಮುಖವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕಾಗಿರುವ ವಿಚಾರವಾಗಿರುತ್ತದೆ. ಉದಾಹರಣೆಗೆ 5 ಎಕರೆ ಜಮೀನು ಇದ್ದಲ್ಲಿ ನೀವು 25 ಲಕ್ಷಗಳವರೆಗೆ ಸಬ್ಸಿಡಿಯನ್ನು ಪಡೆದುಕೊಳ್ಳಬಹುದಾಗಿದೆ. ನಿಜಕ್ಕೂ ಕೂಡ ಕುರಿ ಸಾಕಾಣಿಕೆ ಮಾಡಬೇಕು ಎಂದು ಅಂದುಕೊಂಡಿರುವಂತಹ ಸಾಕಷ್ಟು ಜನರಿಗೆ ಇದೊಂದು ಸ್ಪೂರ್ತಿದಾಯಕ ವಿಚಾರವಾಗಿದೆ.
NLM Scheme ನಲ್ಲಿ ಸಾಕಷ್ಟು ಯೋಜನೆಗಳಿಗೆ ಆರ್ಥಿಕ ಸಹಾಯವನ್ನು ನೀಡುವುದನ್ನು ಕೂಡ ನೀವು ಕಾಣಬಹುದಾಗಿದೆ. ನೂರರಿಂದ 500 ಕುರಿಗಳವರೆಗೂ ಕೂಡ ಬೇರೆ ಬೇರೆ ರೀತಿಯ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ ಎನ್ನುವುದನ್ನು ಕೂಡ ನೀವು ಇಲ್ಲಿ ತಿಳಿದುಕೊಳ್ಳಬಹುದಾಗಿದೆ. https://nlm.udyamimitra.in/Login/Login ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಯೋಜನೆ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಇದನ್ನು ಕೂಡ ಓದಿ: ಕೇವಲ 20 ಸಾವಿರದಲ್ಲಿ ಬರೋಬ್ಬರಿ 5 ಲಕ್ಷ ಲಾಭ ಪಡೆಯೋದು ಹೇಗೆ ಗೊತ್ತೇ? ಈ ಬಿಸಿನೆಸ್ ಮಾಡಿ ನೋಡಿ. Business Idea
Comments are closed.