Post Office Scheme: ಇದೊಂದು ಯೋಜನೆ ಸಾಕು ನೀವು ಹತ್ತು ಲಕ್ಷ ದುಡಿಯಲು- ಪೋಸ್ಟ್ ಆಫೀಸ್ ನಲ್ಲಿ ಇರುವ ಯಾರಿಗೂ ತಿಳಿಯದ ಯೋಜನೆ
Post Office Scheme: ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಯೋಜನೆಗಳಿಗಿಂತ ಹೆಚ್ಚಾಗಿ ಪೋಸ್ಟ್ ಆಫೀಸ್ನಲ್ಲಿ(post office investment schemes) ಮಾಡುವಂತಹ ಯೋಜನೆಗಳು ಗ್ರಾಹಕರಲ್ಲಿ ಸಾಕಷ್ಟು ಜನಪ್ರಿಯವಾಗಿದೆ ಎಂದು ಹೇಳಬಹುದಾಗಿದೆ. ಅದರಲ್ಲಿ ವಿಶೇಷವಾಗಿ ಪ್ರತಿಯೊಬ್ಬರು ಕೂಡ ಹೂಡಿಕೆ ಮಾಡುವುದಕ್ಕಿಂತ ಮುಂಚೆ ಎಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ರಿಟರ್ನ್ ಸಿಗುತ್ತದೆ ಅದಕ್ಕಿಂತ ಹೆಚ್ಚಾಗಿ ಸುರಕ್ಷಿತವಾಗಿ ಎಲ್ಲಿರುತ್ತೆ ಅನ್ನೋದನ್ನ ಪ್ರಮುಖವಾಗಿ ಗಮನಿಸುತ್ತಾರೆ. ಅದರಲ್ಲೂ ಇವತ್ತಿನ ಈ ಲೇಖನಿಯಲ್ಲಿ ನಾವು ಪ್ರತಿ ತಿಂಗಳು ಸಣ್ಣ ಮಟ್ಟದಲ್ಲಿ ಹೂಡಿಕೆ ಮಾಡುವ ಮೂಲಕ ದೊಡ್ಡ ಮಟ್ಟದ ರಿಟರ್ನ್ ಅನ್ನು ಪಡೆದುಕೊಳ್ಳುವಂತಹ ಒಂದು ಯೋಜನೆ ಬಗ್ಗೆ ನಿಮಗೆ ಹೇಳಲು ಹೊರಟಿದ್ದೇವೆ.
ಸ್ನೇಹಿತರೆ ಈ ಸುದ್ದಿ ಓದುವ ಮುನ್ನ, ನಿಮಗೆ ಒಂದು ವೇಳೆ ಸ್ವಂತ ಉದ್ಯಮಕ್ಕಾ 50 ಲಕ್ಷ ಸಾಲ ಬೇಕು ಎಂದರೆ, ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಸರ್ಕಾರದ ಯೋಜನೆಯನ್ನು ಸದುಪಯೋಗ ಪಡೆಸಿಕೊಳ್ಳಿ.
Post Office Scheme explained in Kannada- Below is the complete details of Public Provident Fund.
ಪೋಸ್ಟ್ ಆಫೀಸ್ನಲ್ಲಿ ಕಂಡುಬರುವಂತಹ ಪಬ್ಲಿಕ್ ಪ್ರಾವಿಡೆಂಟ್ ಫಂಡ್(public provident fund) ಯೋಜನೆಯಲ್ಲಿ ಮಾಡುವಂತಹ ಹೂಡಿಕೆ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಖಂಡಿತವಾಗಿ ನೀವು ದೊಡ್ಡ ಮಟ್ಟದಲ್ಲಿ ಲಾಭ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಯಾಕೆಂದರೆ ಇದು ಅತ್ಯಂತ ಸುರಕ್ಷಿತ ಹಾಗೂ ಉತ್ತಮವಾದ ರಿಟರ್ನ್ ನೀಡುವಂತಹ ಯೋಜನೆ ಎಂಬುದಾಗಿ ಪ್ರತಿಯೊಂದು ಕಡೆಗಳಲ್ಲಿ ಕೂಡ ಕರೆಸಿಕೊಳ್ಳುತ್ತದೆ. ಇದು 7.1% ರಿಟರ್ನ್ ಬಡ್ಡಿದರವನ್ನು ನೀಡುತ್ತದೆ.
ನೀವು ಮಿನಿಮಮ್ 500 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆಯನ್ನು ಓಪನ್ ಮಾಡಬಹುದಾಗಿದೆ. ಒಂದು ವರ್ಷಕ್ಕೆ ಹೆಚ್ಚೆಂದರೆ ನೀವು ಈ ಖಾತೆಯಲ್ಲಿ 1.5 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಪ್ರತಿ ತಿಂಗಳು ನೀವು 12,500 ವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮೆಚುರಿಟಿ ಆದಾಗ ನೀವು 40.68 ಲಕ್ಷ ರೂಪಾಯಿಗಳನ್ನು ಪಡೆಯಬಹುದಾಗಿದೆ.
ಇದನ್ನು ಕೂಡ ಓದಿ: ಇಲ್ಲಿದೆ ನೋಡಿ ಸುಲಭ Business ಐಡಿಯಾ. ಒಂದು ರೂಪಾಯಿ ಕೂಡ ಹೂಡಿಕೆ ಮಾಡದೆ ಇದ್ದರೂ, ಲಕ್ಷ ಲಕ್ಷ ಗಳಿಸಬಹುದು.. Business Idea
PPF ಯೋಜನೆಯ ಮೆಚುರಿಟಿ ಅವಧಿ ನಿಜಕ್ಕೂ ಹೇಳಬೇಕೆಂದರೆ ಹದಿನೈದು ವರ್ಷ ಆದರೆ ನೀವು ಬೇಕಾದರೆ ಐದು ವರ್ಷಗಳ ವಿಸ್ತರಣೆಯನ್ನು ಕೂಡ ಮಾಡುವಂತಹ ಅವಕಾಶವನ್ನು ಇಲ್ಲಿ ನೀಡಲಾಗುತ್ತದೆ. ಇನ್ನು ಒಟ್ಟಾರೆಯಾಗಿ 25 ವರ್ಷಗಳ ಹೂಡಿಕೆಯ ಮೆಚುರಿಟಿಯ ಅವಧಿಯ ಆಯ್ಕೆಯನ್ನು ಕೂಡ ನಿಮಗೆ ಆರಂಭದಲ್ಲಿ ನೀಡಲಾಗುತ್ತದೆ. ಇನ್ನು ನೀವು ಈ ಯೋಜನೆಯ ಹುಡುಗಿಯಲ್ಲಿ ಕೋಟ್ಯಾಧೀಶ ಆಗಬೇಕು ಎಂದರೆ 25 ವರ್ಷಗಳ ಕಾಲ ಹೂಡಿಕೆ ಮಾಡಬೇಕು. 25 ವರ್ಷಗಳ ಅವಧಿಯಲ್ಲಿ ನೀವು ಒಟ್ಟಾರೆಯಾಗಿ 37.50 ಲಕ್ಷ ರೂಪಾಯ್ ಹಣವನ್ನು ಹೂಡಿಕೆ ಮಾಡಬೇಕಾಗಿರುತ್ತದೆ ಹಾಗೂ 7.1% ಬಡ್ಡಿ ದರದ ಆಧಾರದ ಮೇಲೆ 65.58 ಲಕ್ಷ ರೂಪಾಯಿಗಳ ರಿಟರ್ನ್ ಅನ್ನು ನೀವು ಪಡೆದುಕೊಂಡರೆ ಒಟ್ಟಾರೆಯಾಗಿ ಮೆಚುರಿಟಿ ಸಂದರ್ಭದಲ್ಲಿ 1.02 ಕೋಟಿ ರೂಪಾಯಿಗಳ ಒಟ್ಟಾರೆ ಮೆಚುರಿಟಿ ಹಣವನ್ನು ನೀವು ಪಡೆದುಕೊಳ್ಳಬಹುದು.
Public provident fund ಯೋಜನೆಯಲ್ಲಿ ನೀವು 5 ವರ್ಷಗಳವರೆಗೂ ಯಾವುದೇ ಹಣವನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ. ಐದು ವರ್ಷ ಒಮ್ಮೆ ಪೂರ್ತಿಯಾದ ಮೇಲೆ ನೀವು form 2 ಅನು ಭರ್ತಿ ಮಾಡುವ ಮೂಲಕ ನಿಮ್ಮ ಹಣವನ್ನು ನೀವು ವಾಪಸ್ ಪಡೆದುಕೊಳ್ಳಬಹುದಾಗಿದೆ. 15 ವರ್ಷಗಳ ಒಳಗೆ ನೀವು ಹಣವನ್ನು ಡ್ರಾ ಮಾಡಿಕೊಂಡರೆ ಆ ಸಂದರ್ಭದಲ್ಲಿ ನೀವು ಒಂದು ಪ್ರತಿಶತ ಹಣವನ್ನು ಪೆನಾಲ್ಟಿ ರೂಪದಲ್ಲಿ ಕಟ್ಟಬೇಕಾಗುತ್ತದೆ. ಯೋಜನೆ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಎರಡೂ ಕಡೆಗಳಲ್ಲಿ ಕೂಡ ಪ್ರಾರಂಭಿಸಬಹುದು.
Comments are closed.