Sara Ali Khan: ದೇವಸ್ಥಾನಕ್ಕೆ ಹೋಗಿದ್ದಕ್ಕೆ ಟ್ರೊಲ್ ಮಾಡುವವರಿಗೆ ಸಾರ ಅಲಿ ಖಾನ್ ಗಟ್ಟಿಯಾಗಿ ನಿಂತು ಹೇಳಿದ್ದೇನು ಗೊತ್ತೇ?? ಭೇಷ್ ಎಂದಿದ್ದು ಯಾಕೆ ಗೊತ್ತೇ?
Sara Ali Khan: ಬಾಲಿವುಡ್ (Bollywood) ನ ಖ್ಯಾತ ನಟ ಸೈಫ್ ಅಲಿ ಖಾನ್ (Saif Ali Khan) ಅವರ ಮಗಳು ಸಾರಾ ಅಲಿ ಖಾನ್ (Sara Ali Khan) ಬಾಲಿವುಡ್ ನಲ್ಲಿ ಖ್ಯಾತ ಯುವನಟಿಯಾಗಿ ಗುರುತಿಸಿಕೊಂಡಿದ್ದಾರೆ. ಉತ್ತಮವಾದ ಪಾತ್ರಗಳನ್ನು ಆಯ್ಕೆ ಮಾಡುವುದರ ಜೊತೆಗೆ, ಒಳ್ಳೆಯ ಅಭಿನಯದ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಆಗಾಗ ಸಾರಾ ಅಲಿ ಖಾನ್ (Sara Ali Khan) ಅವರು ಕೆಲವು ವಿಚಾರಗಳಿಗೆ ಸುದ್ದಿಯಾಗುತ್ತಾರೆ.
ಇತ್ತೀಚೆಗೆ ದೇವಸ್ಥಾನಕ್ಕೆ ಹೋದ ವಿಷಯಕ್ಕೆ ಸಾರಾ ಅಲಿ ಖಾನ್ (Sara Ali Khan) ಟ್ರೋಲ್ ಆಗಿದ್ದರು. ನಟಿ ಸಾರಾ ಅಲಿ ಖಾನ್ (Sara Ali Khan) ಅವರು ಇತ್ತೀಚೆಗೆ ಕೇದಾರನಾಥ ದೇವಸ್ಥಾನ ಹಾಗೂ ಉಜ್ಜಯಿನಿಯ ಮಹಾಕಾಳ ದೇವಸ್ಥಾನ ಸೇರಿದಂತೆ ಸಾಕಷ್ಟು ದೇವಸ್ಥಾನಗಳಿಗೆ ಭೇಟಿ ನೀಡಿ, ದೇವರ ದರ್ಶನವನ್ನು ಪಡೆಯುತ್ತಿದ್ದಾರೆ. ಇದರಿಂದ ಕೆಲವು ಜನರು ಸಾರಾ (Sara Ali Khan) ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇದನ್ನು ಓದಿ..Ram Charan Daughter: ರಾಮ್ ಚರಣ್ ಮಗುವಿಗೆ ಕ್ಲಿನ್ ಕಾರ ಕೊನಿಡೇಲ ಎಂದು ಹೆಸರು- ಈ ಹೆಸರಿನ ವಿಚಿತ್ರ ಅರ್ಥವೇನು ಗೊತ್ತೇ?
ಸಾರ (Sara Ali Khan) ಅವರು ದೇವಸ್ಥಾನಗಳಿಗೆ ಹೋಗುವುದು ತಪ್ಪು ಎಂದು ಹೇಳುತ್ತಿದ್ದು, ಈ ರೀತಿ ತಮ್ಮ ಬಗ್ಗೆ ಹೇಳಿಕೆ ನೀಡಿರುವವರಿಗೆಲ್ಲಾ ಸಾರ ಅಲಿ ಖಾನ್ ಅವರು ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ. “ನಾನು ದೇವಸ್ಥಾನಕ್ಕೆ ಹೋಗುವುದು ನಿಮಗೆ ಸರಿ ಎನ್ನಿಸಿದರೆ ಸರಿ, ತಪ್ಪು ಎನ್ನಿಸಿದರೆ ಅಥವಾ ನಿಮಗೆ ಇಷ್ಟ ಆಗುತ್ತಿಲ್ಲ ಎಂದು ನಾನು ದೇವಸ್ಥಾನಕ್ಕೆ ಹೋಗೋದನ್ನ ನಿಲ್ಲಿಸೋದಿಲ್ಲ..” ಎಂದಿದ್ದಾರೆ ಸಾರ.
“ನನ್ನ ನಂಬಿಕೆಗಳು ನನಗೆ ಸಂಬಂಧಿಸಿದೆ. ಅಜಮೀರ್ ಷರೀಫ್ ದರ್ಗಾಗೆ ಹೋಗುವಾಗ ನನ್ನಲ್ಲಿ ಎಷ್ಟು ಶ್ರದ್ಧೆ ಇರುತ್ತದೆಯೋ ಅಷ್ಟೇ ಶ್ರದ್ಧೆ, ಬಾಂಗ್ಲಾ ಸಾಹಿಬ್ ಗುರುದ್ವಾರಕ್ಕೆ ಹೋಗುವಾಗಲು ಅಷ್ಟೇ ಶ್ರದ್ಧೆ ಭಕ್ತಿಯಿಂದ ಹೋಗುತ್ತೇನೆ. ಮಹಾಕಾಳ ದೇವಸ್ಥಾನಕ್ಕೆ ಹೋಗುವಾಗಲು ಹಾಗೆಯೇ ಹೋಗುತ್ತೇನೆ, ಇದನ್ನು ನಾನು ನಿಲ್ಲಿಸುವುದಿಲ್ಲ.. ಇದನ್ನು ಓದಿ..Prime day: ಕಂಡು ಕೇಳರಿಯದ ರೀತಿಯಲ್ಲಿ 80 % ವರೆಗೂ ಡಿಸ್ಕೌಂಟ್ ಘೋಷಣೆ ಮಾಡುತ್ತಿರುವ ಅಮೆಜಾನ್- ಪ್ರೈಮ್ ಡೇ ನ ಸಂಪೂರ್ಣ ಡೀಟೇಲ್ಸ್.
ಜನರು ಏನಾದರೂ ಹೇಳಲಿ..ಅದಕ್ಕೆ ನಾನು ತಲೆಕೆಡಿಸಿಕೊಳ್ಳೋದಿಲ್ಲ. ಅದು ನನ್ನ ಸಮಸ್ಯೆಯು ಅಲ್ಲ, ಆ ಕ್ಷೇತ್ರದಲ್ಲಿರುವ ಶಕ್ತಿ ನಿಮಗೆ ಇಷ್ಟವಾಗಬೇಕು..ಆ ಶಕ್ತಿಯ ಮೇಲೆ ನನಗೆ ನಂಬಿಕೆ ಇದೆ..”ಎಂದಿದ್ದಾರೆ ಸಾರ. ಅಭಿಮಾನಿಗಳು ಸಾರ (Sara Ali Khan) ಅವರು ಹೇಳಿರುವ ಮಾತುಗಳು ಸರಿ ಇದೆ ಎನ್ನುತ್ತಿದ್ದಾರೆ. ಇತ್ತಿಚೆಗೆ ಸಾರ (Sara Ali Khan) ಅವರು ನಟ ವಿಕ್ಕಿ ಕೌಶಲ್ ಅವರೊಡನೆ Zara Hatke Zara Bachke ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಹಿಟ್ ಆಗಿದೆ. ಇದನ್ನು ಓದಿ..Jobs:ಯಾವುದೇ ವಿದ್ಯಾರ್ಹತೆ ಇಲ್ಲದೆ ಇದ್ದರೂ ವಿದೇಶದಲ್ಲಿ ಕೆಲಸ ಸಿಗುತ್ತದೆ.
Comments are closed.