Saregamapa Show: ಮತ್ತೆ ಬರುತ್ತಿದೆ ಸರಿಗಮಪ- ಟಾಪ್ ಶೋ ನಲ್ಲಿ ಈ ಬಾರಿ ಬದಲಾವಣೆ- ವಿಶೇಷತೆ ಏನು ಗೊತ್ತೇ? ಇನ್ನೊಂದು ಲೆವೆಲ್ ಈ ಬಾರಿ.
Saregamapa Show: ಜೀಕನ್ನಡ (Zee Kannada) ವಾಹಿನಿಯ ಟಾಪ್ ಶೋಗಳಲ್ಲಿ ಒಂದು ಸರಿಗಮಪ (Saregamapa Show), ಈ ಶೋನ 20ನೇ ಸೀಸನ್ ಇನ್ನೇನು ಶುರುವಾಗಲಿದೆ. ಇದುವರೆಗಿನ 19 ಸೀಸನ್ ಗಳಲ್ಲಿ, ಪ್ರತಿಭೆಯುಳ್ಳ ಅದೆಷ್ಟೋ ಗಾಯಕ ಗಾಯಕಿಯರು, ತಮ್ಮನ್ನು ತಾವು ಪ್ರೂವ್ ಮಾಡಿಕೊಂಡು ಇಂದು ಒಂದು ಒಳ್ಳೆಯ ಹಂತಕ್ಕೆ ತಲುಪಿದ್ದಾರೆ.. ಹಲವರು ಚಿತ್ರರಂಗದಲ್ಲಿಯು ಗುರುತಿಸಿಕೊಂಡಿದ್ದಾರೆ. ಕರ್ನಾಟಕದ ಎಲ್ಲೆಡೆ ಈ ಶೋಗೆ (Saregamapa Show) ಆಡಿಷನ್ ಮಾಡಲಾಗುತ್ತಿತ್ತು, ದೇಸಿ ಪ್ರತಿಭೆಗಳನ್ನು ಕರೆಸಲಾಗತ್ತಿತ್ತು.
ಆದರೆ ಈ ಬಾರಿ ಸರಿಗಮಪ ಶೋ (Saregamapa Show) ನೆಕ್ಸ್ಟ್ ಲೆವೆಲ್ ತಲುಪಲಿದೆ. ಸರಿಗಮಪ ಶೋ (Saregamapa Show) ಸೀಸನ್ 20 ಅನ್ನು ಇನ್ನಷ್ಟು ವಿಶೇಷವಾಗಿಸಲು, ಸಪ್ತಸಾಗರದಾಚೆ ದಾಟಿ ಆಡಿಷನ್ ಮಾಡಲಾಗುತ್ತದೆ ಎಂದು ಜೀವಾಹಿನಿ ಅಧಿಕೃತವಾಗಿ ತಿಳಿಸಿದೆ. ಈ ವಿಶೇಷ ಸುದ್ದಿಯನ್ನು ಪ್ರೊಮೋ ಮೂಲಕ ತಿಳಿಸಿದ್ದು, ಒಂದು ಪ್ರೊಮೋ ಬಿಡುಗಡೆ ಮಾಡಿ, ವಿಶ್ವದ ಎಲ್ಲೆಡೆ ಆಡಿಷನ್ ಮಾಡುವುದಾಗಿ ಜೀಕನ್ನಡ ಹೇಳಿದೆ.. ಇದನ್ನು ಓದಿ..GruhaJyothi Status: ನಿಮ್ಮ ಗೃಹಾಜ್ಯೋತಿ ಅಪ್ಲಿಕೇಶನ್ ಸರಿಯಾಗಿ ಅರ್ಜಿ ಹಾಕಲಾಗಿದೆಯೇ? ಸ್ಟೇಟಸ್ ಚೆಕ್ ಮಾಡುವುದು ಬಹಳ ಸುಲಭ.
ಸಂಗೀತ ರಿಯಾಲಿಟಿ ಶೋಗಳ ಪೈಕಿ ಈ ಕಾನ್ಸೆಪ್ಟ್ ಹೊಸ ಇತಿಹಾಸ ಬರೆಯೋದು ಖಂಡಿತ. ಕರ್ನಾಟಕದಲ್ಲಿ (Karnataka) ಮಾತ್ರ ಆಡಿಷನ್ ಮಾಡುವಾಗ, ಹೊರ ರಾಜ್ಯದ ಪ್ರತಿಭೆಗಳು ಸಹ ಬಂದು, ಹಾಡಿ ಕನ್ನಡಕ್ಕೆ ಗೌರವ ಸಲ್ಲಿಸುತ್ತಿದ್ದರು, ಇನ್ನು ನಮ್ಮ ಗಾಯಕರು ವಿಶ್ವದ ಬೇರೆ ಊರುಗಳಿಗೆ ಹೋಗಿ ಗಾಯನದ ಪ್ರತಿಭೆ ತೋರಿಸುತ್ತಿದ್ದರು. ಆದರೆ ಜೀವಾಹಿನಿಯ ಈ ಪ್ರಯತ್ನದಿಂದ ವಿಶ್ವದ ಬೇರೆ ಬೇರೆ ಮೂಲೆಯಲ್ಲಿ ಇರುವವರು ಕನ್ನಡ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ.
ಶೀಘ್ರದಲ್ಲೇ ವಿಶ್ವದ ಎಲ್ಲೆಡೆ ಆಡಿಷನ್ ಶುರು ಮಾಡುವುದಾಗಿ ಜೀವಾಹಿನಿ (Saregamapa Show) ತಿಳಿಸಿದೆ. ಆಡಿಷನ್ ಯಾವಾಗ ಹೇಗೆ ನಡೆಯುತ್ತದೆ ಎನ್ನುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ. ಆದರೆ ನೆಟ್ಟಿಗರು ಹಾಗೂ ಶೋ ಅಭಿಮಾನಿಗಳು ಈ ಹೊಸ ಕಾನ್ಸೆಪ್ಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರೀತಿ ಮಾಡುವುದಕ್ಕಿಂತ ಸರಿಗಮಪ ಶೋ (Saregamapa Show) ಅನ್ನು ಭಾರತಕ್ಕೆ ಅಥವಾ ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸಿ ಎಂದು ಹೇಳುತ್ತಿದ್ದಾರೆ.. ಇದನ್ನು ಓದಿ..Business Idea: ಮಳೆಗಾಲದಲ್ಲಿ ಬೆಸ್ಟ್ ಬಿಸಿನೆಸ್- ನೋಡಿ, ಒಮ್ಮೆ ಟ್ರೈ ಮಾಡಿ ಲಾಸ್ ಅನ್ನೋದೇ ಇಲ್ಲ. ಬಂಡವಾಳ ಕೂಡ ಕಡಿಮೆ, ಲಾಭ ಮಾತ್ರ ಕಡಿಮೆ
ಅದಕ್ಕೆ ಕಾರಣ ನಮ್ಮಲ್ಲೇ ಸಾಕಷ್ಟು ಪ್ರತಿಭೆಗಳು ಆವಕಾಶಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆಲ್ಲಾ ಸರಿಯಾದ ವೇದಿಕೆ ಸಿಗುತ್ತಿಲ್ಲ. ಅಂಥ ಪ್ರತಿಭೆಗಳಿಗೆ, ಅದರಲ್ಲೂ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಮತ್ತು ವೇದಿಕೆ ಸೃಷ್ಟಿಸಿಕೊಡಬೇಕು ಎನ್ನುವುದು ಜನರ ಅಭಿಪ್ರಾಯ ಆಗಿದೆ. ಇನ್ನು ರಾಜೇಶ್ ಕೃಷ್ಣನ್ (Rajesh Krishnan) ಅವರನ್ನು ಮತ್ತೊಮ್ಮೆ ಶೋ ನಲ್ಲಿ ನೋಡುವ ಹಾಗೆ ಮಾಡಿ ಎಂದು ಜೀಕನ್ನಡ ವಾಹಿನಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Reno 10: ಹೊಸದಾಗಿ ಬಿಡುಗಡೆಯಾಗುತ್ತಿರುವ ಒಪ್ಪೋ ರೆನೊ 10 ಫೋನ್ ಗಳು- DSLR ಮೀರಿಸುವಷ್ಟು ಕ್ಯಾಮೆರಾ ಆದರೂ ಬೆಲೆ ಕಡಿಮೆ.
Comments are closed.