Savings: ವರ್ಷಕ್ಕೆ ಒಮ್ಮೆ ದುಡ್ಡು ಕಟ್ಟಿ, ಅಧಿಕ ಲಾಭ ಪಡೆಯಲು SBI ಅಥವಾ LIC ಯಾವುದು ಬೆಸ್ಟ್ ಗೊತ್ತೇ? ಆರ್ಥಿಕ ತಜ್ಞರು ಹೇಳುವುದೇನು ಗೊತ್ತೇ?

Savings: ಒಂದು ವೇಳೆ ನೀವು ಹೂಡಿಕೆ ಮಾಡಲು ಬಯಸುತ್ತಿದ್ದರೆ, ಒಂದು ಸಾರಿ ದುಡ್ಡು ಕಟ್ಟಿ ಒಳ್ಳೆಯ ಲಾಭ ಪಡೆಯಬೇಕು ಎಂದುಕೊಂಡಿದ್ದರೆ, ವರ್ಷಾಶನ ನಿಮಗೆ ಉತ್ತಮವಾದ ಹೂಡಿಕೆ ಯೋಜನೆ ಆಗಿದೆ. ಈ ಯೋಜನೆಯಲ್ಲಿ ನೀವು ಒಂದು ಸಾರಿ ಹೂಡಿಕೆ ಮಾಡಿದರೆ, ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ಅನುಗುಣವಾಗಿ ಬಡ್ಡಿ ಕಾಲ್ಕ್ಯುಲೇಟ್ ಆಗುತ್ತದೆ. ಪ್ರತಿ ತಿಂಗಳು ಈ ಬಡ್ಡಿ ಹಣ ನಿಮಗೆ ಆದಾಯದ ರೂಪದಲ್ಲಿ ಬರುತ್ತದೆ. SBI ಮತ್ತು LIC ಎರಡು ಕಡೆ ಈ ಯೋಜೆನೆಯ ಸೌಲಭ್ಯ ಇದ್ದು ಇದರ ಬಗ್ಗೆ ಇಂದು ತಿಳಿಸಿಕೊಡುತ್ತೇವೆ ನೋಡಿ..

sbi annuity vs lic annuity | Savings: ವರ್ಷಕ್ಕೆ ಒಮ್ಮೆ ದುಡ್ಡು ಕಟ್ಟಿ, ಅಧಿಕ ಲಾಭ ಪಡೆಯಲು SBI ಅಥವಾ LIC ಯಾವುದು ಬೆಸ್ಟ್ ಗೊತ್ತೇ? ಆರ್ಥಿಕ ತಜ್ಞರು ಹೇಳುವುದೇನು ಗೊತ್ತೇ?
Savings: ವರ್ಷಕ್ಕೆ ಒಮ್ಮೆ ದುಡ್ಡು ಕಟ್ಟಿ, ಅಧಿಕ ಲಾಭ ಪಡೆಯಲು SBI ಅಥವಾ LIC ಯಾವುದು ಬೆಸ್ಟ್ ಗೊತ್ತೇ? ಆರ್ಥಿಕ ತಜ್ಞರು ಹೇಳುವುದೇನು ಗೊತ್ತೇ? 2

SBI ವರ್ಷಾಶನ ಯೋಜನೆ ;- ಇಲ್ಲಿ ನೀವು ಒಂದು ಸಾರಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಬೇಕಾಗುತ್ತದೆ., ಇದಕ್ಕೆ ತಕ್ಕ ಹಾಗೆ ಬಡ್ಡಿ ಹಣ ಪಾವತಿ ಮಾಡಲಾಗುತ್ತದೆ. ಈ ಹಣದ ಅಸಲು ಮೊತ್ತ ಹಾಗೂ ಅದರ ಮೇಲಿನ ಬಡ್ಡಿ ಇರುತ್ತದೆ. ಮಾಸಿಕ ವರ್ಷಾಶನ ಎಂದು ಈ ಪಾವತಿಯನ್ನು ಕರೆಯಲಾಗುತ್ತದೆ, ಇದರಿಂದ ನಿಮಗೆ ಒಳ್ಳೆಯ ಆದಾಯ ಸಿಗುತ್ತದೆ. ಈ ಠೇವಣಿಯ ಸಮಯ 3 ರಿಂದ 10 ವರ್ಷಗಳು, ಬಡ್ಡಿದರ ಠೇವಣಿಗೆ ಸರಿಹೋಗುವ ಹಾಗೆ ಇರುತ್ತದೆ. ಈ ಯೋಜನೆಯನ್ನು ಕಿರಿಯರಿಂದ ಹಿರಿಯರವರೆಗೂ ಯಾವ ವಯಸ್ಸಿನವರಾದರು ಶುರು ಮಾಡಬಹುದು. ಆದರೆ ಹಿರಿಯರಿಗೆ ಹೆಚ್ಚು ಬಡ್ಡಿ ಸಿಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಮಿತಿ ಇಲ್ಲ. ಇದನ್ನು ಓದಿ..Gas Save: ಗ್ಯಾಸ್ ಬೆಲೆ ಹೆಚ್ಚಾಗಿರುವುದರಿಂದ ತೊಂದರೆ ಆಗುತ್ತಿದೆಯೇ?? ಈ ಚಿಕ್ಕ ಕೆಲಸ ಮಾಡಿ ಜೀವನ ಪೂರ್ತಿ ಉಚಿತವಾಗಿ ಅಡುಗೆ ಮಾಡಿ.

ಮಿನಿಮಮ್ ₹25,000 ಇಂದ ಹೂಡಿಕೆ ಶುರುವಾಗುತ್ತದೆ.
ನೀವು ಹೂಡಿಕೆ ಮಾಡುವ ಮೊತ್ತದಲ್ಲಿ 75% ವರೆಗು ಹಣವನ್ನು ಸಾಲ ಪಡೆಯಲು ಅರ್ಹರಾಗುತ್ತೀರಿ. SBI ನ ಬೇರೆ ಶಾಖೆಗಳಿಗೂ ಈ ಠೇವಣಿ ಖಾತೆಯನ್ನು ವರ್ಗಾವಣೆ ಮಾಡಬಹುದು.
LIC ವರ್ಷಾಶನ ಯೋಜನೆ :-
*LIC ಹೊಸ ಜೀವನ್ ನಿಧಿ ಯೋಜನೆ :- ಈ ಪಾಲಿಸಿಯು ಇರುವಷ್ಟು ಸಮಯ ನಿಯಮಿತವಾಗಿ ಪ್ರೀಮಿಯಂ ಕಟ್ಟುವ ಮೂಲಕ ನಿವೃತ್ತಿ ಕಾರ್ಪಸ್ ಮಾಡಿಕೊಳ್ಳಲು ಹೂಡಿಕೆ ದಾರರಿಗೆ ಸಹಾಯ ಮಾಡುತ್ತದೆ. ಈ ಯೋಜನೆ ಮೆಚ್ಯುರ್ ಆದ ನಂತರ ವರ್ಷಾಶನ ಪಾವತಿ ಮಾಡಲಾಗುತ್ತದೆ.

*LIC ಜೀವನ್ ಶಾಂತಿ ಯೋಜನೆ :- ಈ ಪೆನ್ಶನ್ ಯೋಜನೆಯು ಹೂಡಿಕೆದಾರರು ಪಾಲಿಸಿ ಖರೀದಿ ಮಾಡಿದ ತಕ್ಷಣ ಅಥವಾ ಬಳಿಕ ಹಂತ ಹಂತಗಳಲ್ಲಿ ವರ್ಷಾಶನ ಪಡೆಯಲು ಅವಕಾಶ ನೀಡುತ್ತದೆ. ಇಲ್ಲಿ ನಿಮಗೆ 10 ವರ್ಷಾಶನ ಆಯ್ಕೆ ಸಿಗುತ್ತದೆ. ಹೂಡಿಕೆದಾರರು ತಮ್ಮ ಆದಾಯ ಮತ್ತು ಅನುಕೂಲಕ್ಕೆ ತಕ್ಕೆ ಹಾಗೆ ಆಯ್ಕೆ ಮಾಡಿಕೊಳ್ಳಬಹುದು.
*LIC ಜೀವನ್ ಅಕ್ಷಯ್ :- ಈ ಯೋಜನೆ 2020ರಲ್ಲಿ ಶುರುವಾಗಿದ್ದು, ಬಹು ವರ್ಷಾಶನ ಆಯ್ಕೆ ನೀಡುತ್ತದೆ. 10 ಆಯ್ಕೆಗಳು ಇರಲಿದ್ದು, ಹಿರಿಯ ನಾಗರೀಕರು ತಮ್ಮ ಅಗತ್ಯ ಹೇಗಿದೆ ಅದರ ಮೇಲೆ ಪೆನ್ಶನ್ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಯೋಜನೆಯಲ್ಲಿ ಪಾಲಿಸಿದಾರರು ಮೃತರಾಗುವವರೆಗು ಪೆನ್ಶನ್ ಬರುತ್ತದೆ. ಪಾಲಿಸಿ ತೆಗೆದುಕೊಂಡ ತಕ್ಷಣವೇ ವರ್ಷಾಶನ ಪಾವತಿ ಶುರು ಮಾಡಬಹುದು. ಸ್ಥಿರ ಆದಾಯ ಬೇಕು ಎನ್ನುವವರಿಗೆ ಇದು ಉತ್ತಮವಾದ ಆಯ್ಕೆ ಆಗಿದೆ. ಇದನ್ನು ಓದಿ..Farmers Scheme: ರೈತರಿಗೆ ಉಚಿತವಾಗಿ 10000 ಸಾವಿರ ರೂಪಾಯಿಗಳನ್ನು ಪ್ರೋತ್ಸಾಹಕ್ಕಾಗಿ ಕೊಡಲು ಮುಂದಾದ ಸರ್ಕಾರ- ನಿಮಗೂ ಬೇಕು ಎಂದರೆ ಏನು ಮಾಡಬೇಕು ಗೊತ್ತೆ?

Comments are closed.