Shivaraj kumar: ಸುದೀಪ್ vs ನಿರ್ಮಾಪಕ ಕುಮಾರ್ ವಿವಾದಕ್ಕೆ ಶಿವಣ್ಣ ಎಂಟ್ರಿ- ಖಡಕ್ ಆಗಿ ಒಂದೇ ಮಾತಿನಲ್ಲಿ ಹೇಳಿದ್ದೇನು ಗೊತ್ತೇ?

shiva rajkumar-will-compromise-mnkumar-and-sudeep-case

Shivaraj kumar: ಇದೀಗ ಕನ್ನಡ (Kannada) ಚಿತ್ರರಂಗದಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ ವಿಷಯ ಕಿಚ್ಚ ಸುದೀಪ್ (Kiccha Sudeep) ಅವರ ಬಗ್ಗೆ. ಕೆಲವು ನಿರ್ಮಾಪಕರು ಸುದೀಪ್ ಅವರು ತಮ್ಮಿಂದ ಹಣ ಪಡೆದು ಸಿನಿಮಾ ಮಾಡದೆ, ಹಣ ವಾಪಸ್ ಕೊಡದೆ ಮೋಸ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಒಬ್ಬ ನಿರ್ಮಾಪಕ ಆದ ನಂತರ ಮತ್ತೊಬ್ಬರು ಬಂದು, ಹೀಗೆ ಕೆಲವು ನಿರ್ಮಾಪಕರು ಆರೋಪ ಮಾಡುತ್ತಿದ್ದಾರೆ. ಈ ವಿಚಾರಗಳು ದೊಡ್ಡದಾಗುತ್ತಿದ್ದ ಹಾಗೆ ಸುದೀಪ್ (Sudeep) ಅವರು ಸಹ ಎಂಟ್ರಿ ಕೊಟ್ಟಿದ್ದಾರೆ.

shiva rajkumar-will-compromise-mnkumar-and-sudeep-case
shiva rajkumar-will-compromise-mnkumar-and-sudeep-case

ಕಿಚ್ಚ ಸುದೀಪ್ ಅವರು ಕೋರ್ಟ್ ಮೆಟ್ಟಿಲೇರಿ, ತಮ್ಮ ಬಗ್ಗೆ ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿರುವ ಬಗ್ಗೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಹೀಗಾಗುತ್ತಿದ್ದ ಹಾಗೆಯೇ ಚಿತ್ರರಂಗದ ಕೆಲವು ನಿರ್ಮಾಪಕರು ಚಿತ್ರರಂಗದ ಹಿರಿಯ ನಟರಾದ ಶಿವ ರಾಜ್ ಕುಮಾರ್ (Shiva Rajkumar) ಮತ್ತು ರವಿಚಂದ್ರನ್ (Ravichandran) ಅವರ ಹತ್ತಿರ ಹೋಗಿ ತಮ್ಮ ಸಮಸ್ಯೆಗೆ ಪರಿಹಾರ ಕೊಡಿಸಬೇಕು ಎಂದು ಕೇಳಿಕೊಂಡಿದ್ದಾರೆ. ಇನ್ನು ಈ ಸಮಸ್ಯೆಯನ್ನು ಬಗೆಹರಿಸಲು ಶಿವಣ್ಣ (Shiva Rajkumar) ಮುಂದಾಳತ್ವ ವಹಿಸುತ್ತಾರ ಎನ್ನುವ ಕುತೂಹಲ ಎಲ್ಲರಲ್ಲು ಇತ್ತು..ಅದಕ್ಕೀಗ ಉತ್ತರ ಸಿಕ್ಕಿದೆ.. ಇದನ್ನು ಓದಿ..Mahalakshmi: ಇಷ್ಟು ದಿವಸ ಆದಮೇಲೆ ಗಂಡನ ಮೇಲೆ ಹೊಸ ಆರೋಪ ಹೊರಿಸಿದ ಮಹಾಲಕ್ಷ್ಮಿ- ಇಷ್ಟು ದಿವಸ ಇಲ್ಲದ್ದು ಈಗ ಹೇಗೆ ಬಂತು ಎಂದ ನೆಟ್ಟಿಗರು

ಶಿವಣ್ಣ (Shiva Rajkumar) ಅವರು ನಿನ್ನೆ ಗ್ರ್ಯಾಂಡ್ ಆಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದರೆ, ಈ ದಿನ ಶಿವಣ್ಣ (Shiva Rajkumar) ಅವರು ನಟಿಸಿ ಶ್ರೀನಿ (Srini) ನಿರ್ದೇಶನ ಮಾಡಿರುವ ಘೋಸ್ಟ್ (Ghost) ಸಿನಿಮಾದ ಸ್ಪೆಷಲ್ ಟೀಸರ್ ಬಿಡುಗಡೆ ಮಾಡಲಾಯಿತು. ಈ ಕುರಿತು ಪ್ರೆಸ್ ಮೀಟ್ ಇದ್ದಾಗ, ಮಾಧ್ಯಮದವರು ಸುದೀಪ್ ಅವರ ವಿಚಾರಕ್ಕೆ ಮುಂದಾಳತ್ವ ವಹಿಸಿ ಸಮಸ್ಯೆ ಬಗೆಹರಿಸುತ್ತೀರಿ ಎಂದು ಕೇಳಿದ್ದಕ್ಕೆ ಉತ್ತರ ಕೊಟ್ಟಿದ್ದಾರೆ, “ಎಲ್ಲರೂ ಕೂತು ಒಂದೊಂದಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ನನ್ನಿಂದ ಆಗುತ್ತೆ ಅಂತ ಅಲ್ಲ..

ಆಗುವ ಹಾಗೆ ನಾವು ಮಾಡಬೇಕು ಅಷ್ಟೇ..ಎಲ್ಲರು ಕೂತು ಮಾತನಾಡಿದ್ದೇವೆ, ನಾವು ಒಂದು ವಿಚಾರ ಅಂದುಕೊಂಡಿದ್ದೇವೆ, ಅದು ಆಗುತ್ತಾ ಎಂದು ನೋಡಬೇಕು..ಇಲ್ಲಿ ನಾನು ಒಬ್ಬನೇ ಅಲ್ಲ, ಗೀತಾ (Geetha) ಶಿವ ರಾಜ್ ಕುಮಾರ್, ಕೆಪಿ ಶ್ರೀಕಾಂತ್ (KP Sreekanth) ಇವರೆಲ್ಲ ದೊಡ್ಡವರು ಇದ್ದಾರೆ. ಈಗಲೇ ಆ ಹೆಸರು ಬೇಡ ಒಂದು ವಾರದಲ್ಲಿ ಸಮಸ್ಯೆ ಹೋಗುತ್ತದೆ..”ಎಂದು ಹೇಳಿದ್ದಾರೆ ಶಿವಣ್ಣ (Shiva Rajkumar). ಮೊದಲೆಲ್ಲಾ ಅಣ್ಣಾವ್ರು (Dr Rajkumar), ವಿಷ್ಣುವರ್ಧನ್ (Vishnuvardhan) ಅವರು ಮತ್ತು ಅಂಬರೀಶ್ (Ambarish) ಅವರು ಸಮಸ್ಯೆಗಳನ್ನು ಸಾಲ್ವ್ ಮಾಡುತ್ತಿದ್ದರು, ಈಗ ಚಿತ್ರರಂಗಕ್ಕೆ ಒಬ್ಬ ಮುಖಂಡ ಅಂತ ಇಲ್ಲ.. ಇದನ್ನು ಓದಿ..Business Loan: ನಿಮಗೆ ಬಿಸಿನೆಸ್ ಮಾಡುವ ಆಲೋಚನೆ ಇದೆಯಾ? ಹಾಗಿದ್ದರೆ ಸರ್ಕಾರವೇ ಹುಡುಕಿಕೊಂಡು ಕೊಡುತ್ತಿದೆ ಲೋನ್- ಅರ್ಜಿ ಹಾಕಿ ಪಡೆಯಿರಿ.

ಆಗ ಶಿವಣ್ಣ (Shiva Rajkumar) ನಾಯಕತ್ವ ತೆಗೆದುಕೊಳ್ಳಬೇಕು ಅಂತ ನಿರ್ಮಾಪಕರು ಮನವಿ ಮಾಡಿದ್ದರು, ಈ ಬಗ್ಗೆ ಪ್ರಶ್ನೆ ಕೇಳಿದಾಗ ಶಿವಣ್ಣ ಅವರು ಹೇಳಿದ್ದು ಹೀಗೆ..”ನನಗೆ ಸಿನಿಮಾ ಇಷ್ಟ, ಸ್ಥಾನ ಅಲ್ಲ..ಆ ಥರದ ಪರಿಸ್ಥಿತಿ ಬಂದರೆ ಮುಂದಕ್ಕೆ ನೋಡೋಣ. ಯಾವುದೇ ಸಮಸ್ಯೆ ಆದರೂ ಅದನ್ನು ಪರಿಹರಿಸೋಕೆ ನಾವೆಲ್ಲಾ ಇದ್ದೇವೆ, ನಾನು ಸೀನಿಯರ್ ಆಕ್ಟರ್ ಆಗಿ, 100% ಎಲ್ಲದರಲ್ಲೂ ತೊಡಗಿಕೊಳ್ಳುತ್ತೇನೆ..” ಎಂದು ಹೇಳಿದ್ದಾರೆ. ಈಗ ಈ ವಿಷಯಕ್ಕೆ ಶಿವಣ್ಣ (Shiva Rajkumar) ಎಂಟ್ರಿಯಾಗಿದ್ದು ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..BMW CE 02: ಬಂದಿದೆ 7 ಲಕ್ಷದ ಎಲೆಕ್ಟ್ರಿಕ್ ಸ್ಕೂಟರ್- ಚಲಾಯಿಸಲು DL ಕೂಡ ಅಗತ್ಯವಿಲ್ಲ- ಅಂತದ್ದು ಏನು ಸ್ಪೆಷಲ್ ಗೊತ್ತೇ? ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Comments are closed.