Walking Tips: ಯಾವಾಗ ಮಾಡಿದರೂ ಒಂದೇ ಎನ್ನುವ ಜನರ ನಡುವೆ, ವಾಕಿಂಗ್ ಮಾಡಲು ಬೆಸ್ಟ್ ಸಮಯ ಯಾವುದು ಗೊತ್ತೇ? ಮುಂಜಾನೆ ಅಂದು ಕೊಂಡ್ರಾ??
Walking Tips: ಸಾಮಾನ್ಯವಾಗಿ ಜನರಿಗೆ ವಯಸ್ಸಾದಂತೆ ದೇಹದಲ್ಲಿ ಹೆಚ್ಚಿನ ಸಮಸ್ಯೆಗಳು ಕಾಣಿಸಿಕೊಳ್ಳುವುದಕ್ಕೆ ಶುರುವಾಗುತ್ತದೆ. ಈ ರೀತಿ ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಲು, ದೇಹ ಆರೋಗ್ಯವಾಗಿ ಇರಬೇಕು ಎಂದರೆ ನಾವು ಕೆಲವು ಅಭ್ಯಾಸಗಳನ್ನು ಮಾಡಬೇಕು. ಉದಾಹರಣೆಗೆ ಉತ್ತಮವಾದ ಆಹಾರ ಸೇವಿಸುವುದರ ಜೊತೆಗೆ ವ್ಯಾಯಾಮ ಮಾಡುವುದು ಬಹಳ ಮುಖ್ಯ ಆಗುತ್ತದೆ. ವ್ಯಾಯಾಮ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ ಎಂದು ಡಾಕ್ಟರ್ ಕೂಡ ಹೇಳುತ್ತಾರೆ.
ಅದರಲ್ಲೂ 50 ವರ್ಷ ಆಗಿರುವವರು ಪ್ರತಿದಿನ ವಾಕಿಂಗ್ ಮಾಡುವುದರಿಂದ ಬಹಳಷ್ಟು ಪ್ರಯೋಜನ ಪಡೆಯುತ್ತಾರೆ. ವಾಕಿಂಗ್ ಮಾಡುವುದೇನೋ ಒಳ್ಳೆಯದು, ಆದರೆ ದಿನದ ಯಾವ ಸಮಯದಲ್ಲಿ ವಾಕಿಂಗ್ ಮಾಡುವುದು ಒಳ್ಳೆಯದು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ತಜ್ಞರು ಹೇಳುವ ಹಾಗೆ ರಾತ್ರಿ ಊಟ ಮಾಡಿದ ನಂತರ ವಾಕಿಂಗ್ ಮಾಡುವುದರಿಂದ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಗುಣವಾಗುತ್ತದೆ. ಇದನ್ನು ಓದಿ..Business Idea for Women: ಇದು ಕೇವಲ ಮಹಿಳೆಯರಿಗೆ ಮಾತ್ರ; ಗೃಹಿಣಿಯರೇ, ಅಥವಾ ಹುಡುಗಿಯರೇ ನಿಮ್ಮ ಹಣವನ್ನು ಡಬಲ್ ಮಾಡುವುದು ಹೇಗೆ ಗೊತ್ತೇ??
ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ.. 60 ವರ್ಷಗಳಾದ ನಂತರ ಹೆಚ್ಚಿನ ಜನರ್ಸಲ್ಲಿ ಜೀರ್ಣಕ್ರಿಯೆ ವೀಕ್ ಆಗುತ್ತದೆ. ಇದರಿಂದ ಆರೋಗ್ಯದಲ್ಲಿ ಹೆಚ್ಚಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಹೊಟ್ಟೆಯ ಸಮಸ್ಯೆಗಳು ಹೆಚ್ಚಾಗುತ್ತದೆ..ಈ ರೀತಿಯ ಸಮಸ್ಯೆ ಕಡಿಮೆ ಆಗಬೇಕು ಎಂದರೆ, ಪ್ರತಿದಿನ ರಾತ್ರಿ ಊಟ ಮಾಡಿದ ನಂತರ 20 ನಿಮಿಷಗಳ ಕಾಲ ವಾಕ್ ಮಾಡುವುದು ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಇದರಿಂದ ದೇಹದಲ್ಲಿ ಕ್ಯಾಲೋರಿ ಬೇಗ ಬರ್ನ್ ಆಗುತ್ತದೆ.
ಜೊತೆಗೆ ದೇಹದಲ್ಲಿ ಕೊಲೆಸ್ಟ್ರಾಲ್ ಕೂಡ ಕಂಟ್ರೋಲ್ ನಲ್ಲಿ ಇರುತ್ತದೆ ಎನ್ನುತ್ತಾರೆ ವೈದ್ಯರು. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಕೂಡ ಕಡಿಮೆ ಆಗುತ್ತದೆ. ಹೃದಯಾಘಾತ ಆಗುವುದನ್ನು ತಪ್ಪಿಸಲು ರಾತ್ರಿ ವಾಕ್ ಮಾಡುವುದು ಉತ್ತಮ ಎನ್ನುತ್ತಾರೆ ತಜ್ಞರು. ಇದರಿಂದ ದೇಹ ಫಿಟ್ ಆಗಿರುತ್ತದೆ. ಜನರಿಗೆ ದೇಹದ ತೂಕ ಹೆಚ್ಚಾಗಿರುವ ಸಮಸ್ಯೆ ಇದ್ದರೆ, ರಾತ್ರಿ ವಾಕ್ ಮಾಡುವುದರಿಂದ ಕಡಿಮೆ ಆಗುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ. ದೇಹದ ತೂಕ ಇಳಿಸಲು, ದೀರ್ಘಕಾಲದ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ನೈಟ್ ವಾಕಿಂಗ್ ಒಳ್ಳೆಯ ಪರಿಹಾರ ಆಗಿದೆ. ಇದನ್ನು ಓದಿ..Business Idea: ಬಡವರಾಗಿದ್ದರೂ ಈ ಚಿಕ್ಕ ಉದ್ಯಮ ಆರಂಭಿಸಿ: ತಿಂಗಳಿಗೆ 10 ಲಕ್ಷಕ್ಕೂ ಹೆಚ್ಚು ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?
Comments are closed.