Ajit Rai: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರೂ ಅಜಿತ್ ರೈ ರವರಿಗೆ ಕುಲಾಯಿಸಿದ ಅದೃಷ್ಟ- ಹೊಸ ಆದೇಶ ನೀಡಿ ಸಿಹಿ ಸುದ್ದಿ ಕೊಟ್ಟ ಸರ್ಕಾರ.

ajit rai got transferred and people are not happy about that

Ajit Rai: ಇತ್ತೀಚೆಗೆ ಬೆಂಗಳೂರಿನಲ್ಲಿ (Bangalore) ಸಂಚಲನ ಸೃಷ್ಟಿಸಿದ ಘಟನೆ ಅಜಿತ್ ರೈ (Ajit Rai) ಅವರದ್ದು. ಬೆಂಗಳೂರಿನ ಕೆ.ಆರ್ ಪುರದ (KR Puram) ಗ್ರೇಡ್ 1 ತಹಸೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದ ಅಜಿತ್ ರೈ (Ajit Rai) ಅವರು ಅಕ್ರಮವಾಗಿ ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿದ್ದಾರೆ ಎಂದು ಲೋಕಾಯುಕ್ತ ಅವರ ಮನೆಯ ಮೇಲೆ ದಾಳಿ ಮಾಡಿತ್ತು. ಅನುಮಾನದ ರೀತಿಯಲ್ಲೇ ಅಜಿತ್ ರೈ (Ajit Rai) ಅವರ ಮನೆಯಲ್ಲಿ ಕೋಟಿಗಟ್ಟಲೇ ಬೆಲೆಬಾಳುವ ಆಸ್ತಿ ಪತ್ರಗಳು ಸಿಕ್ಕವು..

ajit rai got transferred and people are not happy about that | Ajit Rai: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರೂ ಅಜಿತ್ ರೈ ರವರಿಗೆ ಕುಲಾಯಿಸಿದ ಅದೃಷ್ಟ- ಹೊಸ ಆದೇಶ ನೀಡಿ ಸಿಹಿ ಸುದ್ದಿ ಕೊಟ್ಟ ಸರ್ಕಾರ.
Ajit Rai: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರೂ ಅಜಿತ್ ರೈ ರವರಿಗೆ ಕುಲಾಯಿಸಿದ ಅದೃಷ್ಟ- ಹೊಸ ಆದೇಶ ನೀಡಿ ಸಿಹಿ ಸುದ್ದಿ ಕೊಟ್ಟ ಸರ್ಕಾರ. 2

ಲೋಕಾಯುಕ್ತ (Lokayukta) ಅದನ್ನೆಲ್ಲ ವಶಪಡಿಸಿಕೊಂಡಿತು, ಈ ಘಟನೆ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿಯೇ ಸಂಚಲನ ಸೃಷ್ಟಿಸಿತು. ಅಜಿತ್ ರೈ (Ajit Rai) ಅವರು ತಮ್ಮ ಆದಾಯಕ್ಕಿಂತ ಹೆಚ್ಚಾಗಿ ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದಾರೆ ಎನ್ನಲಾಗಿದೆ. ಈ ಕಾರಣಗಳಿಗೆ ಸರ್ಕಾರ ಇವರನ್ನು ಡೀಪ್ರಮೋಟ್ ಮಾಡಿದೆ. ಗ್ರೇಡ್ 1 ಅಧಿಕಾರಿ ಆಗಿದ್ದ ಅಜಿತ್ (Ajit Rai) ಅವರನ್ನು ಗ್ರೇಡ್ 2 ತಹಸೀಲ್ದಾರ್ ಆಗಿ ಡೀಪ್ರಮೋಟ್ ಮಾಡಿದ್ದು, ಇವರನ್ನು ರಾಯಚೂರು (Raichur) ಜಿಲ್ಲೆಯ ಸಿರವಾರ ತಾಲೂಕಿಗೆ ತಹಸೀಲ್ದಾರ್ ಆಗಿ ನೇಮಿಸಲಾಗಿದೆ. ಇದನ್ನು ಓದಿ..Yatnal: HDK ಹೇಳಿಕೆ ಬೆನ್ನಲ್ಲೇ ಖಡಕ್ ಹೇಳಿಕೆ ಕೊಟ್ಟ ಯತ್ನಾಳ್- ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಟಾಂಗ್ ಕಂಡು ಶೇಕ್ ಆದ ಸಿದ್ದು, ಡಿಕೆಶಿ.

ಸಿರವಾರವನ್ನು ನಮ್ಮ ರಾಜ್ಯದ ಅತ್ಯಂತ ಹಿಂದುಳಿದ ಗ್ರಾಮ ಎಂದು ಹೇಳಲಾಗುತ್ತದೆ. ಈ ಗ್ರಾಮದಲ್ಲಿ ಬಡವರು, ಅನಕ್ಷರಸ್ಥರು, ಕಷ್ಟದಲ್ಲಿ ಇರುವವರು ಇಂಥ ಜನರೇ ಇದ್ದಾರೆ. ಈ ಥರದ ಜಾಗಕ್ಕೆ ಅಜಿತ್ ರೈ (Ajit Rai) ಅವರನ್ನು ತಹಸೀಲ್ದಾರ್ ಆಗಿ ನೇಮಕ ಮಾಡಿರುವುದಕ್ಕೆ ಗ್ರಾಮದ ಜನತೆ ಹಾಗೂ ರಾಯಚೂರು ಜಿಲ್ಲೆಯ ಜನರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಇವರು ಸಿರವಾರ ಗ್ರಾಮದಲ್ಲಿ ಇರಬಾರದು ಎನ್ನುತ್ತಿದ್ದಾರೆ.

ಸಿರವಾರ ಹಿಂದುಳಿದ ಗ್ರಾಮ ಆಗಿದ್ದು, ಈ ಥರದ ಜಾಗಕ್ಕೆ, ಗ್ರಾಮವನ್ನು ಮುನ್ನಡೆಸಿ, ಅಭಿವೃದ್ಧಿ ಗೊಳಿಸುವಂಥ ಅಧಿಕಾರಿಗಳನ್ನು ನೇಮಿಸಬೇಕು. ಹೀಗೆ ಅಕ್ರಮ ಆಸ್ತಿ ಸಂಪಾದನೆ ಮಾಡಿ, ಲೋಕಾಯುಕ್ತ ಕೈಗೆ ಸಿಕ್ಕಿಹಾಕಿಕೊಂಡ ಅಧಿಕಾರಿಯನ್ನು ನೇಮಿಸಿದರೆ, ಅವರು ಗ್ರಾಮವನ್ನು ಅಭಿವೃದ್ಧಿ ಮಾಡುವುದಿಲ್ಲ.. ಅನಕ್ಷರಸ್ಥರು, ಕಷ್ಟದಲ್ಲಿ ಇರುವ ಜನರೇ ಇರುವುದರಿಂದ ಇಲ್ಲಿ ಕೂಡ ಅವರು ಕೋಟಿಗಟ್ಟಲೇ ಹಣ ಕಬಳಿಸಬಹುದು ಇಂಥ ಅವಕಾಶ ಕೊಡಬಾರದು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ..Driving Tricks: ನೀವು ಹೈವೇ ಗಳಲ್ಲಿ ವಾಹನ ಚಲಾವಣೆ ಮಾಡುವಾಗ ಫಾಲೋ ಮಾಡಬೇಕಾದ ಟ್ರಿಕ್ಸ್ ಗಳು- ಇವುಗಳನ್ನು ಫಾಲೋ ಮಾಡಿ ಬದಲಾವಣೆ ನೋಡಿ.

ತಹಸೀಲ್ದಾರ್ ಆಫೀಸ್ ಗೆ ಕಷ್ಟದಲ್ಲಿ ಇರುವವರು ಹೋಗುತ್ತಾರೆ ಅವರಿಂದಲೂ ಸಹ ಹೀಗೆ ಹಣ ವಸೂಲಿ ಮಾಡುತ್ತಾರೆ, ಇಂಥ ಅಧಿಕಾರಿ ಬರುವುದೇ ಬೇಡ, ಅವರನ್ನು ವಾಪಸ್ ಕಳಿಸಬೇಕು ಎಂದು ಜನರು ಹೇಳುತ್ತಿದ್ದಾರೆ. ಆದರೆ ಸರ್ಕಾರ ಅಥವಾ ಜಿಲ್ಲಾಧಿಕಾರಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸೈಲೆಂಟ್ ಆಗಿರುವುದು ಈಗ ಇನ್ನಷ್ಟು ಅನುಮಾನ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಈ ವಿಚಾರ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Motorola: ಭಾರತದಲ್ಲಿ ಮಾರಾಟ ಆರಂಭಿಸಿದ ಮೋಟೋಟೋಲ- ರೇಜರ್ 40 ಸರಣಿ ಮೊಬೈಲುಗಳ ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

Comments are closed.