Annabhagya: ಅನ್ನಭಾಗ್ಯ ಅಕ್ಕಿಯ ಹಣದಲ್ಲಿಯೂ ಷರತ್ತುಗಳು- ಎಲ್ಲರಿಗೂ ಅಲ್ಲ, ಇವರಿಗೆ ಮಾತ್ರ ಹಣ ಖಾತೆಗೆ ಬರುತ್ತದೆ
Annabhagya: ಅನ್ನಭಾಗ್ಯ (Annabhagya) ಯೋಜನೆಯ ಅಡಿಯಲ್ಲಿ ಬಿಪಿಎಲ್ (BPL), ಎಪಿಎಲ್ (APL) ಕಾರ್ಡ್ ಹೊಂದಿರುವ ಪ್ರತಿ ವ್ಯಕ್ತಿಗೆ 10 ಕೆಜಿ ಕೊಡುವ ನಿರ್ಧಾರವನ್ನು ಸರ್ಕಾರ ಮಾಡಿತ್ತು. ಆದರೆ ಅಕ್ಕಿ ಸಿಗದ ಕಾರಣ, ಅವರ ಬ್ಯಾಂಕ್ ಖಾತೆಗಳಿಗೆ ಹಣ ಹಾಕುವುದಾಗಿ ಹೇಳಿತ್ತು. ಆದರೆ ಅನ್ನಭಾಗ್ಯ (Annabhagya) ಯೋಜನೆಯ ಸೌಲಭ್ಯ ಪಡೆಯುವವರಿಗೆ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರ ಪ್ರಕಾರ ಎಲ್ಲರಿಗೂ ಹಣ ಸಿಗುವುದಿಲ್ಲ. ಹಾಗಿದ್ದರೆ ಆ ಷರತ್ತುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
*ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಈಗ ಅಂತ್ಯೋದಯ ಅನ್ನ ಯೋಜನೆಯ ಅಡಿಯಲ್ಲಿ ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಹಣ ವರ್ಗಾವಣೆ ಕೆಲಸವನ್ನು ಶುರು ಮಾಡಿದೆ.
*ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಿದ ಹಾಗೆ, ಆನಾಸ 84 ಡಿಆರ್ 2023 ಇಂದ, ಜುಲೈ 1ರಿಂದ ರೇಷನ್ ಕಾರ್ಡ್ ಇರುವ ಎಲ್ಲರಿಗೂ ಪ್ರತಿ ತಿಂಗಳು ಒಬ್ಬ ವ್ಯಕ್ತಿಗೆ ಹೆಚ್ಚುವಾಗಿ 5 ಕೆಜಿ ಕೊಡುವ ನಿರ್ಧಾರ ಮಾಡಲಾಗಿತ್ತು. ಆದರೆ ಈಗ 5 ಕೆಜಿ ಹೆಚ್ಚುವರಿ ಅಕ್ಕಿ ನೀಡಲು ಸಾಧ್ಯವಾಗದ ಕಾರಣ ಒಂದು ಕೆಜಿ ಅಕ್ಕಿಗೆ (Annabhagya) 34 ರೂಪಾಯಿಯ ಹಾಗೆ 34×5=₹170 ರೂಪಾಯಿಯನ್ನು ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥರು ಎಂದು ಇರುವವರ ಖಾತೆಗೆ ವರ್ಗಾವಣೆ ಮಾಡುವ ನಿರ್ಧಾರ ಮಾಡಲಾಗಿದೆ. ಇದನ್ನು ಓದಿ..ATM: ನೀವು ATM ನಿಂದ ಹಣ ಪಡೆಯುವಾಗ ಹಣ ಬಾರದೆ ಇದ್ದರೇ, ನಿಮ್ಮ ಹಣ ಮಾತ್ರ ಅಲ್ಲ. ಪರಿಹಾರ ಕೂಡ ಪಡೆಯಬಹುದು. ಹೇಗೆ ಗೊತ್ತೆ?
*ಅಂತ್ಯೋದಯ ಕಾರ್ಡ್ ಹೊಂದಿರುವ ರೇಷನ್ ಕಾರ್ಡ್ ಬಳಕೆದಾರರ ಪೈಕಿ ಒಂದು ಕುಟುಂಬದಲ್ಲಿ 3 ಅಥವಾ 3ಕ್ಕಿಂತ ಹೆಚ್ಚು ಸದಸ್ಯರು ಇದ್ದರೆ, ಆ ಕುಟುಂಬಕ್ಕೆ ಈಗಾಗಲೇ 35ಕೆಜಿ ಆಹಾರ ಧಾನ್ಯಗಳು ಸಿಗುತ್ತಿದೆ, ಹಾಗಾಗಿ ಅಂಥ ಕುಟುಂಬಗಳು ಹಣ ವರ್ಗಾವಣೆಗೆ ಅರ್ಹತೆ ಪಡೆಯುವುದಿಲ್ಲ ಎಂದು ತಿಳಿಸಲಾಗಿದೆ. ಆದರೆ ಮನೆಯಲ್ಲಿ 04 ಸದಸ್ಯರು ಇದ್ದರೆ ಆ ಕುಟುಂಬ 170 ರೂಪಾಯಿಗಳನ್ನು, 34X5X1 ರೂಪಾಯಿ ಪಡೆಯುತ್ತದೆ. ಕುಟುಂಬದಲ್ಲಿ 5 ಸದಸ್ಯರು ಇದ್ದರೆ, 34X5X3 ಹಾಗೆ 510 ರೂಪಾಯಿ ಪಡೆಯುತ್ತಾರೆ.. ಕುಟುಂಬದಲ್ಲಿ 6 ಸದಸ್ಯರು ಇದ್ದರೆ, 34X5X5 ಹಾಗೆ 850 ರೂಪಾಯಿ ಪಡೆಯುತ್ತಾರೆ.
*ರೇಷನ್ ಕಾರ್ಡ್ ಪ್ರಕಾರ ಕುಟುಂಬದ ಮುಖ್ಯಸ್ಥರಾಗಿರುವವರ, ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್ ಗೆ ಅಂತ್ಯೋದಯ ಯೋಜನೆಯ ಹಣ ವರ್ಗಾವಣೆ ಆಗಲಿದೆ.
*ಹಿಂದಿನ ಮೂರು ತಿಂಗಳುಗಳಲ್ಲಿ ಆಹಾರ ಧಾನ್ಯಗಳನ್ನು ಪಡೆದಿರುವ ಕುಟುಂಬ ಈ ಸೌಲಭ್ಯ ಪಡೆಯಲು ಅರ್ಹತೆ ಪಡೆಯುತ್ತದೆ.
*ಕುಟುಂಬದ ಮುಖ್ಯಸ್ಥರು ಯಾರು ಎಂದು ಜನರೇ ನಿರ್ಧಾರ ಮಾಡಬೇಕು. ಯಾವ ರೇಷನ್ ಕಾರ್ಡ್ ನಲ್ಲಿ ಮುಖ್ಯಸ್ಥರು ಇರುವುದಿಲ್ಲ ಅಥವಾ ಒಬ್ಬರಿಗಿಂತ ಹೆಚ್ಚು ಮುಖ್ಯಸ್ಥರು ಇರುತ್ತಾರೋ ಅಂಥ ಕುಟುಂಬವನ್ನು ಹಣ ವರ್ಗಾವಣೆಯಿಂದ ದೂರ ಇಡಲಾಗುತ್ತದೆ (Annabhagya) . ಇದನ್ನು ಓದಿ..Nokia 4G: 4G ಆಯ್ಕೆಯೊಂದಿಗೆ ಕೀ ಪ್ಯಾಡ್ ಮೊಬೈಲ್ ಬಿಡುಗಡೆ ಮಾಡಿದ ನೋಕಿಯಾ- ಹಳ್ಳಿಯ ಜನರಿಗೆ ಇನ್ನು ಮುಂದೆ ಹಬ್ಬ
ಮಹಿಳೆಯರೇ ಇರುವ ಮನೆಯಲ್ಲಿ ಹಿರಿಯ ಮಹಿಳೆಯನ್ನು ಮುಖ್ಯಸ್ಥೆಯಾಗಿ ನೇಮಿಸಬೇಕು. ಪ್ರತಿ ಕುಟುಂಬದ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಯವರು ಜಿಲ್ಲಾಡಳಿತಕ್ಕೆ ತಿಳಿಸಬೇಕು. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಎಲ್ಲಾ ಕುಟುಂಬಗಳಿಗೂ ಭೇಟಿ ನೀಡಿ, ಮುಖ್ಯಸ್ಥರು ಯಾರು ಎಂದು ತೀರ್ಮಾನಿಸಲು ಸಹಾಯ ಮಾಡಬೇಕು. ಈ ಸಮಸ್ಯೆಗಳನ್ನು ಪರಿಹರಿಸಿಕೊಂಡ ನಂತರ ಹಣ ವರ್ಗಾವಣೆಗೆ ಅರ್ಹತೆ ಪಡೆಯುತ್ತಾರೆ.
*ಪ್ರಸ್ತುತ ಇರುವ 1,28,16,253 ರೇಶನ್ ಕಾರ್ಡ್ ಗಳಲ್ಲಿ 1,28,13,048 ಕಾರ್ಡ್ ಗಳ ಕುಟುಂಬದ ರೇಶನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ. 3016 ರೇಶನ್ ಕಾರ್ಡ್ ಗಳು ಮಾತ್ರ ಲಿಂಕ್ ಆಗಿಲ್ಲ. ಆ ಕುಟುಂಬಗಳ ರೇಷನ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಕೆಲಸ ಬಾಕಿ ಇದೆ, ಈ ಕೆಲಸವನ್ನು ಬೇಗ ಮಾಡಬೇಕು. ಒಂದು ವೇಳೆ ಟೆಕ್ನಿಕಲ್ ಆಗಿ ಅಥವಾ ಬೇರೆ ಕಾರಣಕ್ಕೆ ಲಿಂಕ್ ಮಾಡಲು ಆಗದೆ ಹೋದರೆ, ಅವರಿಗೆ ಬೇರೆ ಮಾರ್ಗವನ್ನು ಕಲ್ಪಿಸಿಕೊಡಬೇಕು. ಇದನ್ನು ಓದಿ..Odisha Train Case: ಒಡಿಸ್ಸಾ ರೈಲು ಪ್ರಕರಣದಲ್ಲಿ CBI ಅಖಾಡದಲ್ಲಿ- ಮೂವರ ಅರೆಸ್ಟ್. ಅಸಲಿಗೆ ಅರೆಸ್ಟ್ ಆದವರು ಯಾರು ಗೊತ್ತೇ?
*ರೇಶನ್ ಕಾರ್ಡ್ ನ ಮುಖ್ಯಸ್ಥರು ಬ್ಯಾಂಕ್ ಖಾತೆ ಹೊಂದಿಲ್ಲದೆ ಇದ್ದರೆ, ಬ್ಯಾಂಕ್ ಖಾತೆ ಇದ್ದರು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಸದೆ ಇದ್ದಲ್ಲಿ, ಅವರ ಬ್ಯಾಂಕ್ ಖಾತೆಯ ಡೀಟೇಲ್ಸ್ ಮಾಹಿತಿ ಇನ್ನು ನೀಡಿಲ್ಲದೆ ಇದ್ದಲ್ಲಿ, ನಿಷ್ಕ್ರಿಯ ಬ್ಯಾಂಕ್ ಅಕೌಂಟ್ ಅನ್ನು ಪುನರುಜ್ಜೀವನಗೊಳಿಸಿ ನಂತರ ಆ ಕುಟುಂಬಕ್ಕೆ ಹಣ ವರ್ಗಾವಣೆ ಮಾಡಲಾಗುತ್ತದೆ. ಜುಲೈ ತಿಂಗಳಿನಿಂದ ಹಣ ವರ್ಗಾವಣೆಗೆ ಪರಿಗಣಿಸಲಾಗಿದ್ದು, ಜುಲೈ 20ರ ಒಳಗೆ ಎಲ್ಲಾ ರೇಷನ್ ಕಾರ್ಡ್ ಇರುವವರು ತಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಅನ್ನು ನೀಡಬೇಕು. ಆ ಕುಟುಂಬಗಳಿಗೆ ಆಗಸ್ಟ್ ಇಂದ ಹಣ ವರ್ಗಾವಣೆ ಆಗುತ್ತದೆ. ಒಂದು ವೇಳೆ ಬ್ಯಾಂಕ್ ಖಾತೆ ಇಲ್ಲದೆ ಇರುವವರು, ಇದೆಲ್ಲವನ್ನು ಸರಿ ಮಾಡಿಕೊಳ್ಳಬೇಕು (Annabhagya) .
*ಅರ್ಹತೆ ಹೊಂದಿರುವ ಕುಟುಂಬಗಳಿಗೆ ಸಿಗುವ ಹಣ ವರ್ಗಾವಣೆಯು ಜಿಲ್ಲಾ ಮಟ್ಟದಲ್ಲಿ ನಡೆಯುತ್ತದೆ..ಡಿಡಿಓ ಕೋಡ್, ಹಣ ವರ್ಗಾವಣೆ ಮೊತ್ತ, ಹಣ ವರ್ಗಾವಣೆಗೆ ಅರ್ಹತೆ ಹೊಂದಿರುವ ರೇಷನ್ ಕಾರ್ಡ್ ಗಳು ಹಾಗೂ ಅದಲ್ಲಿರುವ ಸದಸ್ಯರ ಲಿಸ್ಟ್..NIC ಸಂಸ್ಥೆಯು ಆಹಾರ ತಂತ್ರಾಂಶಗಳನ್ನು ತಯಾರಿಸಿ ಆಕ್ಟಿವ್ ಆಗಿರುವ ಬ್ಯಾಂಕ್ ಅಕೌಂಟ್ ಪರಿಶೀಲಿಸಿ ಡಿಐಟಿಗೆ ವರ್ಗಾವಣೆ ಮಾಡಿಸುವುದು, NIC ಗೆ ಸಿಗುವ ದತ್ತಾಂಶವನ್ನು
National Payments Corporation of India ಪರಿಶೀಲಿಸಬೇಕು. ಹಣ ವರ್ಗಾವಣೆಯ ಅರ್ಹತೆ ಪಡೆಯುವ ಕುಟುಂಬದ ದತ್ತಾಂಶವನ್ನು ಡಿಬಿಟಿ ಕೋಶವನ್ನು NIC ಗೆ ಟ್ರಾನ್ಸ್ಫರ್ ಮಾಡಬೇಕು.
ನಂತರ NIC ಸಂಸ್ಥೆಯ ಹಣ ವರ್ಗಾವಣೆಗೆ ಅರ್ಹತೆ ಇರುವ ಕುಟುಂಬಗಳ ಕಡತ ತಯಾರಿಸಿ, ಡಿಬಿಟಿ ವ್ಯವಸ್ಥೆಗೆ ಟ್ರಾನ್ಸ್ಫರ್ ಮಾಡಿದ, ಡಿಬಿಟಿ ಕೋಶವನ್ನು ಸಂಬಂಧಿಸಿದ ಡಿಡಿಓ ಗಕಿಗೆ ಲಾಗ್ ಇನ್ ಮಾಡಿ, ಪಾವತಿ ಮಾಡುವ ಕಡತಗಳನ್ನು ಕಲೆಕ್ಟ್ ನಾಡಬೇಜು. ಮತ್ತು ಡಿಡಿಓ ಗಳು ಈ ಕಡತಕ್ಕೆ ಅನುಮೋದನೆ ನೀಡಬೇಕು. ನಂತರ ಕೆ2 ಸಂಸ್ಥೆಗೆ ಟ್ರಾನ್ಸ್ಫರ್ ಮಾಡಿದಾಗ, 12 ವ್ಯವಸ್ಥೆಯಿಂದ ಮಂಜೂರು ಆದೇಶ ಹಜ್ಯ್ ಡಿಸಿ ಬಿಲ್ ಸೃಷ್ಟಿಸಿ ಜಿಲ್ಲಾಧಿಕಾರಿಕರ ಅನುಮತಿಗೆ ಕಳಿಸಬೇಕು..ಬಳಿಕ ಕಡತಗಳನ್ನು ಕೆ2 UTR ಸಂಖ್ಯೆ, ಸೃಜನೆಗಾಗಿ ಆರ್ಬಿಐಗೆ ಕಳಿಸಬೇಕು. ಆರ್.ಬಿ.ಐ ಇಂದ ಬರುವ UTR ಸಂಖ್ಯೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಅರ್ಹತೆ ಇರುವವರ ಬ್ಯಾಂಕ್ ಅಕೌಂಟ್ ಗೆ ಟ್ರಾನ್ಸ್ಫರ್ ಮಾಡಲಾಗುತ್ತದೆ.
Comments are closed.