ATM: ನೀವು ATM ನಿಂದ ಹಣ ಪಡೆಯುವಾಗ ಹಣ ಬಾರದೆ ಇದ್ದರೇ, ನಿಮ್ಮ ಹಣ ಮಾತ್ರ ಅಲ್ಲ. ಪರಿಹಾರ ಕೂಡ ಪಡೆಯಬಹುದು. ಹೇಗೆ ಗೊತ್ತೆ?

how to get compensation when ATM cash transaction is failed

ATM: ಈಗಿನ ಕಾಲದಲ್ಲಿ ಹಣದ ವಹಿವಾಟುಗಳು ಹೆಚ್ಚಾಗಿ ನಡೆಯುವುದು ಬ್ಯಾಂಕ್ ಗಳಲ್ಲಿ, ಯುಪಿಐ (UPI) ಅಥವಾ ಎಟಿಎಂ (ATM) ಗಳಲ್ಲಿ. ಹೆಚ್ಚಿನ ಜನರು ಬ್ಯಾಂಕ್ ಅಕೌಂಟ್ ಇಂದ ದುಡ್ಡು ಡ್ರಾ ಮಾಡುವುದಕ್ಕೆ ಎಟಿಎಂ (ATM) ಬಳಸುತ್ತಾರೆ. ಪ್ರತಿಯೊಬ್ಬರ ಹತ್ತಿರವೂ ಎಟಿಎಂ (ATM) ಕಾರ್ಡ್ ಇರುತ್ತದೆ. ಆದರೆ ಕೆಲವೊಮ್ಮೆ ಎಟಿಎಂ (ATM) ಕಾರ್ಡ್ ಇಂದ ಹಣ ತೆಗೆದುಕೊಳ್ಳುವಾಗ ಸಮಸ್ಯೆ ಉಂಟಾಗುತ್ತದೆ. ಅಂಥದ್ದೊಂದು ಸಮಸ್ಯೆ ಮತ್ತು ಅದಕ್ಕೆ ಪರಿಹಾರ ಎರಡನ್ನು ಕೂಡ ಇಂದು ನಿಮಗೆ ತಿಳಿಸುತ್ತೇವೆ..

how to get compensation when ATM cash transaction is failed
how to get compensation when ATM cash transaction is failed

ಎಟಿಎಂ (ATM) ನಲ್ಲಿ ಹಣ ವಿತ್ ಡ್ರಾಮಾಡಲು ಹೋದಾಗ, ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಡೆಬಿಟ್ ಆಗಿಬಿಡಬಹುದು, ಆದರೆ ನಿಮ್ಮ ಕೈಗೆ ಎಟಿಎಂ ಮಷಿನ್ ಇಂದ ಹಣ ಬರುವುದಿಲ್ಲ. ಒಂದು ವೇಳೆ ನಿಮಗೆ ಆ ರೀತಿ ಆದರೆ, ಸಾಮಾನ್ಯವಾಗಿ ಎಲ್ಲರೂ ತಕ್ಷಣವೇ ಬ್ಯಾಂಕ್ ಗೆ ಹೋಗಿ ಕೇಂಪ್ಲೇಂಟ್ ಕೊಡುತ್ತೇವೆ, ಆದರೆ ಬ್ಯಾಂಕ್ ನವರು ಈ ಸಮಸ್ಯೆಯನ್ನು ತಕ್ಷಣ ಪರಿಹರಿಸದೆ, ನಿಮ್ಮ ಅಕೌಂಟ್ ಗೆ ದುಡ್ಡು ಬರದೆ ಹೋದರೆ ಏನು ಮಾಡಬೇಕು? ಇದನ್ನು ಓದಿ..Kannada News: ಕೊನೆಗೂ ನಿಗದಿ ಆಯಿತು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ವೇಗದ ಮಿತಿ- ಎಷ್ಟಕ್ಕೆ ಸೀಮಿತಗೊಳಿಸಲಾಗಿದೆ ಗೊತ್ತೇ? ಇದಕ್ಕೆ ಟೋಲ್ ಕಟ್ಟಬೇಕಾ?

ಒಂದು ವೇಳೆ ಎಟಿಎಂ (ATM) ಕಾರ್ಡ್ ವಿಷಯದಲ್ಲಿ ನಿಮಗೂ ಇದೇ ರೀತಿ ಆಗಿ, ಹಣ ಡೆಬಿಟ್ ಆಗಿರುವ ಮೆಸೇಜ್ ಬಂದು ಕೈಗೆ ಹಣ ಸಿಗದೆ ಹೋದರೆ, ಮೊದಲು ಬ್ಯಾಂಕ್ ಗೆ ದೂರು ನೀಡಿ, ನಿಯಮದ ಪ್ರಕಾರ 12 ದಿನಗಳ ಒಳಗೆ ಬ್ಯಾಂಕ್ ಕಡೆಯಿಂದ ನಿಮ್ಮ ಹಣ ವಾಪಸ್ ಬರೆ ಹೋದರೆ, ನೀವು RBI ನ ಒಂಬುಡ್ ಮನ್ಸ್ ಗೆ ದೂರು ನೀಡಬಹುದು. ಅದರಿಂದ ನಿಮ್ಮ ಬ್ಯಾಂಕ್ ಗೆ ಸೂಚನೆ ಹೋಗುತ್ತದೆ. ತಪ್ಪು ಮಾಡಿರುವ ಬ್ಯಾಂಕ್ ತಕ್ಷಣವೇ ನಿಮ್ಮ ಹಣವನ್ನು ವಾಪಸ್ ಕೊಡುತ್ತದೆ.

ಈ ರೀತಿ ಆದರೆ ಬ್ಯಾಂಕ್ ನಿಮ್ಮ ಹಣವನ್ನು ನಿಮಗೆ ಕೊಡುವುದು ಮಾತ್ರವಲ್ಲ, ಬ್ಯಾಂಕ್ ನಿಮಗೆ ದಂಡವನ್ನು ಕೂಡ ಕಟ್ಟಿಕೊಡುತ್ತದೆ. 12 ದಿನಗಳ ನಂತರ ಹಣ ಬರುತ್ತದೆ ಎಂದು ಹೇಳುವುದಾದರೆ, ತಡ ಆಗುವ ಒಂದೊಂದು ದಿನಕ್ಕೆ 100 ರೂಪಾಯಿಯ ಹಾಗೆ ದಂಡ ಕಟ್ಟಿಕೊಡಬೇಕಾಗುತ್ತದೆ. ಈ ರೀತಿಯಾಗಿ ನೀವು ಹಣ ಪಡೆಯಬಹುದು ಎನ್ನುವ ವಿಷಯ ಹಲವರಿಗೆ ಗೊತ್ತಿರುವುದಿಲ್ಲ, ನಿಮ್ಮ ಹತ್ತಿರದವರಿಗೆ ತಿಳಿಸಿ. ಇದನ್ನು ಓದಿ..Business Idea: ವರ್ಷ ಪೂರ್ತಿ ಡಿಮ್ಯಾಂಡ್ ಇರುವ ಈ ಉದ್ಯಮವನ್ನು ಐದು ಸಾವಿರ ಖರ್ಚು ಮಾಡಿ ಆರಂಭ ಮಾಡಿ. ಹಳ್ಳಿ ಹಳ್ಳಿಯು ಡಿಮ್ಯಾಂಡ್, ಯಶಸ್ಸು ಖಚಿತ.

ಇದೊಂದೇ ವಿಚಾರ ಅಲ್ಲ, ಒಂದು ವೇಳೆ ನೀವು ATM ನಲ್ಲಿ ಹಣ ಡ್ರಾ ಮಾಡುವಾಗ, 500 ಡ್ರಾ ಮಾಡಲು ಹೋಗಿ, 400 ರೂಪಾಯಿ ಮಾತ್ರ ಬಂದು, ಇನ್ನು 100 ರೂಪಾಯಿ ಬರದೆ ಹೋದರೆ, ಆಗಲು ಕೂಡ ನೀವು ಆರ್ಬಿಐ ನ ಒಂಬುಡ್ ಮನ್ಸ್ ಗೆ ದೂರು ಕೊಡಬಹುದು. ಇದರಿಂದ ನಿಮ್ಮ ಸಮಸ್ಯೆಗಳು ಸಾಲ್ವ್ ಆಗುತ್ತದೆ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಇದನ್ನು ಓದಿ..Smart Phone Tricks: ಮೊಬೈಲ್ ನಲ್ಲಿ ಇಂಟರ್ನೆಟ್ ಸರಿಯಾಗಿ ವರ್ಕ್ ಆಗುತ್ತಿಲ್ಲ ಎಂದರೆ, ಫಾಲೋ ಮಾಡಬೇಕಾದ ಟ್ರಿಕ್ಸ್ ಗಳು.

Comments are closed.