Odisha Train Case: ಒಡಿಸ್ಸಾ ರೈಲು ಪ್ರಕರಣದಲ್ಲಿ CBI ಅಖಾಡದಲ್ಲಿ- ಮೂವರ ಅರೆಸ್ಟ್. ಅಸಲಿಗೆ ಅರೆಸ್ಟ್ ಆದವರು ಯಾರು ಗೊತ್ತೇ?

cbi arrested 3 people in odisha train case

Odisha Train Case: ಜೂನ್ ತಿಂಗಳಿನಲ್ಲಿ ನಡೆದ ಒಡಿಸ್ಸಾದ ರೈಲು ಅಪಘಾತ (Odisha Train Case) ಇಡೀ ಭಾರತ ದೇಶವೇ ಭಯದಲ್ಲಿ ನಡುಗುವ ಹಾಗೆ ಮಾಡಿತ್ತು. ಎರಡು ಪ್ಯಾಸೆಂಜರ್ ರೈಲುಗಳು ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆದ ಈ ಘಟನೆಯಿಂದ 293 ಜನರು ಪ್ರಾಣ ಕಳೆದುಕೊಂಡರು, 1193ಜನ ಗಾಯಗೊಂಡರು. ಈ ಘಟನೆಯ (Odisha Train Case) ಸುತ್ತ ಹಲವಾರು ಅನುಮಾನಗಳು ಕೂಡ ಮೂಡಿದ್ದವು. ಈ ಕೇಸ್ ಅನ್ನು ಸಿಬಿಐ ಗೆ ಕೂಡ ವರ್ಗಾವಣೆ ಆಗಿತ್ತು.

cbi arrested 3 people in odisha train case
cbi arrested 3 people in odisha train case

ಈ ರೀತಿ ಆಗಿದ್ದರ ಹಿಂದೆ ದುರುದ್ದೇಶ ಇರಬಹುದಾ ಅಥವಾ ಬೇಕು ಎಂದೇ ಮಾಡಿರುವುದಾ ಎನ್ನುವ ಅನುಮಾನವಿತ್ತು, CBI ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಈಗ ಮೂವರು ಅಧಿಕಾರಗಳ ಬಂಧನವಾಗಿದೆ. ಹಿರಿಯ ವಿಭಾಗದ ಇಂಜಿನಿಯರ್ ಅರುಣ್ ಕುಮಾರ್ ಮಹಾಂತ (Arun Kumar Mahant), ಕಿರಿಯ ವಿಭಾಗದ ಇಂಜಿನಿಯರ್ ಎಂಡಿ ಆಮಿರ್ ಖಾನ್ (Amir Khan), ತಂತ್ರಜ್ಞ ಪಾಪು ಕುಮಾರ್ (Papu Kumar) ಈ ಮೂವರನ್ನು ಬಂಧಿಸಲಾಗಿದೆ. ಇದನ್ನು ಓದಿ..Kannada News: ಕೊನೆಗೂ ನಿಗದಿ ಆಯಿತು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ವೇಗದ ಮಿತಿ- ಎಷ್ಟಕ್ಕೆ ಸೀಮಿತಗೊಳಿಸಲಾಗಿದೆ ಗೊತ್ತೇ? ಇದಕ್ಕೆ ಟೋಲ್ ಕಟ್ಟಬೇಕಾ?

ಐಪಿಸಿ ಸೆಕ್ಷನ್ 304ರ ಅಡಿಯಲ್ಲಿ ಈ ಮೂವರು ಬಂಧನಕ್ಕೆ ಒಳಗಾಗಿದ್ದಾರೆ. ಇವರಲ್ಲಿ ಅರುಣ್ ಕುಮಾರ್ ತನಿಖಾ ಸಮಿತಿಯ ಸದಸ್ಯರಾಗಿದ್ದು, ಅವರು ಒಂದು ಪ್ರಾಥಮಿಕ ರಿಪೋರ್ಟ್ ಬರೆದಿದ್ದರು. ಬಳಿಕ ಆ ಪ್ರಾಥಮಿಕ ರಿಪೋರ್ಟ್ ವಿರುದ್ಧ ಭಿನ್ನಾಭಿಪ್ರಾಯದ ಟಿಪ್ಪಣಿಯನ್ನು ಕೂಡ ಬರೆದರು. ಮೂವರು ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮಗಳು ಅಪಘಾತ (Odisha Train Case) ಆಗುವುದಕ್ಕೆ ಕಾರಣವಾಗಿದೆ ಎನ್ನುವ ವಿಷಯ ಗೊತ್ತಾಗಿದೆ.

ಇವರು ಮಾಡಿರುವ ಕೆಲಸ ಅಪಘಾತಕ್ಕೆ (Odisha Train Case) ಕಾರಣ ಆಗುತ್ತದೆ ಎಂದು ಅವರಿಗೆ ತಿಳಿದಿತ್ತು, ಆದರೆ ಇವರುಗಳು ಮಾಡಿದ್ದು ಬೇಕು ಎಂದೇ ಮಾಡಿಲ್ಲ ಎನ್ನುವುದರಿಂದ ಇದು ಹತ್ಯೆಗೆ ಸಮಾನವಾದ ಅಪರಾಧ ಅಲ್ಲ ಇದು ನರಹತ್ಯೆ ಎಂದು ಸಿಬಿಐ ತನಿಖೆಯಲ್ಲಿ ತಿಳಿಸಿದೆ..ಈ ಮೂವರು ಕೂಡ ತಾವು ಮಾಡಿದ ಕೆಲಸದ ಸಾಕ್ಷಿಗಳು ಕಾಣಿಸದ ಹಾಗೆ ಮಾಡಿರುವುದಕ್ಕೆ ಸಿಬಿಐ ಇವರನ್ನು ಬಂಧಿಸಿದೆ. ಹಾಗೆಯೇ ಇವರ ಮೇಲೆ ಐಪಿಸಿ ಸೆಕ್ಷನ್ 201 ಸಹ ಹೊರಸಿದೆ (Odisha Train Case) . ಇದನ್ನು ಓದಿ..Nandini: ಪಕ್ಕದ ರಾಜ್ಯ ಕೇರಳದಿಂದ ಹೊರ ಬಂದ ಬೆನ್ನಲ್ಲೇ, ಸೆಡ್ಡು ಹೊಡೆದ ನಂದಿನಿ- ಖಡಕ್ ಹೆಜ್ಜೆ ಇಟ್ಟು ಮಾಡಿದ್ದೇನು ಗೊತ್ತೇ?

ಜೂನ್ 6ರಂದು ಈ ಕೇಸ್ ಅನ್ನು ಸಿಬಿಐ ಗೆ ವರ್ಗಾವಣೆ ಮಾಡಿ, ಸಿಬಿಐ ತನಿಖೆ ಮಾಡಲು ಶುರು ಮಾಡಿತ್ತು. ಇದೀಗ ಒಂದು ತಿಂಗಳ ಸಮಯದ ನಂತರ ಪ್ರಾಥಮಿಕ ತನಿಖೆಯಲ್ಲಿ (Odisha Train Case) ಈ ವಿಚಾರಗಳು ಬಯಲಾಗಿ, ಮೂವರು ಅಧಿಕಾರಿಗಳನ್ನು ಬಂಧಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಯಾವ ವಿಷಯಗಳು ಬಯಲಾಗುತ್ತದೆ ಎಂದು ಕಾದು ನೋಡಬೇಕಿದೆ.. ಇದನ್ನು ಓದಿ..ATM: ನೀವು ATM ನಿಂದ ಹಣ ಪಡೆಯುವಾಗ ಹಣ ಬಾರದೆ ಇದ್ದರೇ, ನಿಮ್ಮ ಹಣ ಮಾತ್ರ ಅಲ್ಲ. ಪರಿಹಾರ ಕೂಡ ಪಡೆಯಬಹುದು. ಹೇಗೆ ಗೊತ್ತೆ?

Comments are closed.