Savings Scheme:ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಣ ಕೂಡಿಡಬೇಕು ಎಂದರೆ, ಈ ಐದು ಯೋಜನೆಗಳೇ ಬೆಸ್ಟ್. ಬಡವರೇ, ಮಧ್ಯಮ ವರ್ಗದವರೇ ನೋಡಿ ಬಳಸಿಕೊಳ್ಳಿ.
Savings Scheme: ಈಗಿನ ಕಾಲದಲ್ಲಿ ನಾವು ಈಗಿನಿಂದಲೇ ನಮ್ಮ ಭವಿಷ್ಯವನ್ನು ಉತ್ತಮಗೊಳಿಸಲು ಹಣ ಹೂಡಿಕೆ ಮಾಡುವುದನ್ನು ಶುರು ಮಾಡುವುದು ಒಳ್ಳೆಯದು. ಈಗಿನಿಂದ ಹೂಡಿಕೆ ಮಾಡುತ್ತಾ ಬಂದರೆ ಮುಂದಿನ ದಿನಗಳಲ್ಲಿ ನೆಮ್ಮದಿಯ ಜೀವನ ಕಳೆಯಬಹುದು. ನಾವು ನಮ್ಮ ಭವಿಷ್ಯದ ಬಗ್ಗೆ ಮಾತ್ರವಲ್ಲ, ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕೂಡ ಚಿಂತೆ ಮಾಡಿರುತ್ತೇವೆ. ಮಕ್ಕಳ ಭವಿಷ್ಯವನ್ನು ಉತ್ತಮವಾಗಿಸಲು ಕೆಲವು ಸೇವಿಂಗ್ಸ್ ಸ್ಕೀಮ್ ಗಳಿವೆ. ಅವುಗಳ ಮೂಲಕ ಹಣ ಉಳಿಸಿದರೆ ನಿಮ್ಮ ಮಕ್ಕಳ ಬಗ್ಗೆ ಚಿಂತೆ ಮಾಡುವ ಅವಶ್ಯಕತೆಯೇ ಇಲ್ಲ. ಆ ಸ್ಕೀಮ್ ಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
1.ಸುಕನ್ಯಾ ಸಮೃದ್ಧಿ ಯೋಜನೆ :- ಇದು ವಿಶೇಷವಾಗಿ ಹೆಣ್ಣುಮಕ್ಕಳ ತಂದೆ ತಾಯಿಗಾಗಿ ಇರುವ ಯೋಜನೆ ಆಗಿದೆ. ಹೆಣ್ಣುಮಕ್ಕಳ ಭವಿಷ್ಯ ಉತ್ತಮವಾಗಿಸಲು ಈ ಯೋಜನೆಯನ್ನು ಶುರು ಮಾಡಬಹುದು. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ವಾರ್ಷಿಕವಾಗಿ ಮಿನಿಮಮ್ ₹1000 ಮ್ಯಾಕ್ಸಿಮಮ್ ₹1,50,000 ರೂಪಾಯಿ ಹೂಡಿಕೆ ಮಾಡಬಹುದು. ಇದು ಸರ್ಕಾರದ ಯೋಜನೆ ಆಗಿದ್ದು ನೀವು ಹೂಡಿಕೆ ಮಾಡುವ ಹಣ ಸುರಕ್ಷಿತವಾಗಿ ಇರುತ್ತದೆ. ಹೆಣ್ಣುಮಗುವಿಗೆ 10 ವರ್ಷ ಆದಾಗಿನಿಂದ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ ಶುರು ಮಾಡಬಹುದು. ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಎರಡು ಕಡೆ ಈ ಯೋಜನೆಯ ಖಾತೆ ತೆರೆಯಬಹುದು.
2.ಸವರನ್ ಗೋಲ್ಡ್ ಬಾಂಡ್ :- ಚಿನ್ನದ ಖರೀದಿ ಒಂದು ರೀತಿ ಅದನ್ನು ಧರಿಸಿ ಸಂತೋಷ ಪಡುವುದರ ಜೊತೆಗೆ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುತ್ತದೆ ಎನ್ನುವುದು ಕೂಡ ಆಗಿದೆ. ಕಷ್ಟ ಎದುರಾದಾಗ ಹಣ ಸಿಗದೆ ಹೋದರೆ ಕೊನೆಯ ಆಯ್ಕೆ ಚಿನ್ನ ಗಿರವಿ ಇಡುವುದು ಆಗಿರುತ್ತದೆ. ಹಾಗಾಗಿ ನೀವು ನೇರವಾಗಿ ಚಿನ್ನ ಖರೀದಿ ಮಾಡಿ ಅದನ್ನು ಸುರಕ್ಷಿತವಾಗಿ ಇಡಲು ಕಷ್ಟಪಡುವ ಬದಲು ಇ ಗೋಲ್ಡ್ ನಲ್ಲಿ ಹೂಡಿಕೆ ಮಾಡಬಹುದು ಎನ್ನುವುದು ತಜ್ಞರ ಅಭಿಪ್ರಾಯ. ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಇದು ಮತ್ತೊಂದು ಒಳ್ಳೆಯ ಆಯ್ಕೆ ಆಗಿದೆ. ಇದನ್ನು ಓದಿ..Business Idea: ನಿಮ್ಮ ಮನೆಯಲ್ಲಿ ಸ್ಮಾರ್ಟ್ ಫೋನ್ ಇದ್ದರೇ, ಮನೆಯಲ್ಲಿ ಇದ್ದುಕೊಂಡೇ ತಿಂಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುವುದು ಹೇಗೆ ಗೊತ್ತೇ?? ಬೆಸ್ಟ್ ಅಂದ್ರೆ ಇದೆ ನೋಡಿ.
3.ರಿಕರಿಂಗ್ ಡೆಪಾಸಿಟ್ ಹಾಗೂ ಫಿಕ್ಸ್ಡ್ ಡೆಪಾಸಿಟ್ :- ಮಕ್ಕಳಿಗಾಗಿ ಹೂಡಿಕೆ ಮಾಡಲು ಆರ್.ಡಿ ಮತ್ತು ಎಫ್.ಡಿ ಕೂಡ ಒಳ್ಳೆಯ ಆಯ್ಕೆ ಆಗಿದೆ. ಬೇರೆ ಹೂಡಿಕೆಗಳ ಹಾಗೆ ಇದರಲ್ಲಿ ರಿಟರ್ನ್ಸ್ ಪಡೆಯುವುದು ಕಷ್ಟ ಎಂದು ಅನ್ನಿಸಬಹುದು. ಆದರೆ ಹಣದ ವಿಷಯದಲ್ಲಿ ಸುರಕ್ಷತೆ ಎಂದು ಬಂದರೆ, ಇದು ಅತ್ಯುತ್ತಮವಾದ ಆಯ್ಕೆ ಆಗಿದೆ. ಮಕ್ಕಳಿಗಾಗಿ ಮಾಡಬಹುದಾದ ಒಳ್ಳೆಯ ಹೂಡಿಕೆ ಇದು.
4.ಪಿಪಿಎಫ್ :- ಮಕ್ಕಳಿಗೋಸ್ಕರ ಹೂಡಿಕೆ ಮಾಡಲು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಸಹ ಉತ್ತಮ ಆಯ್ಕೆಗಳಲ್ಲಿ ಒಂದು. ಈ ಯೋಜನೆಯಲ್ಲಿ ನಿಮಗೆ 15 ವರ್ಷಗಳ ಲಾಕ್ ಇನ್ ಅವಧಿ ಸಿಗುತ್ತದೆ. ಹೀಗಿದ್ದಾಗ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣವನ್ನು ಬೇರೆ ಖರ್ಚಿಗೆ ಉಪಯೋಗಿಸಲು ಆಗುವುದಿಲ್ಲ..ಇದು ಮಕ್ಕಳ ಭವಿಷ್ಯಕ್ಕಾಗಿ ಆಗುತ್ತದೆ. ಇದರಲ್ಲಿ ಒಳ್ಳೆಯ ರಿಟರ್ನ್ಸ್ ಬರಬೇಕು ಎಂದರೆ, ವರ್ಷಕ್ಕೆ ಮಿನಿಮಮ್ 1 ಲಕ್ಷ ಆದರೂ ಹೂಡಿಕೆ ಮಾಡಬೇಕಾಗುತ್ತದೆ. ಇದನ್ನು ಓದಿ..Luna Bike: ಮತ್ತೆ ಬರುತ್ತಿದೆ ಲೂನಾ ಬೈಕ್- ಆದರೆ ಈ ಬಾರಿ ವೇಗ ಜಾಸ್ತಿ, ಬೆಲೆ ಕಡಿಮೆ, ವಿಶೇಷತೆ ಮಾತ್ರ ಜಾಸ್ತಿ- ಏನೆಲ್ಲಾ ಇರಲಿದೆ ಗೊತ್ತೇ?
5.ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ :- ಮಕ್ಕಳಿಗಾಗಿ ಹಣ ಉಳಿತಾಯ ಮಾಡಲು ಮತ್ತೊಂದು ಒಳ್ಳೆಯ ಆಯ್ಕೆ ಇದು. ಕಡಿಮೆ ಆದಾಯ ಇರುವವರು ಕೂಡ ಹೂಡಿಕೆ ಮಾಡಬಹುದಾದ ಒಳ್ಳೆಯ ಯೋಜನೆ ಇದಾಗಿದೆ. ಈ ಯೋಜನೆಯಲ್ಲಿ ಒಳ್ಳೆಯ ರಿಟರ್ನ್ಸ್ ಬರುವುದರ ಜೊತೆಗೆ ತೆರಿಗೆ ಕಾಯ್ದೆಯ ಸೆಕ್ಷನ್ ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ.
Comments are closed.