Cricket News: ಮುದ್ದಾದ ಹುಡುಗಿ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡ ವೆಂಕಟೇಶ್ ಅಯ್ಯರ್.
Cricket News: ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ(Indian cricket team) ಇತ್ತೀಚಿಗಷ್ಟೇ ನಡೆದಿರುವಂತಹ ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ಸೋಲುವ ಮೂಲಕ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಮನಸ್ಸಿಗೆ ದುಃಖವನ್ನು ನೀಡಿದೆ. ಆದರೆ ಅದಕ್ಕಿಂತ ಹೆಚ್ಚಾಗಿ ಹೆಮ್ಮೆ ಪಡುವಂತಹ ಗೆಲುವಿನ ಕ್ಷಣಗಳನ್ನು ಕೂಡ ಈ ವಿಶ್ವ ಕಪ್ ಟೂರ್ನಮೆಂಟ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ನೀಡಿದೆ ಎಂದರೆ ತಪ್ಪಾಗಲಾರದು. ಇದರ ನಡುವೆ ಭಾರತೀಯ ಕ್ರಿಕೆಟ್ ತಂಡದ ಒಬ್ಬ ಸ್ಟಾರ್ ಆಟಗಾರರ ವೈಯಕ್ತಿಕ ಜೀವನದ ಮಾಹಿತಿ ಹೊರಬಂದಿದೆ.
Team India Young Player Venkatesh Iyer Got engaged.
ಹೌದು ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಈಗ ಸೈಲೆಂಟ್ ಆಗಿಯೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹಸೆಮಣೆ ಏರೋದಕ್ಕೆ ಸಜ್ಜಾಗಿ ನಿಂತಿರುವಂತಹ ಈ ಕ್ರಿಕೆಟಿಗ ಮತ್ತಿನ್ಯಾರು ಅಲ್ಲ ವೆಂಕಟೇಶ್ ಅಯ್ಯರ್(Venkatesh Iyer). ಭಾರತೀಯ ಕ್ರಿಕೆಟ್ ತಂಡ ಹಾಗೂ ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಟ ಆಡಿರುವಂತಹ ಅನುಭವವನ್ನು ಹೊಂದಿರುವಂತಹ ವೆಂಕಿ ಈಗ ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಅನ್ನು ಪ್ರಾರಂಭಿಸುವುದಕ್ಕೆ ಸಜ್ಜಾಗಿ ನಿಂತಿದ್ದಾರೆ ಎಂದು ಹೇಳಬಹುದಾಗಿದೆ.
ಟೀಮ್ ಇಂಡಿಯಾದ ಈ ಆಲ್ರೌಂಡರ್ ಆಟಗಾರ ಇತ್ತೀಚಿಗಷ್ಟೇ ನಡೆದಿರುವಂತಹ ಫ್ಯಾಮಿಲಿ ಫಂಕ್ಷನ್ ನಲ್ಲಿ ಶೃತಿ ರಘುನಾಥನ್ ಎನ್ನುವಂತಹ ಹುಡುಗಿಯ ಜೊತೆಗೆ ನಿಶ್ಚಿತಾರ್ಥವನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬದ ಆತ್ಮೀಯರು ಹಾಗೂ ಕುಟುಂಬಸ್ಥರು ಮಾತ್ರ ಹಾಜರಿದ್ದರು ಎಂಬುದಾಗಿ ತಿಳಿದುಬಂದಿದೆ. ವೆಂಕಟೇಶ್ ಅಯ್ಯರ್ ಅವರ ನಿಶ್ಚಿತಾರ್ಥದ ಸುದ್ದಿಯನ್ನು ತಿಳಿದು, ಶ್ರೇಯಸ್ ಅಯ್ಯರ್ ಹಾಗೂ ಮನದೀಪ್ ಸಿಂಗ್ ಸೇರಿದಂತೆ ಸಾಕಷ್ಟು ಕ್ರಿಕೆಟಿಗರು ಅಭಿನಂದನೆ ಮಾಡಿರುವುದು ಕೂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿದು ಬಂದಿದೆ.
ಖುದ್ದಾಗಿ ವೆಂಕಟೇಶ್ ಅಯ್ಯರ್ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನಿಶ್ಚಿತಾರ್ಥದ ಬಗ್ಗೆ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಜೀವನದ ಸಂತೋಷದ ಕ್ಷಣಗಳನ್ನು ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಈಗಾಗಲೇ ಭಾರತಕ್ಕಾಗಿ ವೆಂಕಟೇಶ್ ಅಯ್ಯರ್ ಅವರು ಎರಡು ಏಕದಿನ ಪಂದ್ಯಗಳನ್ನು ಹಾಗೂ 9 ಟಿ 20 ಇಂಟರ್ನ್ಯಾಷನಲ್ ಪಂದ್ಯಗಳನ್ನು ಆಡಿದ್ದಾರೆ ಎಂಬುದಾಗಿ ಕೂಡ ನೀವು ಇಲ್ಲಿ ಸ್ಮರಿಸಿಕೊಳ್ಳಬಹುದು. ಪ್ರಮುಖವಾಗಿ ಐಪಿಎಲ್ ನಲ್ಲಿ ಕೊಲ್ಕತ್ತಾದ ಪರವಾಗಿ ವೆಂಕಟೇಶ್ ಅಯ್ಯರ್ ರವರು 36 ಪಂದ್ಯಗಳಲ್ಲಿ 956 ರನ್ನುಗಳನ್ನು ಬಾರಿಸಿರುವಂತಹ ಸಾಧನೆಯನ್ನು ಮಾಡಿದ್ದಾರೆ ಎನ್ನುವುದನ್ನು ಕೂಡ ನಾವು ಮರೆಯುವ ಹಾಗಿಲ್ಲ.
ಇದನ್ನು ಕೂಡ ಓದಿ: CIBIL Score: ಸಿಬಿಲ್ ಇಲ್ಲ ಅಂತ ಲೋನ್ ಕೊಡುತ್ತಿಲ್ಲವೇ- ಸಿಬಿಲ್ ಜಾಸ್ತಿ ಮಾಡಬೇಕು ಎಂದರೆ ಈ ಟಿಪ್ಸ್ ಫಾಲೋ ಮಾಡಿ
ಇನ್ನು ವೆಂಕಟೇಶ್ ಅಯ್ಯರ್ ಅವರು ನಿಶ್ಚಿತಾರ್ಥ ಮಾಡಿಕೊಂಡು ಮದುವೆ ಮಾಡಿಕೊಳ್ಳಲು ಹೊರಟಿರುವಂತಹ ಹುಡುಗಿ ಆಗಿರುವ ಶೃತಿ ರಘುನಾಥನ್ ರವರು ವೃತ್ತಿ ಪರವಾಗಿ ನೋಡೋದಾದ್ರೆ ಫ್ಯಾಶನ್ ಡಿಸೈನರ್ ಹಾಗೂ ಸಿಂಗರ್ ಎಂಬುದಾಗಿ ತಿಳಿದು ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಇವರು ಹಂಚಿಕೊಂಡಿರುವಂತಹ ನಿಶ್ಚಿತಾರ್ಥದ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
Comments are closed.