Dk Suresh: ಅಣ್ಣನಿಗೆ ಮುಖ್ಯಮಂತ್ರಿ ಸ್ಥಾನ ಸಿಗದೇ ಇದ್ದಿದ್ದಕ್ಕೆ ಸುರೇಶ್ ರವರಿಗೆ ಬೇಸರ?? ಗಟ್ಟಿ ನಿರ್ಧಾರ ತೆಗೆದುಕೊಳ್ತಾರಾ?? ಕಣ್ಣೀರು ಹಾಕಿದ ಫ್ಯಾನ್ಸ್.
Dk Suresh: ಬೆಂಗಳೂರು (Bengaluru) ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣೆ (Loksabha Election) ಇನ್ನೇನು ಕೆಲವೇ ತಿಂಗಳುಗಳಲ್ಲಿ ನಡೆಯಲಿದೆ. ಈ ಬಾರಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಲೋಲಸಭಾ ಚುನಾವಣೆಯಲ್ಲಿ ರಾಜ್ಯದ ಒಟ್ಟು 28 ಕ್ಷೇತ್ರಗಳಲ್ಲಿ 20 ಕ್ಷೇತ್ರಗಳಲ್ಲಿ ಆದರೂ ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ. ಆದರೆ ಈಗ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಸಹೋದರ ಡಿಕೆ ಸುರೇಶ್ (DK Suresh) ಅವರು ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದು ಅನುಮಾನ ಎಂದು ಹೇಳಿಕೆ ನೀಡಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 28 ಕ್ಷೇತ್ರಗಳಲ್ಲಿ ಗೆದ್ದಿದ್ದು ಒಂದೇ ಒಂದು ಕ್ಷೇತ್ರದಲ್ಲಿ ಮಾತ್ರ, ಅಂದು ಗೆದ್ದದ್ದು ಡಿಕೆ ಸುರೇಶ್ ಅವರು. ಹಿಂದಿನ 10 ವರ್ಷಗಳಿಂದ ಡಿಕೆ ಸುರೇಶ್ ಅವರೇ ಸಂಸದರಾಗಿದ್ದಾರೆ. 2013ರಲ್ಲಿ ಕುಮಾರಸ್ವಾಮಿ (Kumaraswamy) ಅವರು ಸಂಸದರ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ನಂತರ ಉಪಚುನಾವಣೆಯಲ್ಲಿ ಡಿಕೆ ಸುರೇಶ್ ಅವರು ಭಾಗವಹಿಸಿ ಗೆದ್ದಿದ್ದರು. ಬಳಿಕ ಮುಂದಿನ ಚುನಾವಣೆಯಲ್ಲಿ ಅವರೇ ಆಯ್ಕೆಯಾಗಿದ್ದರು. ಇದನ್ನು ಓದಿ..Pradeep Eshwar: ಬ್ರೇಕ್ ಇಲ್ಲದೆ ಲಾರಿಯಂತೆ ಮುನ್ನುಗ್ಗುತ್ತಿರುವ ಈಶ್ವರ್- ಚಿಕ್ಕ ಬಳ್ಳಾಪುರಕ್ಕೆ ಮಾತ್ರ ಮತ್ತೊಂದು 6 ನೇ ಗ್ಯಾರಂಟಿ. ಈ ಬಾರಿ ಏನಂತೆ ಗೊತ್ತೇ? ತಿಳಿದರೇ…
ಆದರೆ ಈಗ ಡಿಕೆ ಸುರೇಶ್ ಅವರು ರಾಜಕೀಯ ರಂಗದ ಬಗ್ಗೆ ಬೇರೆಯದೇ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮದ ಜೊತೆಗೆ ಮಾತನಾಡಿರುವ ಡಿಕೆ ಸುರೇಶ್ ಅವರು, “ಇನ್ನು 6 ತಿಂಗಳುಗಳಲ್ಲಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಎಲೆಕ್ಷನ್ ಬರುತ್ತದೆ. ಈಗ ನಮ್ಮ ಹತ್ತಿರ ಜಾಸ್ತಿ ಟೈಮ್ ಇಲ್ಲ, ಬಹಳ ಬೇಗ ಎಲೆಕ್ಷನ್ ಗೆ ತಯಾರಿ ಶುರು ಮಾಡಿಕೊಳ್ಳಬೇಕು. ಈ ಸಮಯದಲ್ಲಿ ಕೆಲವರು ಮುಂದಿನ ಎಲೆಕ್ಷನ್ ನಲ್ಲಿ ನಾನು ಸ್ಪರ್ಧಿಸುವ ಬಗ್ಗೆ ಮಾತನಾಡುತ್ತಿದ್ದಾರೆ.
ನಾನು ಸ್ಪರ್ಧಿಸುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ, ನಾನು ಸ್ಪರ್ಧೆ ಮಾಡುತ್ತೀನಾ ಇಲ್ಲವಾ ಅನ್ನೋದು ನನಗೆ ಗೊತ್ತಿಲ್ಲ. ನಾನು ಇನ್ನು ಗೊಂದಲದಲ್ಲಿದ್ದೇನೆ, ನನಗೆ ಈ ರಾಜಕೀಯ ಸಾಕು ಅನ್ನಿಸಿದೆ..” ಎಂದು ಡಿಕೆ ಸುರೇಶ್ ಅವರು ಹೇಳಿದ್ದು, ಈ ಮಾತಿಗೆ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಇಷ್ಟು ಬೇಗ ಇಂಥ ನಿರ್ಧಾರ ತೆಗೆದುಕೊಳ್ಳಬೇಡಿ, ಇದರ ಬಗ್ಗೆ ಈಗಲೇ ಸ್ಪಷ್ಟನೆ ಕೊಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದನ್ನು ಓದಿ..Dk Shivakumar: ಅಯ್ಯೋ ಗ್ಯಾರಂಟಿ ಗಳಿಗೆ ಷರತ್ತು ಯಾಕೆ ಎಂದಿದ್ದಕ್ಕೆ ಡಿಕೆಶಿ ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ? ಶಾಕ್ ಆದ ಜನತೆ. ಕಾರಣ ಏನಂತೆ ಗೊತ್ತೆ?
Comments are closed.