Free Bus: ಇದಪ್ಪ ಟ್ವಿಸ್ಟ್ ಅಂದ್ರೆ – ಉಚಿತ ಬಸ್ ಪಾಸ್ ಗೆ ಬೇಕು ಶಕ್ತಿ ಕಾರ್ಡ್- ಅದನ್ನು ಎಲ್ಲಿ ಪಡೆಯುವುದು ಗೊತ್ತೇ?? ಮಹಿಳೆಯರಿಗೆ ನಿರಾಸೆ.
Free Bus: ಕಾಂಗ್ರೆಸ್ (Congress) ಸರ್ಕಾರ ಮೊದಲ ಸಂಪುಟ ಸಭೆಯಲ್ಲಿ ತಾವು ಚುನಾವಣೆಗಿಂತ ಮೊದಲು ಭರವಸೆ ನೀಡಿದ್ದ ಎಲ್ಲಾ ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಮಾಹಿತಿ ನೀಡಿದೆ. ಇದರಲ್ಲಿ ಒಂದಾದ ಶಕ್ತಿ ಯೋಜನೆ ಜೂನ್ 11ರಿಂದ ಜಾರಿಗೆ ಬರಲಿದೆ. ಇದು ರಾಜ್ಯದ ಎಲ್ಲಾ ಮಹಿಳೆಯರು ರಾಜ್ಯಾದ್ಯಂತ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾದ ಯೋಜನೆ ಆಗಿದೆ. ಈ ಯೋಜೆನೆಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳನ್ನು ಸೋಮವಾರ ಬಿಡುಗಡೆ ಮಾಡಿದೆ.

ಕಾಂಗ್ರೆಸ್ ಸರ್ಕಾರ ನೀಡಿರುವ ಮಾಹಿತಿಯ ಅನುಸಾರ ಜೂನ್ 11ರಿಂದ ಶಕ್ತಿ (Shakti) ಯೋಜನೆ ಜಾರಿಗೆ ಬರುತ್ತದೆ. ಹಾಗೆಯೇ ಈ ಯೋಜನೆಯ ಸೌಲಭ್ಯ ಪಡೆಯಲು ನೀವು ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಬೇಕಾಗುತ್ತದೆ. ಜೂನ್ 11ರಿಂದ ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು, Sevesinhu.karnataka.gov.in ಈ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮೂರು ತಿಂಗಳ ಸಮಯ ಇರುತ್ತದೆ. ಇದನ್ನು ಓದಿ..Savings: ವರ್ಷಕ್ಕೆ ಒಮ್ಮೆ ದುಡ್ಡು ಕಟ್ಟಿ, ಅಧಿಕ ಲಾಭ ಪಡೆಯಲು SBI ಅಥವಾ LIC ಯಾವುದು ಬೆಸ್ಟ್ ಗೊತ್ತೇ? ಆರ್ಥಿಕ ತಜ್ಞರು ಹೇಳುವುದೇನು ಗೊತ್ತೇ?
ಬಳಿಕ ಸರ್ಕಾರದ ಕಡೆಯಿಂದ ಶಕ್ತಿ ಸ್ಮಾರ್ಟ್ ಕಾರ್ಡ್ ಲಭಿಸುತ್ತದೆ. ಈ ಶಕ್ತಿ ಸ್ಮಾರ್ಟ್ ಕಾರ್ಡ್ ಬರುವವರೆಗು ನಿಮ್ಮ ಅಡ್ರೆಸ್ ಪ್ರೂಫ್ ಇರುವ ಆಧಾರ್ ಕಾರ್ಡ್ ಅಥವಾ ರಾಜ್ಯ ಸರ್ಕಾರದಿಂದ ಅಥವಾ ಕೇಂದ್ರ ಸರ್ಕಾರದಿಂದ ಸಿಕ್ಕಿರುವ ಐಡೆಂಟಿಟಿ ಪ್ರೂಫ್ ಅನ್ನು ಕಂಡಕ್ಟರ್ ಗೆ ತೋರಿಸಿ ಉಚಿತ ಪ್ರಯಾಣ ಮಾಡಬಹುದು. ವಿದ್ಯಾರ್ಥಿಗಳಿಂದ ಎಲ್ಲಾ ಹೆಣ್ಣುಮಕ್ಕಳು ಕೂಡ ಉಚಿತ ಪ್ರಯಾಣ ಮಾಡಬಹುದು. ಇನ್ನು ರಾಜ್ಯದಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾದ ಬಸ್ ಗಳ ಪಟ್ಟಿ ಹೀಗಿದೆ..
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ (NWRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಗಳಲ್ಲಿ ಪ್ರಯಾಣ ಮಾಡಬಹುದು. ಇನ್ನು ಹೊರರಾಜ್ಯಕ್ಕೆ ಹೋಗುವ ಐಷಾರಾಮಿ ಬಸ್ ಗಳು, ಎಸಿ ಮತ್ತು ನಾನ್ ಎಸಿ ಬಸ್ ಗಳು, ವಾಯು ವಜ್ರ, ಅಂಬಾರಿ, ಐರಾವತ, ಫ್ಲೈಬಸ್, ಇವಿ ಪವರ್ ಪ್ಲಸ್ (ಎಸಿ) ಬಸ್ ಗಳಲ್ಲಿ ಪ್ರಯಾಣ ಮಾಡುವ ಹಾಗಿಲ್ಲ. ಇದನ್ನು ಓದಿ..Karnataka BJP: ಕರ್ನಾಟಕದಲ್ಲಿ BJP ಹೀನಾಯ ಸೋಲಿಗೆ ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದ ಮೊದಲ ನಾಯಕ. ಈ ಕುರಿತು ಹೇಳಿದ್ದೇನು ಗೊತ್ತೇ??
Comments are closed, but trackbacks and pingbacks are open.