Google Pixel Fold: ಸ್ಯಾಮ್ ಸಂಗ್ ಫೋನ್ ಗೆ ತಡೆಹಾಕಲು ಮಡಚುವ ಫೋನ್ ಬಿಡುಗಡೆ ಮಾಡುತ್ತಿರುವ ಗೂಗಲ್: ಹೇಗಿದೆ ಗೊತ್ತೇ ಫೋನ್ ಗಳು. ಒಂದೊಂದು ಮಾಣಿಕ್ಯ.
Google Pixel Fold: ಈಗ ಸ್ಯಾಮ್ ಸಂಗ್ ಸಂಸ್ಥೆ ಗ್ರಾಹಕರನ್ನು ಆಕರ್ಷಿಸಲು ಅನೇಕ ಮಾದರಿಯ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ತರುತ್ತಿದೆ ಎನ್ನುವ ವಿಷಯ ಗೊತ್ತೇ ಇದೆ.. ಇದೀಗ ಇವರಿಗೆ ಕಾಂಪಿಟೇಶನ್ ನೀಡಲು ಗೂಗಲ್ ಕೂಡ ಮಡಚುವ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುತ್ತಿದೆ. ಅವುಗಳು ಹೇಗಿವೆ ಎಂದು ತಿಳಿಸುತ್ತೇವೆ ನೋಡಿ. ಸೋಷಿಯಲ್ ಮೀಡಿಯಾದ ಪೋಸ್ಟ್ ಗಳ ಮೂಲಕ ಗೂಗಲ್ ಮಾಹಿತಿ ಬಿಟ್ಟುಕೊಟ್ಟಿದ್ದು ಪೋಲ್ಡ್ ಮಾಡಬಹುದಾದಂಥ ಫೋನ್ ಗಳನ್ನು ಮೇ10ರಂದು ಬಿಡುಗಡೆ ಮಾಡಬಹುದು.
ಎಂದು ಮಾಹಿತಿ ನೀಡಿದೆ. ಮೇ 10, ಗೂಗಲ್ ಸಂಸ್ಥೆಯ ವಾರ್ಷಿಕ I/O ಡೆವೆಲಪರ್ ಸಮ್ಮೇಳನದ ಮೊದಲ ದಿನ ಆಗಿರುತ್ತದೆ. ಇಲ್ಲಿ ಪಿಕ್ಸೆಲ್ ಫೋಲ್ಡ್ ಹಾಗೂ ಗೂಗಲ್ ಪಿಕ್ಸೆಲ್ 7ಎ ಹಾಗೂ ಪಿಕ್ಸೆಲ್ ಟ್ಯಾಬ್ಲೆಟ್ ಮಾಡೆಲ್ ಗಳನ್ನು ಸಹ ಪರಿಚಯಿಸಲಾಗುತ್ತಿದೆ. ಗೂಗಲ್ ಈಗ ತಮ್ಮ ಪ್ರಾಡಕ್ಟ್ ಗಳ ಟೀಸರ್ ಬಿಡುಗಡೆ ಮಾಡಿದ್ದು, ಬೇರೆ ಟೀಸರ್ ಗಿಂತ ಅದು ಭಿನ್ನವಾಗಿದೆ. ಪಿಕ್ಸೆಲ್ ಫೋಲ್ಡ್ ಫೋನ್ ಹೇಗಿದೆ ಎಂದು ಟೀಸರ್ ನಲ್ಲಿ ನೋಡಬಹುದು.
ಫೋನ್ ನ ಹಿಂಭಾಗದಲ್ಲಿ LED ಫ್ಲ್ಯಾಶ್ ಹಾಗೂ ಮೂರು ಕ್ಯಾಮೆರಾಗಳು ಸಹ ಇದೆ. ಸ್ವಲ್ಪ ಕೂಡ ಗ್ಯಾಪ್ ಇಲ್ಲದೆ ಫೋನ್ ಫೋಲ್ಡ್ ಆಗುವುದನ್ನು ನಾವು ಟೀಸರ್ ನಲ್ಲಿ ನೋಡಬಹುದು.. ಜೊತೆಗೆ ಒಳಗೆ ಹಾಗೂ ಸಾಫ್ಟ್ವೇರ್ ಡಿಸೈನ್ ಹೇಗಿದೆ ಎನ್ನುವುದನ್ನು ಕೂಡ ಈ ಟೀಸರ್ ನಲ್ಲಿ ತೋರಿಸಲಾಗಿದೆ. ಈ ಫೋನ್ ನಲ್ಲಿ ಬಹಳ ದಪ್ಪ ಇರುವ ಬಿಜೆಲ್ ಗಳನ್ನು ಸಹ ಇರುವುದನ್ನು ನಾವು ಗಮನಿಸಬಹುದು.
ಈ ಫೋನ್ ನ ಸಾಫ್ಟ್ವೇರ್ ಬಗ್ಗೆ ಹೇಳುವುದಾದರೆ, ಆಂಡ್ರಾಯ್ಡ್ 13 ಹೋಮ್ ಸ್ಕ್ರೀನ್ ಕಾಣಬಹುದು. ಇದೀಗ ತಮ್ಮ ಮೊದಲ ಫೋಲ್ಡಬಲ್ ಫೋನ್ ನಲ್ಲಿ ಗೂಗಲ್ ಯಾವ ರೀತಿಯ ಸಾಫ್ಟ್ವೇರ್ ಆಪ್ಟಿಮೈಸೆಷನ್ ಮಾಡಿದೆ ಎನ್ನುವುದು ಕುತೂಹಲಕಾರಿಯಾಗಿದೆ. ಇತ್ತೀಚೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಈ ಫೋನ್ ನಲ್ಲಿ ಟೆನ್ಸರ್ ಜಿ2 ಪ್ರೊಸೆಸರ್ ಇರಲಿದೆ ಎನ್ನಲಾಗಿದೆ. Pixel7 ಮತ್ತು Pixel7 pro ನಲ್ಲಿ ಕೂಡ ಇದೇ ಪ್ರೊಸೆಸರ್ ಇರಲಿದೆ.. ಹಾಗೆಯೇ 7 ಇಂಚ್ ಡಿಸ್ಪ್ಲೇ ಸಹ ಇರಬಹುದು.
Comments are closed.