Gruha Lakshmi Scheme: ಗ್ರಹಲಕ್ಷ್ಮಿ ಯೋಜನೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್- ಈ ಯೋಜನೆಯಲ್ಲಿ ನಿಜಕ್ಕೂ 2000 ರೂಪಾಯಿ ಯಾವಾಗ ಬರುತ್ತೆ ಅಂತೇ ಗೊತ್ತೇ?

Gruha lakshmi scheme latest updates

Gruha Lakshmi Scheme: ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಾಂಗ್ರೆಸ್ ಸರ್ಕಾರದ ಅತ್ಯಂತ ಜನಪ್ರಿಯ ಹಾಗೂ ಪ್ರಮುಖ ಯೋಜನೆ ಆಗಿರುವಂತಹ ಗೃಹಲಕ್ಷ್ಮಿ ಯೋಜನೆ(Gruha Lakshmi Scheme) ಬಿಡುಗಡೆ ಆಗುವುದಕ್ಕಿಂತ ಮುಂಚೆಯಿಂದಲೂ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವಂತಹ ಯೋಜನೆಯಾಗಿದೆ. ಈ 5 ಪ್ರಮುಖ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಕೂಡ ನಾವು ಸಂಪೂರ್ಣವಾಗಿ ಜನರಿಗೆ ತಲುಪಿಸುವಂತಹ ಕೆಲಸವನ್ನು ಮಾಡಿಯೇ ಮಾಡುತ್ತೇವೆ ಎಂಬುದಾಗಿ ಕಾಂಗ್ರೆಸ್ ಸರ್ಕಾರ(Congress Government) ಈಗಾಗಲೇ ರಾಜ್ಯದ ಬಹುತೇಕ ಎಲ್ಲಾ ಕಡೆಗಳಲ್ಲಿ ಕೂಡ ಎಲ್ಲಾ ಯೋಜನೆಗಳನ್ನು ಸರಿಯಾದ ಸಮಯಕ್ಕೆ ತಕ್ಕಂತೆ ಜಾರಿಗೆ ತರುವ ಕೆಲಸವನ್ನು ಮಾಡುತ್ತಿದೆ.

ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ಹಣವನ್ನು ನೀಡುವಂತಹ ಯೋಜನೆ ಗೃಹಲಕ್ಷ್ಮಿ ಯೋಜನೆ ಆಗಿದ್ದು ಇದಕ್ಕಾಗಿ ಈಗಾಗಲೇ ಅರ್ಜಿಯನ್ನು ಸಲ್ಲಿಸುವಂತಹ ಪ್ರಕ್ರಿಯೆ ಕೂಡ ರಾಜ್ಯದಲ್ಲಿ ಎಲ್ಲಾ ಮೂಲೆಗಳಲ್ಲಿ ಕೂಡ ಪ್ರಾರಂಭವಾಗಿದೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣ ಯಾವಾಗ ಕೈ ಸೇರುತ್ತೆ ಅನ್ನೋದರ ಬಗ್ಗೆ ಸಾಕಷ್ಟು ಗೊಂದಲಗಳು ಕೂಡ ಇದ್ದು ಇದರ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಆಗಿರುವಂತಹ ಸಿದ್ದರಾಮಯ್ಯ(Siddharamaiah) ಅವರು ಯಾವ ಹೇಳಿಕೆಯನ್ನು ನೀಡಿದ್ದಾರೆ ಎಂಬುದನ್ನು ಕೂಡ ತಿಳಿಯೋಣ ಬನ್ನಿ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವ ಪ್ರಕಾರ ಆಗಸ್ಟ್ 30ರಂದು ಅಧಿಕೃತವಾಗಿ ಗೃಹಲಕ್ಷ್ಮಿ ಯೋಜನೆಯನ್ನು ಲೋಕಾರ್ಪಣೆಯನ್ನು ಮಾಡಲಾಗುತ್ತಿದ್ದು ಇದಕ್ಕಾಗಿ ಕಾರ್ಯಕ್ರಮವನ್ನು ಕೂಡ ಸಿದ್ಧಪಡಿಸಿಕೊಳ್ಳಲಾಗಿದೆ. ಇಲ್ಲಿ ಎರಡು ಮಾತುಗಳು ನಡೆಯುತ್ತಿದ್ದು ಮೊದಲು ಕೇವಲ ನಾಲ್ಕು ಜಿಲ್ಲೆಗಳಿಗೆ ಮಾತ್ರ ಜಾರಿಗೆ ತರುವಂತಹ ತಯಾರಿ ನಡೆಯುತ್ತಿದೆ ಎಂಬುದಾಗಿ ಹೇಳಲಾಗುತ್ತಿದೆ.

ಇನ್ನೊಂದು ಕಡೆಯಲ್ಲಿ ನೋಡಿದ್ರೆ ಇದೇ ಸಂದರ್ಭದಲ್ಲಿ ಅಧಿಕೃತವಾಗಿ ಚಾಲನೆ ಆಗಿ ಎಲ್ಲಾ ಜಿಲ್ಲೆಗಳಿಗೂ ಕೂಡ ಈ ಯೋಜನೆ ಅಧಿಕೃತವಾಗಿ ಅರ್ಜಿ ಸಲ್ಲಿಸಿದವರಿಗೆ ಅನ್ವಯ ಆಗುತ್ತದೆ ಎಂಬುದಾಗಿ ಹೇಳಲಾಗುತ್ತಿದೆ. ಒಂದು ವೇಳೆ ಕೇಳಿ ಬರುತ್ತಿರುವಂತಹ ಸುದ್ದಿಯ ಪ್ರಕಾರ ನಾಲ್ಕು ಜಿಲ್ಲೆಗಳಿಗೆ ಪ್ರಥಮವಾಗಿ ಪ್ರಾರಂಭವಾದರೂ ಕೂಡ ಉಳಿದ ಜಿಲ್ಲೆಗಳಿಗೆ ಜಾರಿಯಾಗುವುದಕ್ಕೆ ಹೆಚ್ಚಿನ ಸಮಯಗಳನ್ನು ತೆಗೆದುಕೊಳ್ಳುವುದಿಲ್ಲ ಎನ್ನುವುದು ಕೂಡ ಕನ್ಫರ್ಮ್ ಆಗಿರುವಂತಹ ವಿಚಾರ.

ಇನ್ನು ಇದರಲ್ಲಿ ಪಿಂಕ್ ಸ್ಮಾರ್ಟ್ ಕಾರ್ಡ್(Pink Smart Card) ಬಗ್ಗೆ ಕೂಡ ಹೇಳಲಾಗಿದ್ದು ಇದರಲ್ಲಿ ಇರುವಂತಹ QR Code Scan ಮಾಡೋ ಮೂಲಕ ನೀವು ಪ್ರತಿ ತಿಂಗಳ ನಿಮಗೆ ಹಣ ಸಿಗುವಂತಹ ವಿಚಾರದ ಅಪ್ಡೇಟ್ ಅನ್ನು ನೀವು ಅದರ ಮೂಲಕ ಪಡೆದುಕೊಳ್ಳಬಹುದಾಗಿದೆ ಎಂಬುದನ್ನು ಸರ್ಕಾರದ ಮೂಲಗಳು ತಿಳಿಸಿವೆ. ಇನ್ನು ಈ ಪಿಂಕ್ ಸ್ಮಾರ್ಟ್ ಕಾರ್ಡ್ ಅನ್ನು ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದಾಗಿ ಯಾರೆಲ್ಲ ಅರ್ಜಿ ಸಲ್ಲಿಸಿದ್ದರು ಅವರಿಗೆ ಆಗಸ್ಟ್ 30 ರಿಂದಲೆ ಪ್ರಾರಂಭವಾಗಿ ಮನೆಮನೆಗೆ ಹೋಗಿ ನೀಡುವಂತಹ ಕೆಲಸವನ್ನು ಕೂಡ ಮಾಡಲಾಗುತ್ತದೆ ಎಂಬುದಾಗಿ ಮೂಲಗಳು ತಿಳಿಸಿವೆ.

8147500500 ನಂಬರ್ ಗೆ ನಿಮ್ಮ ರೇಷನ್ ಕಾರ್ಡ್ ನಂಬರ್(Ration Card Nunber) ಅನ್ನು ಮೆಸೇಜ್ ಮಾಡಬೇಕಾಗುತ್ತದೆ. ಇಲ್ಲಿ ಒಂದು ವೇಳೆ ನಿಮ್ಮ ಅರ್ಜಿ ಯಶಸ್ವಿಯಾಗಿದ್ದರೆ ನಿಮಗೆ ಬರುವಂತಹ ಗೃಹಲಕ್ಷ್ಮಿ ಯೋಜನೆ ಹಣದ ಮಾಹಿತಿಯನ್ನು ಅಲ್ಲಿ ನೀಡಲಾಗುತ್ತದೆ. ಇಲ್ಲವಾದಲ್ಲಿ ನೀವು ಇದೇ ನಂಬರಿಗೆ ಮತ್ತೆ ಮತ್ತೆ ಮೆಸೇಜ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ನಿಮ್ಮ ಅರ್ಜಿ ಯಶಸ್ವಿ ಆಗುವವರೆಗೂ ಕೂಡ ನೀವು ಯಾವುದೇ ಲಿಮಿಟ್ ಇಲ್ಲದೆ ಈ ನಂಬರಿಗೆ ಮೆಸೇಜ್ ಮಾಡಬಹುದಾಗಿದೆ. ಈ ಮೂಲಕ ನೀವು ಆಗಸ್ಟ್ 30 ರಿಂದ ಅಧಿಕೃತವಾಗಿ ಪ್ರಾರಂಭವಾಗಲಿರುವಂತಹ ಗೃಹಲಕ್ಷ್ಮಿ ಯೋಜನೆ ಹಣವನ್ನು ಈಗಾಗಲೇ ರಿಜಿಸ್ಟರ್ ಮಾಡಿಕೊಂಡು ಯಶಸ್ವಿಯಾಗಿರುವಂತಹ ಮಹಿಳೆಯರು ಅಂದರೆ ಮನೆಯ ಒಡತಿ ಪ್ರತಿ ತಿಂಗಳು 2000 ಹಣವನ್ನು ಪಡೆದುಕೊಳ್ಳಲಿದ್ದಾರೆ.
Clutch Tips: ವಾಹನ ಓಡಿಸುವಾಗ ಮದ್ಯದಲ್ಲಿ ಕ್ಲಚ್ ಒತ್ತಿ ಗೇರು ಬದಲಾಯಿಸಬೇಕಾ? 90 % ಚಾಲಕರು ಮಾಡುವ ತಪ್ಪನ್ನು ನೀವು ಮಾಡಬೇಡಿ.
Monsoon Car Care Tips: ಮಳೆಗಾಲದಲ್ಲಿ ನಿಮ್ಮ ಎಲೆಕ್ಟ್ರಿಕ್ ವಾಹನಗಳನ್ನು ರಕ್ಷಿಸಲು ಈ ಟ್ರಿಕ್ ಬಳಸಿ- ಮೆಕ್ಯಾನಿಕ್ ಬಳಿ ಹೋಗುವ ಅಗತ್ಯ ಇರಲ್ಲ.

Comments are closed.