Kannada News: ಯಾಮಾರಿ, ಎರಡು ವರ್ಷದ ಮಗುವಿನ ಪ್ರಾಣ ತೆಗೆದ ಐಷಾರಾಮಿ ಕಾರು – ಇದರಲ್ಲಿ ತಪ್ಪು ಯಾರದ್ದು ಎಂಬುದೇ ದೊಡ್ಡ ಚರ್ಚೆ. ದೇವರೇ ಇನ್ನು ಏನೇನು ನೋಡಬೇಕೋ??
Kannada News: ರಸ್ತೆಗಳು ಚಿಕ್ಕದಾಗಿದ್ದು, ಅವುಗಳ ನಡುಗೆ ಗುಂಡಿಗಳು ಇದ್ದದೆ ಬೈಕ್ ಗಳು ಅಲ್ಲಿ ನುಗ್ಗುತ್ತವೆ, ವಾಹನಗಳನ್ನು ಓಡಿಸುವವರು ಚಿಕ್ಕ ಸಂದಿಗಳನ್ನು ಸರಿಯಾಗಿ ನೋಡುವುದಿಲ್ಲ. ಬೈಕ್ ಮತ್ತು ಕಾರ್ ಗಳನ್ನು ಹೊಂದಿರುವವರು ತಮ್ಮ ಮನೆಗಳವರೆಗೂ ಗಾಡಿ ಓಡಿಸಿಕೊಂಡೇ ಹೋಗುತ್ತಾರೆ. ಜನರು ಹೆಚ್ಚು ಓಡಾಡದ ರಸ್ತೆಗಳಲ್ಲಿ ಇದೆಲ್ಲಾ ನಡೆದರೆ ಪರವಾಗಿಲ್ಲ. ಆದರೆ ಜನರು ಹೆಚ್ಚು ಓಡಾಡುವ, ಶಾಲೆಗಳು ಇರುವ ಕಡೆಗಳಲ್ಲಿ ಈ ರೀತಿ ವಾಹನ ಸಂಚಾರ ನಡೆದರೆ, ಅದರಿಂದ ಎಲ್ಲರಿಗೂ ತೊಂದರೆ ಆಗುತ್ತದೆ.
ಟ್ರಾಫಿಕ್ ಜಾಮ್ ಹೆಚ್ಚಾಗುವ ಸಂಭವ ಕೂಡ ಇದೆ. ಕೆಲವರು ಟ್ರಾಫಿಕ್ ರೂಲ್ಸ್ ಪಾಲಿಸುವುದಿಲ್ಲ, ನೋ ಪಾರ್ಕಿಂಗ್ ನಲ್ಲಿ ಗಾಡಿ ನಿಲ್ಲಸುತ್ತಾರೆ. ಕಾರ್ ಡೋರ್ ತೆಗೆಯುವಾಗ ಹಿಂದೆ ಯಾರಾದರೂ ಇದ್ದಾರಾ ಅಥವಾ ಯಾರಾದರೂ ಬರುತ್ತಿದ್ದಾರಾ ಎನ್ನುವುದನ್ನು ಕೂಡ ಜನರು ಸರಿಯಾಗಿ ನೋಡುವುದಿಲ್ಲ, ಹಾಗೆ ಡೋರ್ ತೆಗೆದಾಗ ಮತ್ತೊಬ್ಬ ವ್ಯಕ್ತಿಗೆ ತೊಂದರೆ ಆಗುವ ಸಂಭವ ಹೆಚ್ಚು. ಹೀಗೆ ನಡೆಯುವುದರಿಂದ ಅಪಘಾತಗಳು ಕೂಡ ಸಂಭವಿಸುತ್ತದೆ. ಇಂಥದ್ದೊಂದು ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಇದನ್ನು ಓದಿ..News: ನೋಡಲು ಅಪ್ಪಟ ಸುಂದರಿ, ಓದಿನಲ್ಲಿ ಇವಳೇ ಟಾಪ್- ಹುಡುಗರನ್ನು ತಲೆ ಎತ್ತು ನೋಡುತ್ತಿರಲಿಲ್ಲ, ಆದರೆ ರಾತ್ರೋ ರಾತ್ರಿ ಏನಾಗಿದೆ ಗೊತ್ತೇ??
ಹೈದರಾಬಾದ್ ನ LB ನಗರದ ಪ್ರದೇಶದಲ್ಲಿ ಒಂದು ದುರಂತ ನಡೆದಿದೆ, ಒಬ್ಬ ವ್ಯಕ್ತಿಯ ಕೇರ್ ಲೆಸ್ ನೆಸ್ ಎರಡು ಜೀವ ಇನ್ನಿಲ್ಲವಾಗುವ ಹಾಗೆ ಮಾಡಿದೆ. ಎರಡು ವರ್ಷದ ಪುಟ್ಟ ಮಗು ಮೃತವಾಗಿದ್ದು, ಮಗುವಿನ ತಾಯಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಮನ್ಸೂರಾಬಾದ್ ಇಂದ Lb ನಗರಕ್ಕೆ ಹೋಗುವ ದಾರಿಯಲ್ಲಿ ಒಂದು ಕಾರ್ ನಿಂತಿತ್ತು, ಒಳಗಿದ್ದ ಒಬ್ಬರು ಕಾರ್ ಇಂದ ಇಳಿದು ಹೋಗಿದ್ದಾರೆ. ಡ್ರೈವರ್ ಸೀಟ್ ನಲ್ಲಿದ್ದ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಕಾರ್ ಡೋರ್ ತೆಗೆದಿದ್ದು, ಕಾರ್ ಡೋರ್ ಪಕ್ಕದಲ್ಲಿ ಹೋಗುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದಿದೆ.
ಬೈಕ್ ನಲ್ಲಿದ್ದ ಮೂವರು ಇದರಿಂದ ಕೆಳಗೆ ಬಿದ್ದಿದ್ದಾರೆ. ಎರಡು ವರ್ಷದ ಮಗು ಧನಲಕ್ಷ್ಮೀ ಸ್ಥಳದಲ್ಲೇ ಮೃತವಾಗಿದೆ, ತಾಯಿ ಶಶಿರೇಖಾ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ತಂದೆ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ರೀತಿ ಮಾಡಿದ ಡ್ರೈವರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಇಲ್ಲಿ ತಪ್ಪು ಯಾರದ್ದು ಎಂದು ನೋಡುವುದಾದರೆ ಕೆಲವರು ಡ್ರೈವರ್ ದೆ ತಪ್ಪು ಎನ್ನುತ್ತಿದ್ದರೆ ಇನ್ನು ಕೆಲವರು ವಾಹನಗಳು ಇರುವ ಕಡೆ ಬೈಕ್ ಓಡಿಸುವಾಗ ಹುಷಾರಾಗಿರಬೇಕು ಎಂದು ಇನ್ನು ಕೆಲವರು ವಿತಂಡ ವಾದ ಮಾಡಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಶುರು ಮಾಡಿದ್ದಾರೆ. ಇದನ್ನು ಓದಿ..UPI Payment: ಹೆಚ್ಚಿನ ಚಿಂತೆ ಬೇಡ- ನಿಮ್ಮ ಯುಪಿಐ ಪೇಮೆಂಟ್ ವಿಫಲವಾದರೆ ಏನು ಮಾಡಬೇಕು ಗೊತ್ತೆ?? ಏನೆಲ್ಲಾ ಮಾಡಬಹುದು ಗೊತ್ತೇ??
Comments are closed.