Yuva Nidhi Scheme: ಬರುತ್ತಿದೆ ಹೊಸ ಗ್ಯಾರಂಟಿ-ಹೊಸ ಮಾರ್ಗಸೂಚಿ. ಈಗಲೇ ಸಿದ್ಧಪಡಿಸಿಕೊಳ್ಳಿ, ನಿಮಗೂ ಸಿಗಲಿದೆ 3000.
Karnataka Yuva Nidhi Scheme ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುಂಚೆ ಕೆಲವೊಂದು ಪ್ರಮುಖ ಯೋಜನೆಗಳನ್ನು ತನ್ನ ಮ್ಯಾನಿಫೆಸ್ಟ್ ನಲ್ಲಿ ಹೇಳಿಕೊಂಡಿತ್ತು. ಅವುಗಳಲ್ಲಿ ಉದ್ಯೋಗ ಇಲ್ಲದೆ ಮನೆಯಲ್ಲಿ ಕುಳಿತುಕೊಂಡಿರುವಂತಹ ಪದವಿಯನ್ನು ಹೊಂದಿರುವಂತಹ ವಿದ್ಯಾರ್ಥಿಗಳಿಗೆ ನೀಡುವ ಸಹಾಯಧನ ಕೂಡ ಒಂದಾಗಿತ್ತು.
ಇದಕ್ಕೆ ರಾಜ್ಯ ಸರ್ಕಾರ ಯುವ ನಿಧಿ(Yuva Nidhi Scheme) ಎನ್ನುವಂತಹ ಹೆಸರನ್ನು ಕೂಡ ನೀಡಿದೆ. ಇವತ್ತಿನ ಈ ಲೇಖನಿಯಲ್ಲಿ ನಾವು ನಿಮಗೆ ಯುವನಿಧಿ ಯೋಜನೆಯಲ್ಲಿ ನೋಂದಾಯಿಸಿಕೊಳ್ಳುವುದು ಹಾಗೂ ಅದರ ಪ್ರಯೋಜನಗಳನ್ನು ಪಡೆದುಕೊಳ್ಳುವ ರೀತಿ ಹಾಗೂ ನಿಯಮಗಳು ಯಾವ ರೀತಿ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.
Karnataka Yuva Nidhi Scheme 2023 eligibility, benefits and important dates explained in Kannada
ರಾಜ್ಯದ ಯುವಕರಿಗೆ ಆರ್ಥಿಕ ಭದ್ರತೆಯನ್ನು ನೀಡುವ ಕಾರಣದಿಂದಾಗಿ ಯುವ ನಿಧಿ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ. ಮಾಸಿಕ ರೂಪದಲ್ಲಿ ಈ ಹಣವನ್ನು ಡಿಬಿಟಿ ಮೂಲಕ ಪಡೆದುಕೊಳ್ಳಲಿದ್ದಾರೆ. ಕೇಳಿ ಬಂದಿರುವ ಲೇಟೆಸ್ಟ್ ಮಾಹಿತಿಯ ಪ್ರಕಾರ ಯುವನಿಧಿ ಯೋಜನೆ ಡಿಸೆಂಬರ್ ಅಥವಾ ಮುಂದಿನ ವರ್ಷದ ಜನವರಿ ತಿಂಗಳಲ್ಲಿ ಆರಂಭವಾಗಬಹುದು ಎನ್ನುವ ಸುದ್ದಿ ಇದೆ.
ನಿಮ್ಮ ಜಮೀನಿನಲ್ಲಿ ಉಚಿತ ಬೋರ್ವೆಲ್ ಪಡೆಯುವ ಯೋಜನೆ – ಅರ್ಜಿ ಸಲ್ಲಿಸಿ ಬೋರ್ವೆಲ್ ಗೆ ಹಣ ಪಡೆಯಿರಿ – Karnataka Ganga Kalyana Scheme 2023
ಈ ಯೋಜನೆಯ ಪ್ರಮುಖ ಉದ್ದೇಶ ವಿದ್ಯಾವಂತರಾಗಿರುವಂತಹ ನಿರುದ್ಯೋಗಿಗಳಿಗೆ ಆರ್ಥಿಕ ಭರವಸೆಯನ್ನು ನೀಡುವಂತಹ ಉದ್ದೇಶ. ನಿರುದ್ಯೋಗಿ ಡಿಪ್ಲೋಮಾ ವಿದ್ಯಾರ್ಥಿಗಳಿಗೆ(Diploma Students) ಪ್ರತಿ ತಿಂಗಳಿಗೆ 1500 ರೂಪಾಯಿಗಳನ್ನು ಹಾಗೂ ಪದವಿಯನ್ನು ಹೊಂದಿರುವವರು ಈ ಯೋಜನೆಯಲ್ಲಿ ಫಲಾನುಭವಿಗಳಾದ ನಂತರ ಆರು ತಿಂಗಳವರೆಗೆ ಪ್ರತಿ ತಿಂಗಳು 3000 ರೂಪಾಯಿ ಹಣವನ್ನು ಪಡೆದುಕೊಳ್ಳಬಹುದಾಗಿದೆ. ವಿದ್ಯಾವಂತರಾಗಿರುವಂತಹ ನಿರುದ್ಯೋಗಿಗಳು ತಮ್ಮ ಕುಟುಂಬದ ಖರ್ಚಿಗಾಗಿ ಅಥವಾ ತಮ್ಮ ಖರ್ಚಿಗಾಗಿ ಬೇರೆಯವರನ್ನು ಅವಲಂಬಿಸುವ ಅಗತ್ಯವನ್ನು ಈ ಮೂಲಕ ಹೊಂದಬಾರದು ಎನ್ನುವುದು ರಾಜ್ಯ ಸರ್ಕಾರದ ಗುರಿಯಾಗಿದೆ.
ಕರ್ನಾಟಕ ಯುವ ನಿಧಿ ಯೋಜನೆಯ ಪ್ರಯೋಜನಗಳು(Benefits of Karnataka Yuva nidhi Scheme) ಕೂಡ ನೀವು ತಿಳಿದುಕೊಳ್ಳಬೇಕಾಗಿರುವ ಪ್ರಮುಖ ವಿಚಾರವಾಗಿದ್ದು ಬನ್ನಿ ಅದನ್ನು ಕೂಡ ತಿಳಿಯೋಣ. ಡಿಪ್ಲೋಮಾ ಹಾಗೂ ಪದವಿದರ ವಿದ್ಯಾರ್ಥಿಗಳು ಅವರಿಗೆ ನಿರ್ಧರಿಸಲಾಗಿರುವಂತಹ ನಿರ್ದಿಷ್ಟ ಸಹಾಯಧನವನ್ನು ಅವರು ನೇರವಾಗಿ ಸರ್ಕಾರದಿಂದ ತಮ್ಮ ಖಾತೆಗೆ ಪಡೆದುಕೊಳ್ಳಲಿದ್ದಾರೆ.
ಯುವಕರು ಉದ್ಯೋಗವನ್ನು ಪಡೆದುಕೊಳ್ಳುವವರೆಗೂ ಕೂಡ ಈ ಯೋಜನೆಯ (Yuva Nidhi Scheme) ಫಲಾನುಭವಿಗಳಾಗಿ ಆರ್ಥಿಕ ದೃಢತೆಯನ್ನು ಪಡೆದುಕೊಳ್ಳಲಿದ್ದಾರೆ. ಈ ಯೋಜನೆಗೆ ಅರ್ಹರಾಗಿರುವಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲವನ್ನು ನೀಡುವುದು ಹಾಗೂ ರಾಜ್ಯದಲ್ಲಿ ನಿರುದ್ಯೋಗಿ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವವರ ಸಂಖ್ಯೆಯನ್ನು ಕಡಿಮೆ ಮಾಡುವುದು ಕೂಡ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಕರ್ನಾಟಕ ಯುವನಿಧಿ ಯೋಜನೆಯಲ್ಲಿ ಆ ವ್ಯಕ್ತಿ ಫಲಾನುಭವಿಯಾಗಲು ಏನೆಲ್ಲಾ ಹೊಂದಿರಬೇಕು ಎನ್ನುವುದನ್ನು ಕೂಡ ನೀವು ತಿಳಿದುಕೊಳ್ಳಬೇಕಾಗಿರುವುದು ಪ್ರಮುಖವಾಗಿದ್ದು ಮೊದಲಿಗೆ ಆತ ಕರ್ನಾಟಕದ ವ್ಯಕ್ತಿ ಆಗಿರ್ಬೇಕು. ಪದವಿ ಅಥವಾ ಡಿಪ್ಲೋಮೋವನ್ನು(Diploma) ಮಾಡಿರಬೇಕು. ಈ ರೀತಿಯ ಬೇರೆ ಯಾವುದೇ ಯೋಜನೆಯಲ್ಲಿ ಪಾಲನ್ನು ಹೊಂದಿರಬಾರದು.
ಎರ್ಟಿಗಾ (Ertiga) ಮೀರಿಸುವಂತಹ ಕಾರು ಬಿಡುಗಡೆಗೆ ತಯಾರಾದ ಇನೋವಾ- ಅದು ಕಡಿಮೆ ಬೆಲೆ ಹೆಚ್ಚಿನ ವಿಶೇಷತೆ. –> Toyota Rumion
ಎಲ್ಲಕ್ಕಿಂತ ಪ್ರಮುಖವಾಗಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್(Aadhar Card Link To Bank Account) ಆಗಿರಬೇಕು ಇಲ್ಲವಾದಲ್ಲಿ ಹಣ ವರ್ಗಾವಣೆ ಮಾಡಲು ಸಾಧ್ಯವಿರುವುದಿಲ್ಲ. ಬೇಕಾಗಿರುವ ಅಗತ್ಯ ದಾಖಲೆ ಪತ್ರಗಳು ಆಧಾರ್ ಕಾರ್ಡ್, ಪರ್ಮನೆಂಟ್ ಸರ್ಟಿಫಿಕೇಟ್, ಇನ್ಕಮ್ ಸರ್ಟಿಫಿಕೆಟ್, ನಿಮ್ಮ ಶೈಕ್ಷಣಿಕ ಅರ್ಹತೆಯ ದಾಖಲೆ ಪತ್ರಗಳು, ಬ್ಯಾಂಕ್ ಅಕೌಂಟ್, ಪಾಸ್ಪೋರ್ಟ್ ಸೈಜ್ ಫೋಟೋ ಹಾಗೂ ಫೋನ್ ನಂಬರ್.
ಎಲ್ಲಕ್ಕಿಂತ ಪ್ರಮುಖವಾಗಿ ಎಲ್ಲರೂ ಕೇಳುವಂತಹ ಪ್ರಮುಖ ಪ್ರಶ್ನೆ ಏನೆಂದರೆ, ಕರ್ನಾಟಕ ಯುವ ನಿಧಿ ಯೋಜನೆಯ ಅರ್ಜಿ ಸಲ್ಲಿಕೆಯ ದಿನಾಂಕ ಯಾವಾಗ ಹಾಗೂ ಯಾವಾಗ ಪ್ರಾರಂಭಿಸಬಹುದಾಗಿದೆ ಎನ್ನುವುದು. ಸರ್ಕಾರ ಅಧಿಕೃತವಾಗಿ ಇನ್ನೂ ಕೂಡ ಅರ್ಜಿಯ ಸಲ್ಲಿಕೆಯ ದಿನಾಂಕವನ್ನು ಪ್ರಾರಂಭ ಮಾಡಿಲ್ಲ ಹೀಗಾಗಿ ವಿದ್ಯಾರ್ಥಿಗಳು ಸ್ವಲ್ಪ ಸಮಯಗಳ ಕಾಲ ಇದಕ್ಕಾಗಿ ಕಾಯಬೇಕಾಗಿರುತ್ತದೆ ಆದರೆ ಡಿಸೆಂಬರ್ ಹಾಗೂ ಜನವರಿಯ ಒಳಗಾಗಿ ಖಂಡಿತವಾಗಿ ಈ ಯೋಜನೆ ಪ್ರಾರಂಭವಾಗುತ್ತದೆ ಎನ್ನುವುದು ಅಧಿಕೃತ ಮೂಲಗಳು ತಿಳಿಸಿರುವ ಮಾಹಿತಿಯಾಗಿದೆ.
ಬಾರಿ ಮಾರಾಟವಾಗುತ್ತಿರುವ Swift ಕಾರಿಗೆ ಬಾರಿ ಪೈಪೋಟಿ- ಬೆಲೆ ಕೂಡ ಕಡಿಮೆ, ವಿಶೇಷತೆ ಹೆಚ್ಚು. ->Hyundai Grand i10 NIOS
Comments are closed.