Metro Jobs: ಹತ್ತನೇ ತರಗತಿ ಪಾಸ್ ಆಗಿದ್ದರೂ ಸಾಕು, ಮೆಟ್ರೋ ಟ್ರೈನ್ ಓಡಿಸಲು ಅರ್ಜಿ ಹಾಕಿ- 82000 ಸಾವಿರ, ಟ್ರೈನಿಂಗ್ ಅವರೇ ಕೊಡುತ್ತಾರೆ.

Metro Jobs: ಬೆಂಗಳೂರಿನ ಮೆಟ್ರೋದಲ್ಲಿ ಕೆಲಸ ಸಿಕ್ಕರೆ, ಲೈಫ್ ಸೆಟಲ್ಡ್ ಎಂದು ಅಂದುಕೊಳ್ಳಬಹುದು. ಇದೀಗ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಲ್ಲಿ ಖಾಲಿ ಇರುವ ಕೆಲಸಗಳನ್ನು ಭರ್ತಿ ಮಾಡಲು ಆದೇಶ ನೀಡಲಾಗಿದೆ. ಈ ಕೆಲಸಕ್ಕೆ ಅಪ್ಲೈ ಮಾಡುವುದಕ್ಕೆ ಇಂದು ಕೊನೆಯ ದಿನ ಆಗಿದೆ. 96 ಸ್ಟೇಶನ್ ಕಂಟ್ರೋಲರ್/ಟ್ರೈನ್ ಆಪರೇಟರ್ ಹುದ್ದೆಗಳು ಈಗ ಖಾಲಿ ಇದ್ದು, ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮತ್ತು ಆಫ್ಲೈನ್ ಎರಡು ರೀತಿಗಳಲ್ಲಿ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನಾಂಕ ಆಗಿದೆ.

metro jobs for sslc diploma students | Metro Jobs: ಹತ್ತನೇ ತರಗತಿ ಪಾಸ್ ಆಗಿದ್ದರೂ ಸಾಕು, ಮೆಟ್ರೋ ಟ್ರೈನ್ ಓಡಿಸಲು ಅರ್ಜಿ ಹಾಕಿ- 82000 ಸಾವಿರ, ಟ್ರೈನಿಂಗ್ ಅವರೇ ಕೊಡುತ್ತಾರೆ.
Metro Jobs: ಹತ್ತನೇ ತರಗತಿ ಪಾಸ್ ಆಗಿದ್ದರೂ ಸಾಕು, ಮೆಟ್ರೋ ಟ್ರೈನ್ ಓಡಿಸಲು ಅರ್ಜಿ ಹಾಕಿ- 82000 ಸಾವಿರ, ಟ್ರೈನಿಂಗ್ ಅವರೇ ಕೊಡುತ್ತಾರೆ. 2

ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಈ ಕೆಲಸದ ಬಗ್ಗೆ ಪೂರ್ತಿ ಮಾಹಿತಿ ಪಡೆಯಲು ಅಧಿಕೃತ ವೆಬ್ಸೈಟ್ bmrc.co.in ಗೆ ಭೇಟಿ ನೀಡಿ. ಕೆಲಸಕ್ಕೆ ಅಪ್ಲೈ ಮಾಡಲು ಬೇಕಿರುವ ಅರ್ಹತೆಗಳ ಬಗ್ಗೆ ಪೂರ್ತಿಯಾಗಿ ತಿಳಿಸುತ್ತೇವೆ.. ಈ ಕೆಲಸಕ್ಕೆ ವಿದ್ಯಾರ್ಹತೆ , ಮಾನ್ಯತೆ ಪಡೆದಿರುವ ಸಂಸ್ಥೆಯಿಂದ 10ನೇ ತರಗತಿ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಅಥವಾ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಅಥವಾ ಟೆಲಿಕಮ್ಯುನಿಕೇಷನ್ಸ್ ಅಥವಾ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ಅಥವಾ ಎಲೆಕ್ಟ್ರಿಕಲ್ ಪವರ್ ಸಿಸ್ಟಮ್ಸ್ ಅಥವಾ ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್ ಅಥವಾ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿರಬೇಕು. ಇದನ್ನು ಓದಿ..Business Idea: ಈ ವ್ಯಾಪಾರ ಮಾಡಿ ನೋಡಿ, ಲಾಸ್ ಆಗೋದೇ ಇಲ್ಲ, ಬೇಕಿದ್ದರೆ ಬರೆದು ಇಟ್ಕೊಳಿ. ಮಾಡಿದವರು ಶ್ರೀಮಂತರು ಆಗೋದು ಖಚಿತ.

ಈ ಕೆಲಸಕ್ಕೆ ಅಪ್ಲೈ ಮಾಡುವವರಿಗೆ ವಯೋಮಿತಿಯು ಅಧಿಸೂಚನೆಯ ಪ್ರಕಾರ 2023ರ ಮೇ 16ಕ್ಕೆ 45 ವರ್ಷಕ್ಕಿಂತ ಕಡಿಮೆ ಇರಬೇಕು. ಮೀಸಲಾತಿ ಇರುವ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಈ ಕೆಲಸಕ್ಕೆ ಸಿಗಬಹುದಾದ ತಿಂಗಳ ವೇತನ ₹35,000 ಇಂದ ₹82,660 ರೂಪಾಯಿ ವರೆಗು ಇರುತ್ತದೆ. ಈ ಕೆಲಸಕ್ಕೆ ಆಯ್ಕೆ ಆಗುವ ಎಲ್ಲಾ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ಕೊಡಲಾಗುತ್ತದೆ.

ಕೆಲಸಕ್ಕೆ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ, ಸೈಕೋಮೆಟ್ರಿಕ್ ಟೆಸ್ಟ್ , ಸ್ಕಿಲ್ ಟೆಸ್ಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಫ್ಪೈನ್ ಅರ್ಜಿ ಹಾಕುವವರು ಈ ಅಡ್ರೆಸ್ ಗೆ ಕಳಿಸಿ..
ಜನರಲ್ ಮ್ಯಾನೇಜರ್ (HR)
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್
III ಮಹಡಿ
BMTC ಕಾಂಪ್ಲೆಕ್ಸ್
K.H ರಸ್ತೆ
ಶಾಂತಿನಗರ
ಬೆಂಗಳೂರು – 560027
ಹೆಚ್ಚಿನ ಮಾಹಿತಿಗೆ [email protected] ಮೇಲ್ ಮಾಡಬಹುದು. ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನಾಂಕ ಆಗಿದೆ. ಇದನ್ನು ಓದಿ..Karnataka Free Pass: ಫ್ರೀ ಪಾಸ್ ಕೊಡಲು ಆಗಲ್ಲ ಎನ್ನುತ್ತಿರುವ ಸಾರಿಗೆ ಸಂಸ್ಥೆಗಳು. ಯಾಕೆ ಅಂತೇ ಗೊತ್ತೇ?? ಇವರ ಕಷ್ಟ ಕೇಳೋರು ಯಾರು? ಏನಾಗುತ್ತಿದೆ ಗೊತ್ತೇ?

Comments are closed.